ಸುರತ್ಕಲ್: ಹೊನ್ನೆಕಟ್ಟೆ ಫ್ರೆಂಡ್ಸ್ ಸರ್ಕಲ್ ಕುಳಾಯಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುಳಾಯಿ, ಮಹಿಳಾ ಮಂಡಲ ಕುಳಾಯಿ ಹಾಗೂ ಹೊಸಬೆಟ್ಟು ದೇವಾಡಿಗ ಸಮಾಜ ಸಂಘದ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಿಧನರಾದ ಪಾಡಿಮನೆ ನಾಗೇಶ ದೇವಾಡಿಗ ಅವರಿಗೆ ಶ್ರದ್ಧಾಂಜಲಿ ಸಭೆ ಶ್ರೀ ಗಣೇಶ ಕಲಾ ಮಂಟಪದಲ್ಲಿ ನಡೆಯಿತು.
ಸಭೆಯಲ್ಲಿ ನವಗಿರಿ ಸೇವಾ ಟ್ರಸ್ಟ್ ಹೊಸಬೆಟ್ಟು ಅಧ್ಯಕ್ಷ ಎಂ. ವೆಂಕಟ್ರಾವ್, ಹಿಂದು ವಿದ್ಯಾದಾಯಿನೀ ಸಂಘ ಸುರತ್ಕಲ್ ಕಾರ್ಯದರ್ಶಿ ಶ್ರೀರಂಗ ಹೊಸಬೆಟ್ಟು, ಕುಳಾಯಿ ಕೋಟೆ ಬಬ್ಬುಸ್ವಾಮಿ ದೈವಸ್ಥಾನದ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ರತನ್ ಕುಮಾರ್, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುಳಾಯಿ ಅಧ್ಯಕ್ಷ ವಿಠ್ಠಲ್ ಸಾಲ್ಯಾನ್, ಮಹಿಳಾ ಮಂಡಲ ಕುಳಾಯಿ ಅಧ್ಯಕ್ಷೆ ರೇವತಿ ನವೀನ್, ಹೊಸಬೆಟ್ಟು ದೇವಾಡಿಗ ಸಮಾಜದ ಪದಾಧಿಕಾರಿ ರೋಹಿಣೇಶ ದೇವಾಡಿಗ, ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘ ಸುರತ್ಕಲ್ ಉಪಾಧ್ಯಕ್ಷ ಪ್ರಕಾಶ್ ಎಸ್. ಕರ್ಕೇರ ಹಾಗೂ ಹೊನ್ನೆಕಟ್ಟೆ ಫ್ರೆಂಡ್ಸ್ ಸರ್ಕಲ್ ಕುಳಾಯಿ ಪದಾಧಿಕಾರಿ ಪವನ್ ಮೈರ್ಪಾಡಿ ಸೇರಿದಂತೆ ಹಲವು ಗಣ್ಯರು ನುಡಿನಮನ ಸಲ್ಲಿಸಿದರು.
ಕಾರ್ಯಕ್ರಮವನ್ನು ಶ್ರೀನಿವಾಸ ಕುಳಾಯಿ ನಿರೂಪಿಸಿ, ಭಗವದ್ಗೀತೆಯ ಶ್ಲೋಕ ಹಾಗೂ ಅದರ ಅರ್ಥವನ್ನು ವಿವರಿಸಿ ಮೃತರ ಗುಣಗಾನ ಮಾಡಿದರು.
ಮೌನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮುಂದುವರಿದು, ಬಳಿಕ ಹಾಜರಿದ್ದ ಎಲ್ಲರೂ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


