ಪುತ್ತೂರಿನಲ್ಲಿ ಇಂದು ಮುಳಿಯಾ'ಸ್ ಟೈಮ್ ಝೋನ್ ಉದ್ಘಾಟನೆ

Upayuktha
0



ಪುತ್ತೂರು: ಆಭರಣ ರಂಗದಲ್ಲಿ ದಶಕಗಳ ನಂಬಿಕಸ್ಥ ಹೆಸರಾಗಿರುವ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆಯು ಇದೀಗ ಕೈಗಡಿಯಾರಗಳ ಪ್ರಿಯರಿಗಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಸಜ್ಜಾಗಿದೆ. ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಮುಳಿಯ ಮುಖ್ಯ ಮಳಿಗೆಯಲ್ಲಿ ನಾಳೆ (ಮೇ 28, ಗುರುವಾರ) ಬೆಳಿಗ್ಗೆ 11:00 ಗಂಟೆಗೆ "ಮುಳಿಯ'ಸ್ ಟೈಮ್ ಝೋನ್" (Muliya's Time Zone) ಹೆಸರಿನ ನೂತನ ಸ್ಮಾರ್ಟ್ ಮತ್ತು ಪ್ರೀಮಿಯಂ ವಾಚ್ ಕೌಂಟರ್ ಭವ್ಯವಾಗಿ ಉದ್ಘಾಟನೆಗೊಳ್ಳಲಿದೆ.


ಗ್ರಾಹಕರ ಆಧುನಿಕ ಜೀವನಶೈಲಿ ಮತ್ತು ಅಭಿರುಚಿಗೆ ತಕ್ಕಂತೆ ಅತ್ಯಾಧುನಿಕ ವಿನ್ಯಾಸದ ಕೈಗಡಿಯಾರಗಳನ್ನು ಒಂದೇ ಸೂರಿನಡಿ ಒದಗಿಸುವ ನಿಟ್ಟಿನಲ್ಲಿ ಈ ವಿಶೇಷ ವಿಭಾಗವನ್ನು ಆರಂಭಿಸಲಾಗುತ್ತಿದ್ದು, ನಾಳೆ ನಡೆಯಲಿರುವ ಇದರ ಉದ್ಘಾಟನಾ ಸಮಾರಂಭಕ್ಕೆ ಪುತ್ತೂರಿನ ಪ್ರಮುಖ ಗಣ್ಯರು ಸಾಕ್ಷಿಯಾಗಲಿದ್ದಾರೆ. ಪುತ್ತೂರು ಕೋಟಿಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷರಾದ ಶ್ರೀ ಚಂದ್ರಹಾಸ ಶೆಟ್ಟಿ ಹಾಗೂ ಪುತ್ತೂರು ಮಹಾವೀರ ಮೆಡಿಕಲ್ ಸೆಂಟರ್‌ನ ನೇತ್ರ ತಜ್ಞರಾದ ಡಾ. ಆಶಾ ಪುತ್ತೂರಾಯ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ನೂತನ ವಾಚ್ ಕೌಂಟರ್ ಅನ್ನು ಉದ್ಘಾಟಿಸಲಿದ್ದಾರೆ.


ಹೊಸದಾಗಿ ಸಾರ್ವಜನಿಕರ ಸೇವೆಗೆ ಮುಕ್ತವಾಗಲಿರುವ ಈ ವಿಭಾಗದಲ್ಲಿ ಜಾಗತಿಕವಾಗಿ ಮನ್ನಣೆ ಪಡೆದಿರುವ ಟೈಟಾನ್ (Titan), ಸೊನಾಟಾ (Sonata), ಫಾಸ್ಟ್‌ಟ್ರಾಕ್ (Fastrack) ಮತ್ತು ಮಕ್ಕಳ ನೆಚ್ಚಿನ ಬ್ರ್ಯಾಂಡ್ ಆದ ಝೂಪ್ (Zoop) ಸಂಸ್ಥೆಗಳ ವೈವಿಧ್ಯಮಯ ಸ್ಮಾರ್ಟ್ ಹಾಗೂ ಪ್ರೀಮಿಯಂ ಕೈಗಡಿಯಾರಗಳ ಬೃಹತ್ ಸಂಗ್ರಹವೇ ಇರಲಿದೆ. ಯುವ ಪೀಳಿಗೆಯನ್ನು ಆಕರ್ಷಿಸುವ ಸ್ಮಾರ್ಟ್ ವಾಚ್‌ಗಳಿಂದ ಹಿಡಿದು ಸಾಂಪ್ರದಾಯಿಕ ಹಾಗೂ ಐಷಾರಾಮಿ ಶೈಲಿಯ ವಾಚ್‌ಗಳು ಇಲ್ಲಿ ಲಭ್ಯವಿರಲಿವೆ ಎಂದು ಸಂಸ್ಥೆ ತಿಳಿಸಿದೆ.


ಈ ಸುಂದರ ಸುಸಂದರ್ಭಕ್ಕೆ ಪುತ್ತೂರು ಹಾಗೂ ಆಸುಪಾಸಿನ ಗ್ರಾಹಕ ಬಂಧುಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಮುಳಿಯ ಗೋಲ್ಡ್ & ಡೈಮಂಡ್ಸ್ ಸಂಸ್ಥೆಯ ಮ್ಯಾನೇಜ್ಮೆಂಟ್, ಸಿಬ್ಬಂದಿ ವರ್ಗ ಹಾಗೂ ಮಾರ್ಕೆಟಿಂಗ್ ವಿಭಾಗದ ಜಯಂತ ಬಿ.ಎನ್. ಅವರು ಪ್ರಕಟಣೆಯಲ್ಲಿ ಆತ್ಮೀಯವಾಗಿ ಆಹ್ವಾನಿಸಿದ್ದಾರೆ. ಗ್ರಾಹಕರು ಹೆಚ್ಚಿನ ವಿವರಗಳಿಗಾಗಿ 9379202916 ಅಥವಾ 98446 02916 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top