ಮಂಗಳೂರು: ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ಎಂದು ಅಭಿಮಾನಿಗಳಿಂದ ಪ್ರೀತಿಸಲ್ಪಡುವ ರಚಿತಾ ರಾಮ್ ಅವರ ಸಿನಿಜೀವನಕ್ಕೆ 14 ವರ್ಷಗಳು ಪೂರ್ಣಗೊಂಡಿವೆ. ಯಶಸ್ಸಿನ ಪಯಣ ಮುಂದುವರಿಸುತ್ತಿರುವ ಅವರು ಇದೀಗ ಭಕ್ತಿಯ ಮುಖಾಂತರವೂ ಸುದ್ದಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೆಂಜನಪದವಿನಲ್ಲಿರುವ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ ರಚಿತಾ ರಾಮ್, ಕೋಲ ಸೇವೆಯಲ್ಲಿ ಭಾಗವಹಿಸಿ ತಮ್ಮ ಹರಕೆಯನ್ನು ನೆರವೇರಿಸಿದರು. ಮನಸ್ಸಿನಲ್ಲಿಟ್ಟಿದ್ದ ಆಶಯಗಳು ಈಡೇರಿದರೆ ಕೊರಗಜ್ಜ ದೈವಕ್ಕೆ ಕೋಲ ಸೇವೆ ಸಲ್ಲಿಸುವುದಾಗಿ ಅವರು ಸಂಕಲ್ಪ ಮಾಡಿಕೊಂಡಿದ್ದರು. ಇದೀಗ ಆ ಹರಕೆಯನ್ನು ಪೂರ್ಣಗೊಳಿಸಿರುವುದು ಭಕ್ತರಲ್ಲಿ ಸಂತಸ ಮೂಡಿಸಿದೆ.
ಕನ್ನಡದ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ಅಭಿನಯಿಸಿರುವ ರಚಿತಾ ರಾಮ್ ಸದ್ಯ ಧೃವ ಸರ್ಜಾ ಅಭಿನಯದ ಕ್ರಿಮಿನಲ್ ಹಾಗೂ ನೀನಾಸಂ ಸತೀಶ್ ಅಭಿನಯದ ಅಯೋಗ್ಯ 2 ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಇದರ ಜೊತೆಗೆ, ತಮಿಳು ಚಿತ್ರರಂಗದ ಪ್ರಮುಖ ನಿರ್ಮಾಣ ಸಂಸ್ಥೆಯೊಂದರೊಂದಿಗೆ ಮಾತುಕತೆ ನಡೆಸುತ್ತಿರುವ ಅವರು, ತೆಲುಗಿನ ಎರಡು ಹೊಸ ಸಿನಿಮಾಗಳ ಘೋಷಣೆಯನ್ನೂ ಈ ತಿಂಗಳಲ್ಲೇ ಮಾಡುವ ಸಾಧ್ಯತೆ ಇದೆ. ನಟಿಯಾಗಿ ಮಾತ್ರವಲ್ಲದೆ ಭಕ್ತಿಭಾವದ ಮೂಲಕವೂ ರಚಿತಾ ರಾಮ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


