ಕಲಬುರಗಿ- ಬೆಂಗಳೂರು ನಡುವೆ ಜೂ. 10 ರಿಂದ ವಿಮಾನ ಸಂಚಾರ: ಡಾ. ಉಮೇಶ್ ಜಾಧವ್ ಹರ್ಷ

Upayuktha
0

ಉಡಾನ್ ಯೋಜನೆಯಡಿ ಕಲಬುರಗಿ ವಿಮಾನ ನಿಲ್ದಾಣ ಸೇರ್ಪಡೆಗೆ ಯತ್ನ

 


ಕಲಬುರಗಿ: ಬಹುನಿರೀಕ್ಷಿತ ಕಲಬುರಗಿ- ಬೆಂಗಳೂರು ನಡುವೆ ಜೂನ್ 10 ರಿಂದ ವಿಮಾನ ಸಂಚಾರ ಪ್ರಾರಂಭವಾಗಲಿದ್ದು ಪ್ರಯಾಣಿಕರಿಗೆ ಅನುಕೂಲಕರವಾಗಲಿದೆ ಎಂದು ಮಾಜಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಹರ್ಷ ವ್ಯಕ್ತಪಡಿಸಿದ್ದಾರೆ.

 

ಕಲಬುರಗಿ ಮತ್ತು ಬೆಂಗಳೂರು ನಡುವೆ ಜೂನ್ 10 ರಿಂದ ಸ್ಟಾರ್ ಏರ್ ಲೈನ್ಸ್ ವಿಮಾನ ಸಂಜೆ 6 ಗಂಟೆಗೆ ಬೆಂಗಳೂರಿನಿಂದ ಹೊರಟು ಕಲಬುರಗಿಗೆ ಸಂಜೆ 7:10 ಗಂಟೆಗೆ ಆಗಮಿಸಲಿದ್ದು ಮತ್ತು ಕಲಬುರಗಿಯಿಂದ ಸಂಜೆ 7:40ಕ್ಕೆ ತೆರಳಿದ್ದು ಬೆಂಗಳೂರಿಗೆ 8:50ಕ್ಕೆ ತಲುಪಲಿದೆ. ಸದ್ಯ ದಿನಕ್ಕೆ ಒಂದು ಬಾರಿ ವಿಮಾನ ಸಂಚಾರ ಆರಂಭವಾಗಲಿದೆ ಎಂದು ಸ್ಟಾರ್ ಏರ್ಲೈನ್ಸ್ ಅಧಿಕಾರಿಗಳಿಂದ ಅಧಿಕೃತವಾಗಿ ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ಕಲಬುರಗಿ ಹಾಗೂ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸಲು ಇತರ ವಿಮಾನ ಕಂಪನಿಗಳ ಜೊತೆ ಮಾತುಕತೆ ಪ್ರಗತಿಯಲ್ಲಿದ್ದು ಹೆಚ್ಚಿನ ವಿಮಾನಗಳು ತನ್ನ ಸಂಚಾರವನ್ನು ಪ್ರಾರಂಭಿಸಲಿದೆ ಎಂದು ಜಾಧವ್ ಹೇಳಿದರು.

 

ಉಡಾನ್ ಯೋಜನೆಯಡಿ ಸೇರ್ಪಡೆಗೆ ಯತ್ನ:

 

ಕೇಂದ್ರ ಸರಕಾರ ಶೀಘ್ರದಲ್ಲೇ ಕಲಬುರಗಿ ವಿಮಾನ ನಿಲ್ದಾಣವನ್ನು ಉಡಾನ್ ಯೋಜನೆ ಅಡಿಯಲ್ಲಿ ಸೇರಿಸಿಕೊಳ್ಳುವಂತೆ ಕೇಂದ್ರ ವಿಮಾನಯಾನ ಖಾತೆಯ ಸಚಿವರಿಗೆ ಹಾಗೂ ಪ್ರಧಾನ ಮಂತ್ರಿಯವರಿಗೆ ಒತ್ತಾಯಿಸಲಾಗುವುದು. ಕಲಬುರಗಿಯಿಂದ ವಿಮಾನ ಸಂಚಾರ ಪ್ರಾರಂಭವಾಗಲು ಕರ್ನಾಟಕ ಸರ್ಕಾರವು ಸಬ್ಸಿಡಿ ಹಣವನ್ನು ಕೆಕೆಆರ್ಡಿಬಿ ಮೂಲಕ ನೀಡಿ ಕಲ್ಯಾಣ ಕರ್ನಾಟಕ ಭಾಗದ ಸಂಪರ್ಕ ವ್ಯವಸ್ಥೆಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿರುವುದು ಉತ್ತಮ ಬೆಳವಣಿಗೆ. ವಿಮಾನ ಸಂಚಾರ ಪ್ರಾರಂಭವಾದರೆ ಭಾಗದಲ್ಲಿ ಅಭಿವೃದ್ಧಿಗೂ ಹೆಚ್ಚಿನ ಒತ್ತು ಸಿಗಲಿದ್ದು ಕೈಗಾರಿಕೆ, ವಾಣಿಜ್ಯೋದ್ಯಮ, ಪ್ರವಾಸೋದ್ಯಮ, ಕೃಷಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಡಾ. ಜಾಧವ್ ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top