ವೈಯಕ್ತಿಕ ಸಾಧನೆಯೊಂದಿಗೆ, ಕುಟುಂಬ, ದೇಶಕ್ಕೂಆಸ್ತಿಯಾಗಿ: ಯು.ಟಿ.ಖಾದರ್‌

Upayuktha
0


ಮಂಗಳೂರು: ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜಿನ ಎಂಬಿಎ (ಐಬಿ) ಸಂಧ್ಯಾ ಕಾರ್ಯಕ್ರಮ ಮತ್ತು ಎಂಬಿಎ ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ನಿರ್ವಹಣೆ ಮತ್ತು ಸಾಂಸ್ಕೃತಿಕ ಸಂಭ್ರಮ ʼಇಕ್ವಿನೊಕ್ಸ್‌ 2026- ಸಂಧ್ಯಾ ಮಂಥನ್‌ʼ ಕಾರ್ಯಕ್ರಮದ ವಿವಿಧ ಸ್ಪರ್ಧೆಗಳಲ್ಲಿ ಎಸ್‌.ಡಿ.ಎಂ ಕಾಲೇಜು ಚಾಂಪಿಯನ್ ಆಗಿಹೊರಹೊಮ್ಮಿದರೆ, ಕೆನರಾ ಕಾಲೇಜಿನ ವಿದ್ಯಾರ್ಥಿಗಳು ರನ್ನರ್ಸ್ ಅಪ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. 


ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಮಾರೋಪ ಸಮಾರಂಭ ಉದ್ಘಾಟಿಸಿ ಬಹುಮಾನ ವಿತರಿಸಿದ ವಿಧಾನಸಭಾ ಸ್ಪೀಕರ್‌ ಡಾ.ಯು.ಟಿ.ಖಾದರ್‌ ಫರೀದ್‌, ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವುದರೊಂದಿಗೆ ತಮ್ಮ ತಮ್ಮ ಕುಟುಂಬಕ್ಕೆ ದಾರಿದೀಪವಾಗಿ ದೇಶಕ್ಕೂ ಕೊಡುಗೆ ನೀಡಲಿ, ಎಂದು ಹಾರೈಸಿದರು. ಬಹುಮಾನ ಸಿಗದವರು ಪರಾಭವವನ್ನೇ ಮೆಟ್ಟಿಲನ್ನಾಗಿಸಿಕೊಂಡುಯಶಸ್ಸಿನತ್ತ ಮುನ್ನುಗ್ಗಿ ಎಂದು ಉತ್ತೇಜಿಸಿದರು. 


ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ. ಎಸ್‌, ಯಾವುದೇ ಕೆಲಸದಲ್ಲಿ ಯಶಸ್ವಿಯಾಗಲು ನಿರಂತರ ಪ್ರಯತ್ನ ಹಾಗೂ ಆತ್ಮಸ್ಥೈರ್ಯ ಮುಖ್ಯ.ವಿವಿಧ ವೃತ್ತಿಪರ ಕೌಶಲ್ಯ ತರಬೇತಿ ಪಡೆದುಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ, ಎಂದುವಿದ್ಯಾರ್ಥಿಗಳಿಗೆ ಕರೆನೀಡಿದರು. 


ಕಾಲೇಜಿನ ಸಂಧ್ಯಾ ಕಾರ್ಯಕ್ರಮದ ಸಲಹೆಗಾರ ಪ್ರೊ. ಜಯವಂತ ನಾಯಕ್‌ ಮಾತನಾಡಿ, ಕಲಿಕೆಯಲ್ಲಿ ಅಂಕ ಎಷ್ಟು ಮುಖ್ಯವೋ ಅದೇ ರೀತಿಯಲ್ಲಿ ನಿಮ್ಮನ್ನು ನೀವು ಹೇಗೆ ಅಭಿವ್ಯಕ್ತಪಡಿಸುತ್ತೀರಿ ಎಂಬುದು ಕೂಡ ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೇರಲು ಮುಖ್ಯವಾಗುತ್ತದೆ. ಹಾಗಾಗಿವೃತ್ತಿಪರ ವ್ಯಕ್ತಿತ್ವವೂಅಗತ್ಯ, ಎಂದು ಸಲಹೆ ನೀಡಿದರು. 


ಸ್ನಾತಕೋತ್ತರ ವಿಭಾಗಗಳ  ಸಲಹೆಗಾರ ಪ್ರೊ. ಅಬೂಬಕರ್‌ ಸಿದ್ದಿಕ್‌ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆ ಅನಾವರಣದ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಈ ಸ್ಪರ್ಧೆಗಳು ನಾಯಕತ್ವ ಗುಣ ಹಾಗೂ ವೃತ್ತಿಪರತೆಯನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾಗಿವೆ, ಎಂದರು. 


ಸಂಧ್ಯಾ ಕಾಲೇಜಿನ ಸ್ನಾತಕೋತ್ತರ ಎಂಬಿಎ (ಐಬಿ) ವಿಭಾಗದ ಉಪನ್ಯಾಸಕ ಹಾಗೂ ಹಳೆ ವಿದ್ಯಾರ್ಥಿ ಸಂಘದ ಖಜಾಂಜಿ ರಾಜೇಶ್‌ ಕುಮಾರ್‌ ಸ್ವಾಗತಿಸಿದರು. ವಿದ್ಯಾರ್ಥಿ ಸಂಯೋಜಕ ಅಹಮದ್‌ ಶೋವ್ಹಾನ್‌ ವಂದಿಸಿದರು. ಎಂಬಿಎ ಪ್ರಥಮ ವರ್ಷದ ವಿದ್ಯಾರ್ಥಿನಿ ಪೂಜಾ ಕಾರ್ಯಕ್ರಮ ನಿರೂಪಿಸಿದರು. 


  ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top