ಮೂಡುಬಿದಿರೆಯ ಸಮಾಜ ಮಂದಿರದಲ್ಲಿ "ಯುಗಾದಿ ಸಂವಾದಿ" ಕಾರ್ಯಕ್ರಮ

Upayuktha
0

ಮೂಡುಬಿದಿರೆ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ (ನೋಂ) ಕರ್ನಾಟಕ, ಮೂಡುಬಿದಿರೆ ತಾಲೂಕು ಸಮಿತಿ ದ.ಕ ಜಿಲ್ಲೆ ಇದರ ವತಿಯಿಂದ ದಿನಾಂಕ 03.04.2026ರಂದು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ "ಯುಗಾದಿ ಸಂವಾದಿ" ಕಾರ್ಯಕ್ರಮವನ್ನು ನಡೆಸಲಾಯಿತು.    


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷರಾದ ಡಾ.ಆನಂದ್ ಕಾರ್ಲ ರವರು ವಹಿಸಿಕೊಂಡಿದ್ದರು. ವೀಣಾ ಟಿ. ಶೆಟ್ಟಿ  ಅಧ್ಯಕ್ಷರು,  ಅ.ಭಾ.ಸಾ.ಪ ದಕ್ಷಿಣ ಕನ್ನಡ ಜಿಲ್ಲೆ ಇವರು ಉದ್ಘಾಟನೆಯನ್ನು ನೆರವೇರಿಸಿದರು.   


ಮೂಡುಬಿದಿರೆ ಸಮಿತಿಯ ಪರಿಚಯ, ಅಭಾಸಾಪ ದ ಧ್ಯೇಯೋದ್ದೇಶ ಮತ್ತು ಇದರ ವತಿಯಿಂದ ನಡೆಸಬಹುದಾದ ಕಾರ್ಯಕ್ರಮಗಳ ಮಾಹಿತಿಯನ್ನು ಅಭಾಸಾಪ ದ ಮಂಗಳೂರು ವಿಭಾಗ ಸಂಯೋಜಕ ಸುಂದರ ಇಳಂತಿಲರವರು ಸಭೆಗೆ ವಿವರಿಸಿದರು.  


ನಂತರದಲ್ಲಿ "ಯುಗಾದಿ ಸಂವಾದಿ" ಎಂಬ ಕಾರ್ಯಕ್ರಮ ವಿನೂತನ ರೀತಿಯಲ್ಲಿ ನಡೆಸಿಕೊಡಲಾಯಿತು.  ಇದರಲ್ಲಿ ಸಂವಾದಕರಾಗಿ ನಿತೇಶ್ ಬಲ್ಲಾಳ್ ಉಳಿಯಬೀಡು, ವೆಂಕಟರಮಣ ಕೆರೆಗೆದ್ದೆ, ಅನಿತಾ ಶೆಟ್ಟಿ ಮೂಡುಬಿದಿರೆ, ಧನಂಜಯ ಮೂಡುಬಿದಿರೆ ಇವರುಗಳು ಭಾಗವಹಿಸಿದ್ದು,  ಸಮನ್ವಯಕಾರರಾಗಿ ಡಾ. ವಿನಾಯಕ ಭಟ್ಟ ಗಾಳಿಮನೆ ಇವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. 


ಶಿಕ್ಷಕ ವಿನಯಚಂದ್ರ ಜೈನ್ ಇವರು ನಿರೂಪಿಸಿದರು. 


ಮಧುಸೂಧನ್‌ರವರು ಸ್ವಾಗತಿಸಿ ಸುಪ್ರಿಯಾ ಜೈನ್ ರವರು ಧನ್ಯವಾದ ಸಮರ್ಪಣೆಯನ್ನು  ನೆರವೇರಿಸಿದರು. 


ಸದಸ್ಯೆ ರಾದಿಕಾ ಕಾಮತ್‌ರವರ ಸರಸ್ವತಿ ವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮ, ಅಭ್ಯಾಗತರು ಸರಸ್ವತಿ ಮತ್ತು ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವುದರೊಂದಿಗೆ ಮುಂದುವರಿದು ಕೊನೆಯಲ್ಲಿ ಶಾಂತಿಮಂತ್ರದೊಂದಿಗೆ ಸಮಾಪನವಾಯಿತು.


ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ತಾಲೂಕು ಸಮಿತಿಯ ಸದಸ್ಯರು, ಹಿತೈಷಿಗಳು ಭಾಗವಹಿಸಿದ್ದರು.


ಅಭಾಸಾಪ ದ.ಕ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಲತೇಶ ಬಾಕ್ರಬೈಲ್ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top