ಪುತ್ತೂರು: ಇತ್ತೀಚೆಗೆ ಇಲ್ಲಿನಅಕ್ಷಯ ಕಾಲೇಜ್ ನಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಣೆ ಮಾಡಲಾಯಿತು. ಕಾರ್ಯಕ್ರಮವನ್ನು ಡಾ. ಮಾಧವ ಎಂ ಕೆ ಇವರು ಉದ್ಘಾಟಿಸಿ, ಕಾರ್ಯಕ್ರಮದ ಕುರಿತು ಶುಭನುಡಿಗಳನ್ನಾಡಿದರು.
ಸಂಪನ್ಮೂಲ ವ್ಯಕ್ತಿ ಡಾ. ಅನಂತ ಕೃಷ್ಣ ಭಟ್ ಮಾತನಾಡಿ ಪ್ರಪಂಚದ ಸುದೀರ್ಘ ಸಂವಿಧಾನ ಎಂದರೆ ಭಾರತ It's like a mother and it's like a rule book. ಇವರು ಸಂವಿಧಾನದ ಹಕ್ಕುಗಳು ಹಾಗೂ ರೀತಿ ನಿಯಮಗಳನ್ನು ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಮಾಹಿತಿ ನೀಡಿದರು. ಸಂವಿಧಾನ ಎಂದರೆ ನಿಂತ ನೀರಲ್ಲ ಚಲಿಸುವ ನೀರು ಎಂದು ವಿದ್ಯಾರ್ಥಿಗಳಿಗೆ ಮನಮುಟ್ಟುವ ರೀತಿ ತಿಳಿಸಿದರು.
ಡಾ. ಪಿ ಅನಂತ ಕೃಷ್ಣ ಇವರು ಬರೆದಿರುವ ಸ್ವಾತಂತ್ರ್ಯೋತರ ಅಮೃತವರ್ಷ ಭಾರತ ಸಂವಿಧಾನ ಒಂದು ಸುಂದರ ಪಕ್ಷಿನೋಟ ಎಂಬ ಪುಸ್ತಕವನ್ನು ನಮ್ಮ ಕಾಲೇಜಿನ ಗ್ರಂಥಾಲಯಕ್ಕೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದ ಶ್ರೀಯುತ ಜಯಂತ್ ನಡುಬೈಲ್, ಅಧ್ಯಕ್ಷರು ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳು ಪುತ್ತೂರು ಕಾರ್ಯಕ್ರಮವನ್ನು ಉದ್ದೇಶಿಸಿ ಶುಭನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಐ.ಕ್ಯೂ.ಎ.ಸಿ ಸಂಯೋಜಕರಾದ ರಶ್ಮಿ ಕೆ. ಹಾಗೂ ಉಪಪ್ರಾಂಶುಪಾಲರಾದ ರಕ್ಷಣ್ ಟಿ ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು . ಡಾ. ಪ್ರಮೋದ್ ಕೆ.ಆರ್.ಎಂ.ಎಸ್.ಎಸ್ ಮಂಗಳೂರು ಕಾರ್ಯಕ್ರಮದ ಕುರಿತು ಪ್ರಾಸ್ತವಿಕ ನುಡಿಗಳನ್ನಾಡಿ, ಎಲ್ಲರನ್ನು ಸ್ವಾಗತಿಸಿದರು. ಕು. ಸುಶ್ಮಿತಾ ಮತ್ತು ಕು.ಗ್ರೀಷ್ಮಾ ಪ್ರಾರ್ಥಿಸಿದರು. ಶ್ರೀ ಹರಿಶ್ಚಂದ್ರ ಕನ್ನಡ ವಿಭಾಗ ಉಪನ್ಯಾಸಕರು ಸರ್ವರನ್ನು ವಂದಿಸಿದರು. ಕಾರ್ಯಕ್ರಮವನ್ನು ಉದಿತ್ ದ್ವಿತೀಯ ವಾಣಿಜ್ಯ ವಿಭಾಗ ಇವರು ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


