ಗೋವಿಂದ ದಾಸ ಕಾಲೇಜಿನಲ್ಲಿ ನಾಳೆ (ಏ. 2) ವಾರ್ಷಿಕೋತ್ಸವ

Upayuktha
0



ಸುರತ್ಕಲ್: ಇಲ್ಲಿನ ಗೋವಿಂದ ದಾಸ ಕಾಲೇಜಿನಲ್ಲಿ 2026ರ ಏಪ್ರಿಲ್ 2ರಂದು ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 9:30ಕ್ಕೆ ಕಾಲೇಜಿನ ‘ರಂಗಮಂದಿರ’ದಲ್ಲಿ ಕಾರ್ಯಕ್ರಮ ಆರಂಭವಾಗಲಿದೆ.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದೂ ವಿದ್ಯಾದಾಯಿನಿ ಸಂಘ (ರಿ.), ಸುರತ್ಕಲ್ ಅಧ್ಯಕ್ಷರಾದ ಶ್ರೀ ಜಯಚಂದ್ರ ಹತ್ವಾರ್ ಎಚ್ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಹ ನಿರ್ದೇಶಕರಾದ ಡಾ. ರವಿಪ್ರಕಾಶ್ ವೈ ಭಾಗವಹಿಸಲಿದ್ದಾರೆ.


ಕಾರ್ಯಕ್ರಮದಲ್ಲಿ ಆಡಳಿತ ನಿರ್ದೇಶಕರಾದ ಪ್ರೊ. ರಮೇಶ್ ಭಟ್ ಎಸ್.ಜಿ., ಉಪ ಪ್ರಾಂಶುಪಾಲರಾದ ಪ್ರೊ. ನೀಲಪ್ಪ ವಿ., ವಿದ್ಯಾರ್ಥಿ ಕಲ್ಯಾಣಾಧಿಕಾರಿಯಾದ ಡಾ. ಸೌಮ್ಯ ಪ್ರವೀಣ್ ಕೆ. ಹಾಗೂ ಪ್ರಾಂಶುಪಾಲರಾದ ಪ್ರೊ. ಹರೀಶ್ ಆಚಾರ್ಯ ಪಿ. ಉಪಸ್ಥಿತರಿರುವರು.


ಮಧ್ಯಾಹ್ನ 1:30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.


ವಿದ್ಯಾರ್ಥಿ ಸಂಘದ ಯುಜಿ ಹಾಗೂ ಪಿಜಿ ಕಾರ್ಯದರ್ಶಿಗಳು ಮತ್ತು ಸಂಯುಕ್ತ ಕಾರ್ಯದರ್ಶಿಗಳು ಕಾರ್ಯಕ್ರಮದ ಆಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top