ವೇತನ ಪ್ಯಾಕೇಜ್ ಅಡಿಯಲ್ಲಿ ಹೆಚ್ಚುವರಿ ಸೌಲಭ್ಯಗಳ ಘೋಷಣೆ
ಬೆಂಗಳೂರು: ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲೊಂದಾದ
ಬ್ಯಾಂಕ್ ಆಫ್ ಬರೋಡಾ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯೊಂದಿಗೆ ತನ್ನ ಪರಸ್ಪರ ಒಪ್ಪಂದ
ಪತ್ರವನ್ನು (MoU) ನವೀಕರಿಸಿದ್ದು, ಪೊಲೀಸ್ ಸಿಬ್ಬಂದಿಗಾಗಿ ವಿಶೇಷ ವೇತನ ಪ್ಯಾಕೇಜ್ ಅಡಿಯಲ್ಲಿ
ಹೆಚ್ಚುವರಿ ಸೌಲಭ್ಯಗಳನ್ನು ಪರಿಚಯಿಸುವ ಮೂಲಕ ದೀರ್ಘಕಾಲದ ಸಹಭಾಗಿತ್ವವನ್ನು
ಮತ್ತಷ್ಟು ಬಲಪಡಿಸಿದೆ.
ಈ ಒಪ್ಪಂದ ಪತ್ರಕ್ಕೆ ಕರ್ನಾಟಕ ರಾಜ್ಯ ಪೊಲೀಸ್ ಮುಖ್ಯ ಕಚೇರಿ, ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಗೌರವಾನ್ವಿತ
ಉಪಸ್ಥಿತಿಯಲ್ಲಿ ಸಹಿ ಹಾಕಲಾಯಿತು. ಕಾರ್ಯಕ್ರಮದಲ್ಲಿ
ಡಾ. ಎಂ. ಎ. ಸಲೀಂ,
IPS, ಡಿಜಿ & ಐಜಿಪಿ ಆಫ್ ಪೊಲೀಸ್, HoPF ಹಾಗೂ
ಶ್ರೀ ಅನಿಲ್ ಕುಮಾರ್ ಶ್ರೀವಾಸ್ತವ, ಜನರಲ್ ಮ್ಯಾನೇಜರ್, ಬ್ಯಾಂಕ್ ಆಫ್ ಬರೋಡಾ, ಬೆಂಗಳೂರು
ವಲಯ ಉಪಸ್ಥಿತರಿದ್ದರು.
ಒಪ್ಪಂದ ಪತ್ರಕ್ಕೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಡಿಐಜಿ ಆಫ್ ಪೊಲೀಸ್ (HQs) ಶ್ರೀ
ಟಿ. ಶ್ರೀಧರ, IPS ಮತ್ತು ಬ್ಯಾಂಕ್ ಆಫ್ ಬರೋಡಾ, ಬೆಂಗಳೂರು
ವಲಯದ ಡಿಜಿಎಂ ಶ್ರೀಮತಿ ವೆಂಕಟರಮಣಿ ಶ್ರೀ ಪೂರ್ಣ ಸಹಿ
ಹಾಕಿದರು.
ಈ ಸಂದರ್ಭದಲ್ಲಿ ಶ್ರೀಮತಿ ಕಲಾ ಕೃಷ್ಣಸ್ವಾಮಿ, IPS, DIGP (Crime), ಪೊಲೀಸ್ ಮುಖ್ಯ ಕಚೇರಿ, ಬೆಂಗಳೂರು; ಡಾ. ಸಂಜೀವ್ ಪಾಟೀಲ್,
IPS, DIGP (Law & Order), ಪೊಲೀಸ್
ಮುಖ್ಯ ಕಚೇರಿ, ಬೆಂಗಳೂರು; ಶ್ರೀ ಪ್ರವೀಣ್ ಕುಮಾರ್,
DGM & RM; ಶ್ರೀ ರಾಜೀವ್ ಕುಮಾರ್ ಮಿಶ್ರಾ, DGM & RM; ಶ್ರೀ ಅಮರನಾಥ ರೆಡ್ಡಿ
ಪಿ, AGM & RM; ಶ್ರೀ ಸುನಿಲ್ ಕುಮಾರ್,
AGM & DRM ಹಾಗೂ ಏರ್ ಕಮೋಡೋರ್ ತರುಣ್
ಕುಮಾರ್ ಸಿನ್ಹಾ (ನಿವೃತ್ತ), ಡಿಫೆನ್ಸ್ ಬ್ಯಾಂಕಿಂಗ್ ಸಲಹೆಗಾರ, ಬ್ಯಾಂಕ್ ಆಫ್ ಬರೋಡಾ, ಬೆಂಗಳೂರು
ವಲಯ ಸೇರಿದಂತೆ ಕರ್ನಾಟಕ ಪೊಲೀಸ್ ಮುಖ್ಯ ಕಚೇರಿ ಮತ್ತು ಬ್ಯಾಂಕ್ ಆಫ್ ಬರೋಡಾ ವಲಯ
ಕಚೇರಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶ್ರೀ ಸೌಮೇಂದು ಮುಖರ್ಜಿ,
IPS, ADGP (Admin) ಅವರು
ಮಾತನಾಡಿ,
“ಈ ನವೀಕರಿಸಲಾದ ಒಪ್ಪಂದವು ಈಗಿರುವ ವ್ಯವಸ್ಥೆಯ ಯಶಸ್ಸಿನ ಮೇಲೆ ನಿರ್ಮಾಣಗೊಂಡಿದ್ದು, ಕರ್ನಾಟಕ ರಾಜ್ಯ
ಪೊಲೀಸ್ ವೇತನ ಪ್ಯಾಕೇಜ್ ಅಡಿಯಲ್ಲಿ
ಹೆಚ್ಚಿದ ವಿಮಾ ರಕ್ಷಣೆ ಹಾಗೂ
ಹೆಚ್ಚಿನ ಸೌಲಭ್ಯಗಳನ್ನು ಪರಿಚಯಿಸುತ್ತದೆ” ಎಂದು ಹೇಳಿದರು.
ಹೆಚ್ಚುವರಿ ಸೌಲಭ್ಯಗಳ ಮುಖ್ಯಾಂಶಗಳು:
₹10 ಲಕ್ಷಗಳ ಜೀವ ವಿಮಾ ರಕ್ಷಣೆ
ವೈಯಕ್ತಿಕ ಅಪಘಾತ ವಿಮೆ (PAI)
₹125 ಲಕ್ಷ – ಕರ್ತವ್ಯದಲ್ಲಿರಲಿ ಅಥವಾ ಕರ್ತವ್ಯೇತರ ಸಂದರ್ಭದಲ್ಲಿ ಮರಣ ಹೊಂದಿದರೆ
₹125 ಲಕ್ಷ – ಶಾಶ್ವತ ಸಂಪೂರ್ಣ ಅಂಗವೈಕಲ್ಯ
₹62.5 ಲಕ್ಷ – ಶಾಶ್ವತ ಭಾಗಶಃ ಅಂಗವೈಕಲ್ಯ
ನಿವೃತ್ತ ವೇತನದಾರರಿಗೆ ₹75 ಲಕ್ಷಗಳವರೆಗೆ PAI ಕವರ್
ಕುಟುಂಬ ನಿವೃತ್ತ ವೇತನದಾರರಿಗೆ ₹37.5 ಲಕ್ಷಗಳ ನಿಗದಿತ PAI ಕವರ್
ಯೋಧಾ ರೂಪೇ ಡೆಬಿಟ್ ಕಾರ್ಡ್ಗಳ ಉಚಿತ ಜೀವಮಾನ
ಸೇವೆ – ₹10 ಲಕ್ಷಗಳ PAI ಕವರ್ ಸಹಿತ
ವಿಕ್ರಮ್ ಕ್ರೆಡಿಟ್ ಕಾರ್ಡ್ – ₹20 ಲಕ್ಷಗಳ PAI ಕವರ್ (ವಾರ್ಷಿಕ/ಜಾರಿ/ಪುನರ್ಜಾರಿ ಶುಲ್ಕವಿಲ್ಲ)
ಗೃಹ, ವಾಹನ, ಶಿಕ್ಷಣ, ಗಿರವಿ ಹಾಗೂ ವೈಯಕ್ತಿಕ ಸಾಲಗಳನ್ನು
ಒಳಗೊಂಡಂತೆ ಎಲ್ಲಾ ಚಿಲ್ಲರೆ ಸಾಲಗಳ ಪ್ರೊಸೆಸಿಂಗ್ ಶುಲ್ಕದ ಮೇಲೆ 100% ವಿನಾಯಿತಿ
ಈ ಕುರಿತು ಬ್ಯಾಂಕ್ ಆಫ್ ಬರೋಡಾ, ಬೆಂಗಳೂರು
ವಲಯದ ಜನರಲ್ ಮ್ಯಾನೇಜರ್ ಶ್ರೀ ಅನಿಲ್ ಕುಮಾರ್
ಶ್ರೀವಾಸ್ತವ ಅವರು ಮಾತನಾಡಿ ಸಮಾಜದಲ್ಲಿ ಕಾನೂನು ಮತ್ತು
ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ಸಾರ್ವಜನಿಕರ ರಕ್ಷಣೆಯಲ್ಲಿ
ಪ್ರಮುಖ ಪಾತ್ರವಹಿಸುವ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯೊಂದಿಗೆ ನಮ್ಮ ಸಹಭಾಗಿತ್ವವನ್ನು ನವೀಕರಿಸಿರುವುದಕ್ಕೆ
ನಾವು ಹೆಮ್ಮೆಪಡುತ್ತೇವೆ. ಈ ಹೆಚ್ಚುವರಿ ವೇತನ
ಪ್ಯಾಕೇಜ್ ನಮ್ಮ ಮುಂಚೂಣಿ ಭದ್ರತಾ
ಪಡೆಗಳಿಗೆ ಭದ್ರತೆ, ಸೌಲಭ್ಯ ಹಾಗೂ ದೀರ್ಘಕಾಲೀನ ಮೌಲ್ಯ
ಒದಗಿಸುವ ಸಮಗ್ರ ಹಣಕಾಸು ಪರಿಹಾರಗಳನ್ನು ನೀಡುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ
ಎಂದು ಹೇಳಿದರು.
ಈ ನವೀಕರಿಸಿದ ಸಹಭಾಗಿತ್ವವು ಮುಂಚೂಣಿ ಭದ್ರತಾ ಪಡೆಗಳಿಗೆ ಬೆಂಬಲ ನೀಡುವ ಹಾಗೂ ಅರ್ಥಪೂರ್ಣ ಹಣಕಾಸು
ಸಬಲೀಕರಣದ ಮೂಲಕ ರಾಷ್ಟ್ರ ನಿರ್ಮಾಣಕ್ಕೆ
ಕೊಡುಗೆ ನೀಡುವ ಬ್ಯಾಂಕ್ ಆಫ್ ಬರೋಡಾದ ಬದ್ಧತೆಯನ್ನು
ಮತ್ತೊಮ್ಮೆ ಒತ್ತಿಹೇಳುತ್ತದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


