ಹಿಂದೆಲ್ಲಾ ಮದುವೆ ಮನೆ ಎಂದರೆ ಎಂಥಹ ಶೋಭೆಯಿರುತಿತ್ತು. ನೈಸರ್ಗಿಕ ಸಿರಿಗಳಾದ ತೆಂಗು, ಬಾಳೆ, ಅಡಿಕೆ, ಮಾವು ಹಿತ್ತಲಲ್ಲಿ ಬಿಡುವ ಹೂಗಳಿಂದ ಮದುವೆ ಮನೆ ಅಲಂಕೃತವಾಗಿರುತ್ತಿತ್ತು. ಈಗ ಶಾಸ್ತ್ರಕೊಂದು ಮಾವಿನ ತೋರಣ. ಎಲ್ಲವೂ ಪ್ಲಾಸ್ಟಿಕ್ ಮಯ.
ಇತ್ತೀಚೆಗೆ ನಮ್ಮ ಕುಟುಂಬದ ಮದುವೆಗೆ ಹೋದಾಗ ಪ್ರವೇಶದ್ವಾರದಲ್ಲಿಟ್ಟ ತೆಂಗಿನಗರಿಯಿಂದ ಹೆಣೆದ ಹೂವಿನ ಬುಟ್ಟಿ ನೋಡಿ ತುಂಬಾ ಖುಷಿಯಾಯಿತು. ಹಸಿಯಾದ ಗರಿಯಿಂದ ನೇಯ್ದ ನೈಪುಣ್ಯ ಮೆಚ್ಚುವಂತಿತ್ತು. ಜೊತೆಯಲ್ಲಿಟ್ಟ ಅರಿಶಿನ ಕುಂಕುಮ ಬುಟ್ಟಿಗೆ ಇನ್ನಷ್ಟು ಮೆರಗು ತಂದಿತ್ತು. ತಂಪಾದ ಅನುಭವ ನೀಡುವ ಸೋಗೆ ತೆಂಗಿನ ಚಪ್ಪರವಂತೂ ಬಹಳಾನೇ ಅಪರೂಪ.
ಗ್ರಾಮೀಣ ಸೊಗಡಿನ ಬಗ್ಗೆ ಜನರಿಗೆ ಅನಾಸಕ್ತಿ, ವ್ಯವಧಾನ ಇಲ್ಲದಿರುವದು ಒಂದಷ್ಟು ಅನಾನುಕೂಲ ಹೀಗೇ ಎಲ್ಲದರಿಂದ ಎಲ್ಲವೂ ಪ್ಲಾಸ್ಟಿಕ್ ಪರಿಕರಗಳೇ ಆಗಿವೆ. ಸಹಜ ಪರಿಕರಗಳ ಸರಳ ಅಲಂಕಾರ ಆರೋಗ್ಯ, ಮನಸ್ಸು, ವೆಚ್ಚಕ್ಕೂ ಹಿತ. ಅರ್ಧ ನೀರು ತುಂಬಿ ವ್ಯರ್ಥವಾಗುವ ಪ್ಲಾಸ್ಟಿಕ್ ಬಾಟ್ಲಿ ಗಳು ಲೋಟಗಳನ್ನು ಆದಷ್ಟು ಕಡಿಮೆ ಬಳಸುವ ನಿಟ್ಟಿನಲ್ಲಿ ನಾವು ಯೋಚಿಸಬೇಕಾಗಿದೆ.ಇತ್ತೀಚಿನ ಮದುವೆಗಳು ಯಾಕೋ ತುಂಬಾ ಬೋರ್ ಎನಿಸುತ್ತಿವೆ. ಏನೇ ಇರಲಿ ಹೇಗೇ ಇರಲಿ ಆದರಿಸುವಲ್ಲಿ ಆದರಾತಿತ್ಯದಲ್ಲಿ ಸುಂದರ ಭಾವವಿರಲಿ.
ತಾರಾ ಹೆಗಡೆ ಸಿರಸಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


