ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ವರ್ಚುವಲ್ ಕಾರ್ಯಾಗಾರ

Upayuktha
0


ಪುತ್ತೂರು: ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ (ಸ್ವಾಯತ್ತ) ವ್ಯವಹಾರ ಆಡಳಿತ ವಿಭಾಗ, ಗೂಗಲ್ ಡೆವಲಪರ್ ಗ್ರೂಪ್ ಮತ್ತು IQAC ಸಹಯೋಗದೊಂದಿಗೆ "ನೆಕ್ಸ್ಟ್ ಜೆನ್ ಸ್ಕಿಲ್ಸ್: ಲಿವರೇಜಿಂಗ್ ಎಐ, ಡಿಜಿಟಲ್ ಮಾರ್ಕೆಟಿಂಗ್ ಅಂಡ್ ಗೂಗಲ್ ಅನಾಲಿಟಿಕ್ಸ್" ಎಂಬ ವಿಷಯದ ಕುರಿತು ಮೂರು ದಿನಗಳ ರಾಜ್ಯ ಮಟ್ಟದ ವರ್ಚುವಲ್ ಕೌಶಲ್ಯ ವರ್ಧನೆ ಕಾರ್ಯಾಗಾರವನ್ನು ಯಶಸ್ವಿಯಾಗಿ ಆಯೋಜಿಸಿತು.

ಈ ಕಾರ್ಯಕ್ರಮವು 'ದ ವೆಬ್ ಪೀಪಲ್' ಮತ್ತು 'ಸರ್ವಜ್ಞ ಎಜುಟೆಕ್' ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಯಿತು.


ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರಸ್ತುತತೆಯನ್ನು ಕಾಯ್ದುಕೊಳ್ಳಲು ಡಿಜಿಟಲ್ ಮತ್ತು ವಿಶೇಷ ಕೌಶಲ್ಯಗಳೊಂದಿಗೆ ವಿದ್ಯಾರ್ಥಿಗಳು ಸಜ್ಜಾಗುವುದರ ಮಹತ್ವವನ್ನು ಒತ್ತಿಹೇಳಿದರು.


ಈ ಸಂದರ್ಭದಲ್ಲಿ 'ದ ವೆಬ್ ಪೀಪಲ್' ಸಂಸ್ಥೆಯ ಬಿಸಿನೆಸ್ ಡೆವಲಪ್‌ಮೆಂಟ್ ಎಕ್ಸಿಕ್ಯೂಟಿವ್ ಆದ ಆದಿತ್ಯ ಕಲ್ಲೂರಾಯ  ಅವರು "ವಾಟ್ ಈಸ್ ಸೇಲ್ಸ್, ರಿಯಲಿ?" ಎಂಬ ವಿಷಯದ ಕುರಿತು ಮಾತನಾಡುತ್ತಾ, ಆಧುನಿಕ ವ್ಯವಹಾರದಲ್ಲಿ ಮಾರಾಟದ ಮೂಲಭೂತ ಅಂಶಗಳು ಮತ್ತು ಬದಲಾಗುತ್ತಿರುವ ಸ್ವರೂಪದ ಮೇಲೆ ಬೆಳಕು ಚೆಲ್ಲಿದರು.


ನಂತರ 'ಸರ್ವಜ್ಞ ಎಜುಟೆಕ್'ನ ಸಿಇಒ ಶ್ರೀನಿಧಿ ಆರ್. ಎಸ್. ಅವರು "AI ಇನ್ ಡಿಜಿಟಲ್ ಮಾರ್ಕೆಟಿಂಗ್" ಬಗ್ಗೆ ಮಾಹಿತಿ ನೀಡಿದರು. ಕೃತಕ ಬುದ್ಧಿಮತ್ತೆಯು (AI) ಮಾರ್ಕೆಟಿಂಗ್ ತಂತ್ರಗಳು ಮತ್ತು ಗ್ರಾಹಕರ ಒಡನಾಟವನ್ನು ಹೇಗೆ ಬದಲಾಯಿಸುತ್ತಿದೆ ಎಂಬುದನ್ನು ವಿವರಿಸಿದರು.


ಸಮಾರೋಪ ಸಮಾರಂಭದಲ್ಲಿ ವಿವೇಕಾನಂದ ಕಾಲೇಜಿನ ಬಿಸಿಎ ವಿಭಾಗದ ವಿದ್ಯಾರ್ಥಿ ಸಚಿನ್ ಉಪ್ಪರ್ಣ ಅವರು "ಯೂಸ್ ಆಫ್ ಗೂಗಲ್ ಅನಾಲಿಟಿಕ್ಸ್ ಇನ್ ಬಿಸಿನೆಸ್ ಡಿಸಿಶನ್ಸ್" ವಿಷಯದ ಕುರಿತು ಪ್ರಾತ್ಯಕ್ಷಿಕೆ ನೀಡಿದರು.ಈ ಕಾರ್ಯಾಗಾರದಲ್ಲಿ ವಿವಿಧ ಸಂಸ್ಥೆಗಳ 165 ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ವ್ಯವಹಾರ ವಿಭಾಗದ ಮುಖ್ಯಸ್ಥೆ ರೇಖಾ ಪಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Post a Comment

0 Comments
Post a Comment (0)
To Top