ದ.ಕ ಸಾಮಾಜಿಕ ಅರಣ್ಯ: ಡಿಸಿಎಫ್ ಸತೀಶ್ ಅಧಿಕಾರ ಸ್ವೀಕಾರ

Upayuktha
0



ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಎ.ವಿ.ಸತೀಶ್ ಅವರು ಬುಧವಾರ ಅಧಿಕಾರ ವಹಿಸಿಕೊಂಡರು.


ಈವರೆಗೂ ಹುಣಸೂರು ಆನೆ ಕಾರ್ಯಪಡೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಸತೀಶ್ ಅವರಿಗೆ ರಾಜ್ಯ ಸರ್ಕಾರ ಬಡ್ತಿ ನೀಡಿತ್ತು.


ಶಿವಮೊಗ್ಗ, ಪಾಂಡವಪುರದಲ್ಲಿ ಉಪ ವಲಯ ಅರಣ್ಯಾಧಿಕಾರಿ, ನಾಗರಹೊಳೆಯ ಅಂತರಸಂತೆ, ಡಿಬಿಕುಪ್ಪೆ ವನ್ಯಜೀವಿ ವಿಭಾಗ, ಮೈಸೂರು ಮೃಗಾಲಯ, ಹಸಿರು ವಲಯ ವಲಯ ಅರಣ್ಯಾಧಿಕಾರಿಯಾಗಿ, ಮೈಸೂರು ವಿಭಾಗ ಕಾರ್ಯ ಯೋಜನೆ, ಹುಣಸೂರು ವನ್ಯಜೀವಿ ವಿಭಾಗ, ಬಂಡೀಪುರದ ಹೆಡಿಯಾಲ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸತೀಶ್ ಸೇವೆ ಸಲ್ಲಿಸಿದ್ದಾರೆ.


ಅಧಿಕಾರ ಸ್ವೀಕಾರದ ಬಳಿಕ ಮಂಗಳೂರು ವೃತ್ತ ಅರಣ್ಯ ಸಂರಕ್ಷಣಾ್ಧಿಕಾರಿ ಕರಿಕಾಳನ್ ಅವರನ್ನು ಸತೀಶ್ ಭೇಟಿ ಮಾಡಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top