ನಿವೃತ್ತ ಶಿಕ್ಷಣಾಧಿಕಾರಿ ಕೊಕ್ಕರ್ಣೆ ರಾಜೀವ ಶೆಟ್ಟಿ ಇನ್ನಿಲ್ಲ

Upayuktha
0


ಕುಂದಾಪುರ: ಬಹು ಸುದೀರ್ಘ ಕಾಲ ಹೈಸ್ಕೂಲು ಶಿಕ್ಷಕರಾಗಿ ಕುಂದಾಪುರ ತಾಲೂಕಿನ ವಿವಿಧ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ಅನಂತರದಲ್ಲಿ ಕುಂದಾಪುರ ತಾಲ್ಲೂಕು ಶಿಕ್ಷಣಾಧಿಕಾರಿಯಾಗಿ ಅನುಪಮ ಸೇವೆ ಸಲ್ಲಿಸಿ ಅಪಾರ ಜನಮನ್ನಣೆ ಗಳಿಸಿರುವ ಕೊಕ್ಕರ್ಣೆ ಬಂಡ್ಸಾಲೆ ಮನೆ ರಾಜೀವ್‌ ಶೆಟ್ಟಿಯವರು (95) ಆಸೇೂಡಿನ ತಮ್ಮ ಸ್ವಗೃಹ ಇಂದು (ಮೇ 22) ನಿಧನರಾಗಿದ್ದಾರೆ.


ಕೊಕ್ಕರ್ಣೆ ರಾಜೀವ್ ಶೆಟ್ಟಿಯವರು ಉಡುಪಿ ಎಂಜಿಎಂ ಕಾಲೇಜಿನ ಪ್ರಥಮ ಬ್ಯಾಚ್ ವಿದ್ಯಾರ್ಥಿಯಾಗಿ ಕಾಲೇಜಿನ ಸಂಸ್ಥಾಪಕರಾದ ಡಾ.ಮಾಧವ ಪೈಗಳ ಪ್ರೀತಿಗೂ ಪಾತ್ರರಾದವರು. ದಿ.ಟಿ. ಮೇೂಹನದಾಸ್ ಪೈ, ನಾಗಾಲ್ಯಾಂಡ್‌ ಮಾಜಿ ರಾಜ್ಯಪಾಲ ದಿ.ಪಿ.ಬಿ. ಆಚಾರ್ಯ, ಪ್ರೊ.ಶ್ರೀಶ ಬಲ್ಲಾಳ್ ರಂತಹ ಹಿರಿಯರ ಜೊತೆ ಎಂಜಿಎಂ ಕಾಲೇಜಿನಲ್ಲಿ ಒಟ್ಟಿಗೆ ಕಲಿತ ಹೆಗ್ಗಳಿಕೆಗೆ ಇವರಿಗೆ ಸಲ್ಲುತ್ತದೆ. ರಾಜೀವ್ ಶೆಟ್ಟಿಯವರ ನಿಧನದಿಂದಾಗಿ ಎಂಜಿಎಂ ಕಾಲೇಜಿನ ಪ್ರಥಮ ಬ್ಯಾಚಿನ ಕೊಂಡಿ ಸಂಪೂರ್ಣವಾಗಿ ಕಳಚಿಕೊಂಡಿದೆ. ಕಳೆದ ಕಾಲೇಜಿನ ಅಮೃತ ಮಹೇೂತ್ಸವ ಸಂದರ್ಭದಲ್ಲಿ ರಾಜೀವ್ ಶೆಟ್ಟಿಯವರ ಕುರಿತಾಗಿ ವಿಶೇಷ ಲೇಖನ ಉದಯವಾಣಿಯಲ್ಲಿ ಪ್ರಕಟವಾಗಿತ್ತು.


ದಿವಂಗತ ಕೊಕ್ಕರ್ಣೆ ರಾಜೀವ್ ಶೆಟ್ಟಿಯವರು ಇಬ್ಬರು ಪುತ್ರರು ಓವ೯ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ. ಇವರ ಹಿರಿಯ ಪುತ್ರ ಡಾ. ಅನಿಲ್ ಕುಮಾರ್ ಶೆಟ್ಟಿಯವರು ಕೆ.ಎಂ.ಎಫ್ ನಲ್ಲಿ ಹಿರಿಯ ಪಶು ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಇವರ ಅಂತ್ಯಕ್ರಿಯೆ ನಾಳೆ 23ರಂದು ಬೆಳಿಗ್ಗೆ ಕುಂದಾಪುರ ಆಸೇೂಡಿನಲ್ಲಿ ನಡೆಯಲಿದೆ.

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top