ಮೇ 23-24: ಉಡುಪಿಯಲ್ಲಿ ನುಡಿತೋರಣ ಬಳಗದ 4ನೇ ವಾರ್ಷಿಕೋತ್ಸವ, 6 ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ

Upayuktha
0



ಬೆಂಗಳೂರು: ಕನ್ನಡ ನಾಡು-ನುಡಿ, ಸಾಹಿತ್ಯ ಸಂಸ್ಕೃತಿಯ ಪ್ರಚಾರ ಪ್ರಸಾರಕ್ಕಾಗಿ ಶ್ರಮಿಸುತ್ತಿರುವ "ನುಡಿತೋರಣ ಬಳಗದ 4ನೇ ವಾರ್ಷಿಕೋತ್ಸವವವು ಮೇ ತಿಂಗಳ 23-24ನೇ ತಾರೀಖಿನಂದು ಉಡುಪಿಯಲ್ಲಿ ನಡೆಯುತ್ತಲಿದ್ದು ಈ ವಾರ್ಷಿಕೋತ್ಸವದಲ್ಲಿ ವಿಶೇಷವಾಗಿ ಗುಂಪಿನ ಸದಸ್ಯರ 6 ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗುತ್ತಿದ್ದು ಪುಸ್ತಕ ಬಿಡುಗಡೆಯನ್ನು ಅತಿಥಿಗಳಾದ ಪ್ರೇಮಶೇಖರ ಹಾಗೂ ಎ.ಎಸ್‌ಕೆ ಹೆಬ್ಬಾರ್‌ ಅವರು ನೇರವೇರಿಸಲಿದ್ದಾರೆ.


ಮುಂಬೈ ಕನ್ನಡತಿಯಾದ ಶ್ರೀಮತಿ ಮಧು ವಸ್ತ್ರದ ಅವರ "ಚೈತ್ರದ ಚಿಗುರು" (ಎದೆಯ ಮಿಡಿತದ ಕವನ ಸಂಕಲನ) ಇದು ಇವರ ಎರಡನೇ ಕವನ ಸಂಕಲನವಾಗಿದ್ದು ಬದುಕಿನ ಹಸಿರು, ಉಸಿರು, ಬಿಸಿಲು, ಮಳೆ-ಗಾಳಿಗಳನ್ನು ಕಾವ್ಯದ ಕನ್ನಡಿಯಲ್ಲಿ ಬಿಂಬಿಸಿದ್ದಾರೆ..ಪ್ರಕೃತಿ, ಸಂಸ್ಕೃತಿ, ಮಾನವೀಯ ಸಂಬಂಧಗಳ ಬೆಸುಗೆಯೇ ಈ ಕೃತಿಯ ಜೀವಾಳವಾಗಿದೆ.


ಶ್ರೀಮತಿ ವಿಜಯ ನಿರ್ಮಲ ಇವರ 'ಕನ್ನಡದ ಆಧುನಿಕ ಸಾಧಕಿಯರು' (ನಾಡಿನ ಮಹಿಳಾ ಸಾಹಿತಿಗಳ ಪರಿಚಯ ಕೃತಿ) ಇದೊಂದು ಅಪೂರ್ವ ಕೃತಿ. ಇದರಲ್ಲಿ ನಾಡಿನ 47 ಮಹಿಳಾ ಸಾಹಿತ್ಯ ಸಾಧಕರ ಸುದೀರ್ಘ ಪರಿಚಯ ಇದೆ. ಪ್ರಸ್ತುತ ಸ್ವಾರ್ಥದ ಜಗತ್ತಿನಲ್ಲಿ ಯಾವುದೇ ಅಪೇಕ್ಷೆಯಿಲ್ಲದೆ ನಾಡಿನ ಮಹಿಳಾ ಸಾಧಕಿಯರನ್ನು ಗುರುತಿಸಿ ಪರಿಚಯಿಸಿದ್ದಾರೆ. ಇದು ಲೇಖಕಿಯ 3ನೇ ಕೃತಿಯಾಗಿದೆ.


ಶ್ರೀಕಾಂತ ಪತ್ರೆಮರ ಅವರ ಚೊಚ್ಚಲ ಕವನ ಸಂಕಲನ 'ವ್ಯಕ್ತ ಪತ್ರೆಗಳು' ಪುಸ್ತಕ ಇದಾಗಿದ್ದು, ಪತ್ರೆಮರ ಪ್ರಕಾಶನ, ಬೆಂಗಳೂರು ವತಿಯಿಂದ ಪ್ರಕಟಗೊಂಡಿದೆ. ತಂದೆಯವರಿಂದ ಬಳುವಳಿಯಾಗಿ ಬಂದ ಸಾಹಿತ್ಯಾಸಕ್ತಿಯೇ ಈ ಕಾವ್ಯ ರಚನೆಗೆ ಮೂಲ ಪ್ರೇರಣೆಯಾಗಿದ್ದು, ಬದುಕಿನ ಭಾವನಾತ್ಮಕ ಅನುಭವಗಳಿಗೆ ಇಲ್ಲಿ ಅಕ್ಷರದ ರೂಪ ನೀಡಲಾಗಿದೆ. "ಹೋಗುವಾಗ ಏನನ್ನೂ ಒಯ್ಯಲು ಸಾಧ್ಯವಿಲ್ಲ; ಒಂದೋ ಬಿಟ್ಟು ಹೋಗಬೇಕು, ಇಲ್ಲವೇ ಕೊಟ್ಟು ಹೋಗಬೇಕು" ಎಂಬ ದಾರ್ಶನಿಕ ಸತ್ಯಕ್ಕೆ ಓಗೊಟ್ಟು ಲೇಖಕರು ಈ ಕೃತಿಯನ್ನು ತಂದಿದ್ದಾರೆ. ತಾವು ಬರೆದ ಕವಿತೆಗಳು ಚದುರಿ ಹೋಗದೆ, ನೆನಪಿನ ಬುತ್ತಿಯಾಗಿ ಓದುಗರನ್ನು ತಲುಪಲಿ ಎಂಬ ಸದಾಶಯದೊಂದಿಗೆ ಈ ಹೊತ್ತಿಗೆಯನ್ನು ಲೋಕಾರ್ಪಣೆಗೊಳಿಸಲಾಗಿದೆ.


'ನುಡಿಕಥಾಮಾಲಾ' (ಕಥೆಗಳ ಸಂಕಲನ)– ಸಂಪಾದಕರು: ಶ್ರೀಮತಿ ಜಯಶ್ರೀ ರಾಜು, ಬೆಂಗಳೂರು (‘ನುಡಿಸಂಭ್ರಮ 2026’ರ ಕಥಾಸ್ಪರ್ಧೆಯ ಕಥೆಗಳ ಸಂಕಲನ)

(‘ನುಡಿಸಂಭ್ರಮ 2026’ರ ರಾಜ್ಯಮಟ್ಟದ ಕಥಾಸ್ಪರ್ಧೆಯ ಆಯ್ದ ಕಥೆಗಳ ಸಂಕಲನ)

‘ನುಡಿಸಂಭ್ರಮ 2026’ರ ಅಂಗವಾಗಿ ಆಯೋಜಿಸಲಾಗಿದ್ದ ಕಥಾಸ್ಪರ್ಧೆಯು ನಾಡಿನಾದ್ಯಂತ ಹೊಸ ಬರವಣಿಗೆಯ ಅಲೆ ಎಬ್ಬಿಸಿತ್ತು. ಆ  ಸ್ಪರ್ಧೆಯಿಂದ ಆಯ್ದ ಅತ್ಯುತ್ತಮ 19 ಕಥೆಗಳ ಜೊತೆ ನುಡಿತೋರಣ ಬಳಗದ ಕೆಲ ಸದಸ್ಯರ ಕಥೆಗಳೂ ಸೇರಿ ಒಟ್ಟು 24 ವೈವಿಧ್ಯಮಯ ಕಥೆಗಳು ಈ ‘ನುಡಿಕಥಾಮಾಲಾ’ ಸಂಕಲನದಲ್ಲಿ ಅಕ್ಷರರೂಪ ಪಡೆದಿವೆ. 


ಶ್ರೀ ಕಿರಣ್ ಹಿರಿಸಾವೆ ಅವರ 'ಆ ಐದು ನಿಮಿಷಗಳು' (ಸಮಕಾಲೀನ ಆಧುನಿಕ ನಗರದ ಬದುಕಿನ ಏರಿಳಿತಗಳ ಧ್ವನಿಸುವ  ಕಥಾ ಸಂಕಲನ)– 

ತಾಂತ್ರಿಕ ವೃತ್ತಿಯಲ್ಲಿದ್ದರೂ ವರ್ತಮಾನದ ತಲ್ಲಣಗಳನ್ನು ಅಕ್ಷರಗಳಲ್ಲಿ ಸಮರ್ಥವಾಗಿ ಹಿಡಿದಿಟ್ಟಿರುವ ಕಿರಣ್ ಹರಿಸಾವೆ ಅವರ ಚೊಚ್ಚಲ ಕಥಾಸಂಕಲನವು ಅತ್ಯಂತ ಸುಲಲಿತ ಮತ್ತು ಸರಾಗವಾದ ಶೈಲಿಯಲ್ಲಿದೆ. ಸಂಕಲನದಲ್ಲಿನ ಎಂಟು ಕಥೆಗಳು ವಿಭಿನ್ನ ಶೀರ್ಷಿಕೆ ಮತ್ತು ಕಥಾವಸ್ತುಗಳನ್ನು ಹೊಂದಿದ್ದು, ಪ್ರಸ್ತುತ ಕಾಲಘಟ್ಟದ ಬದುಕಿನ ವಿವಿಧ ಆಯಾಮಗಳನ್ನು ಸೊಗಸಾಗಿ ತರೆದಿಡುತ್ತವೆ. ೨೨ನೇ ಶತಮಾನದ ಕೃತಕ ಬುದ್ಧಿಮತ್ತೆಯ ಬದುಕಿನಿಂದ ಹಿಡಿದು, ಮಧ್ಯವಯಸ್ಕ ಹೆಣ್ಣುಮಕ್ಕಳ ಆಸೆ-ಆಕಾಂಕ್ಷೆಗಳು, ದಾಂಪತ್ಯದ ಸಿಹಿ-ಕಹಿ ಹಾಗೂ ಇಂದಿನ ಯಾಂತ್ರಿಕ ಜೀವನದ ಓಟದವರೆಗಿನ ಕಟು ವಾಸ್ತವಗಳನ್ನು ಈ ಕಥೆಗಳು ಮುಟ್ಟುತ್ತವೆ. ಪ್ರತಿಯೊಂದು ಕಥೆಯಲ್ಲೂ ಲೇಖಕರು ವಿಭಿನ್ನ ಪಾತ್ರಗಳನ್ನು ಶ್ರಮವಹಿಸಿ, ಸಶಕ್ತವಾಗಿ ಕಟ್ಟಿಕೊಡುವ ಮೂಲಕ ಕಥನ ಕಲೆಯನ್ನು ಸಿದ್ಧಿಸಿಕೊಂಡಿರುವುದನ್ನು ತೋರಿಸಿದ್ದಾರೆ.



ಶ್ರೀ ಕಿರಣ್  ಹಿರಿಸಾವೆ ಯವರ ಕಥಾ ಸಂಕಲನದ ಅನುವಾದವನ್ನು: ಡಾ. ಜಿ.ಎಸ್. ಸರೋಜಾ, ಕೇಂದ್ರ ಸರ್ಕಾರದ ಹಿಂದಿ ಪರಿಷತ್ ಸಮಿತಿ ಸದಸ್ಯೆ (‘ಆ ಐದು ನಿಮಿಷಗಳು’ ಕೃತಿಯ ಹಿಂದಿ ಆವೃತ್ತಿ) ಮಾಡಿರುತ್ತಾರೆ. ಕೃತಿಯ ಹೆಸರು 'ವೋ ಪಾಂಚ್ ಮಿನಟ್' ಅನುವಾದಕರುಮೂಲ ಲೇಖಕರ ಕಥಾ ಹರಿವು ಮತ್ತು ಭಾವನೆಗಳನ್ನು ಅತ್ಯಂತ ಅನುಪಮ ರೂಪದಲ್ಲಿ ಹಿಂದಿ ಭಾಷೆಗೆ ಇಳಿಸಿರುವುದು ಅನುವಾದಕಿ ಸರೋಜಾ ಅವರ ಕೌಶಲ್ಯ ಮತ್ತು ಲೇಖನಿಯ ಪವಾಡ ಅದ್ಭುತವಾಗಿದೆ. ಮಾತೃಭಾಷೆಯಲ್ಲದ ಮತ್ತೊಂದು ಭಾಷೆಗೆ ಸಾಹಿತ್ಯವನ್ನು ತರ್ಜುಮೆ ಮಾಡುವುದು ಅತ್ಯಂತ ಗಂಭೀರ ಹಾಗೂ ಸವಾಲಿನ ಕೆಲಸವಾಗಿದ್ದು, ಅದನ್ನು ಸರೋಜಾ ಅವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಈ ಯಶಸ್ವಿ ಅನುವಾದದ ಮೂಲಕ ಸರೋಜಾ ಅವರು ಸಾಹಿತ್ಯದ ಮಾಧ್ಯಮದಲ್ಲಿ ಉತ್ತರ ಮತ್ತು ದಕ್ಷಿಣ ಭಾರತದ ನಡುವಿನ ಭಾಷಾಂತರದ ದೂರವನ್ನು ಅಳಿಸುವ ಅತ್ಯಮೂಲ್ಯ ಕೆಲಸ ಮಾಡಿದ್ದಾರೆ.


ಇಂತಹ 6 ಉತ್ತಮ ಸಾಹಿತ್ಯಿಕ ರಚನೆಗಳ ಬಿಡುಗಡೆ ಮಾಡುತ್ತಿರುವ "ನುಡಿ ತೋರಣ" 175 ಸಮಾನ ಮನಸ್ಕ ಕವಿಗಳ ಕುಟುಂಬವಾಗಿದೆ. ಪರಸ್ಪರರ ಅಭಿವೃದ್ಧಿಯಲ್ಲಿ ಸಾಹಿತ್ಯವನ್ನು ಪ್ರೋತ್ಸಾಹಿಸುತ್ತ ನುಡಿ ಕುಟುಂಬ ವಾರಕ್ಕೆ ಒಂದು ಅಂಕಣದಂತೆ ಇದುವರೆಗೂ 35ಕ್ಕೂ ಹೆಚ್ಚು ಅಂಕಣಗಳನ್ನು ಪ್ರಕಟಿಸಿದೆ. ನುಡಿ ಬುತ್ತಿ, ನುಡಿ ರಥ, ಸಾಹಿತಿಗಳೊಂದಿಗೆ ಸಂವಾದ, ತಿಂಗಳಿಗೊಮ್ಮೆ ಕನ್ನಡ ಕೃತಿಗಳ ಕುರಿತು ಚರ್ಚೆ ಮೊದಲಾದ ಸಾಹಿತ್ಯಿಕ ಚರ್ಚೆ ನಡೆಯುತ್ತದೆ. ವಿಶೇಷ ವ್ಯಕ್ತಿಗಳೊಂದಿಗೆ ಸಂವಾದ ನಡೆಸುವ ಈ ಬಾರಿಯ ವಾರ್ಷಿಕೋತ್ಸವದದಲ್ಲಿ ಖ್ಯಾತ ಲೇಖಕ ಸಂತೋಷ್ ಮೆಹಂದಳೆ ಅವರೊಂದಿಗೆ ಸಂವಾದ, ಡಾ.ಮೀರಾ ಎಚ್ ಎನ್ ಅವರ "ಪಂಚವರ್ಣೆ" ಏಕ ವ್ಯಕ್ತಿ ನಾಟಕ, ಹಿರಿಯ ಕವಿಗಳ ಕವಿತಾ ವಾಚನದ ಕವಿ ಗೋಷ್ಠಿ, ನುಡಿ ಭೂಷಣ ಪ್ರಶಸ್ತಿ ಪ್ರದಾನ, ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಜೊತೆಗೆ ನೃತ್ಯ, ನಮ್ಮ ಸಂಸ್ಕೃತಿ ಬಿಂಬಿಸುವ ವಿಶೇಷ ವೇಷ ಭೂಷಣ ಮೊದಲಾದ ಕಾರ್ಯ ನಡೆಯಲಿದೆ. ಸಮಾರೋಪವನ್ನು ನರೇಂದ್ರ ರೈ ದೇರ್ಲ  ಅವರ ಮಾತುಗಳಿಂದ ಮುಗಿಯಲಿದೆ.



- ಮಾಧುರಿ ದೇಶಪಾಂಡೆ, ಬೆಂಗಳೂರು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top