ದಾವಣಗೆರೆ: ಇಲ್ಲಿನ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಶ್ರೀ
ಬಸವ ಜಯಂತಿ ಪ್ರಯುಕ್ತ “ಅಂಚೆ ಕುಂಚ” ರಾಜ್ಯ
ಮಟ್ಟದ ಚಿತ್ರ ಬರೆಯುವ ಸ್ಪರ್ಧೆ ಹಮ್ಮಿಕೊಂಡಿದ್ದು ಅದರ ಫಲಿತಾಂಶ ಪ್ರಕಟವಾಗಿದೆ
ಎಂದು ಸಂಸ್ಥೆಯ ಸಂಸ್ಥಾಪಕರು, ಚಿತ್ರ ಕಲಾವಿದರು, ತೀರ್ಪುಗಾರರಲ್ಲಿ ಒಬ್ಬರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಹಿರಿಯರ
ವಿಭಾಗದಲ್ಲಿ ಪ್ರಥಮ ಬಹುಮಾನ, ಬಳ್ಳಾರಿ ಜಿಲ್ಲೆಯ ಕುರುಗೋಡಿನ ಬುಗಡೆ ನಾಗರಾಜ್, ಉತ್ತರ ಕನ್ನಡ ಜಿಲ್ಲೆಯ ಹುಳೆಗಾರ ಗ್ರಾಮದ ಸತೀಶ್ನಾಯ್ಕ ಗೇರುಸೊಪ್ಪಾ, ದ್ವಿತೀಯ ಬಹುಮಾನ, ಹಾವೇರಿಯ ಕಾವ್ಯಪ್ರಸಾದ್, ವಿಜಯಪುರದ ಕುಮಾರ ಮಂಜುನಾಥ, ತೃತೀಯ ಬಹುಮಾನ, ದಾವಣಗೆರೆ ಜಿಲ್ಲೆ ಕಾಡಜ್ಜಿಯ ಹರೀಶ್ ವಿ., ಮುಂಡರಗಿಯ ಪೂರ್ಣಿಮಾ
ಮಾಗಪ್ಪನವರ, ಸಮಾದಾನಕ ಬಹುಮಾನ ಬೆಂಗಳೂರಿನ ಅಕ್ಷಯ, ದಾವಣಗೆರೆಯ ಶ್ರೇಯಾ ದೊಡ್ಡಪ್ಪ, ವಿಜಯಪುರದ ರಾಧಿಕಾ ರಾಠೋಡ ಪಡೆದಿರುತ್ತಾರೆ.
ಕಿರಿಯರ
ವಿಭಾಗದಲ್ಲಿ ಪ್ರಥಮ ಬಹುಮಾನ, ಹುಬ್ಬಳ್ಳಿಯ ಕುಮಾರಿ ಸಾನ್ವಿ ಯಾರಗೊಪ್ಪ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ತ್ರಿನಯ ಎಸ್.ಕುಮಾರ್, ದ್ವಿತೀಯ
ಬಹುಮಾನ, ಬೆಂಗಳೂರಿನ ಯಲಹಂಕದ ಮಿಹೀತ್ ಕೆ. ಚಿತ್ರದುರ್ಗದ ನೆಹರ್
ಜೈನ್, ತೃತೀಯ ಬಹುಮಾನ, ಚಿತ್ರದುರ್ಗದ ಧನುಶ್ರೀ, ದಾವಣಗೆರೆಯ ನಿಧಿಶ್ರೀ ಕೆ. ಸಮಾದಾನಕ ಬಹುಮಾನ,
ದಾವಣಗೆರೆಯ ಸಮಾನ್ವಿತಾ ಆರ್, ಚಿತ್ರದುರ್ಗದ ಗಾಯನ
ಎಂ.ಟಿ. ಸೊಲ್ಲಾಪುರದ ದಿವಾಕರ್
ಎಸ್.ಜಿ. ವಿಜಯನಗರ ಜಿಲ್ಲೆಯ
ಮುದ್ದೆಬಿಹಾಳ್ನ ಸಾಕ್ಷಿ ಮೌಲಡಿಗೇರ.
ವಿಜೇತರ ವ್ಯಾಟ್ಸಪ್ಗೆ ಅವರವರ ಫಲಿತಾಂಶ,
ಅಭಿನಂದನಾ ಪತ್ರ ಕಳಿಸಲಾಗಿದೆ ಎಂದು
ಕಲಾಕುಂಚದ ಅಧ್ಯಕ್ಷರಾದ ವಾಸುದೇವ ಲಕ್ಷ್ಮಣ್ ರಾಯ್ಕರ್ ಪ್ರಕಟಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


