ಕರಗ ಮಹೋತ್ಸವದಲ್ಲಿ ಕೆಂಗೇರಿಯ ವೈಭವವನ್ನು ತೆರೆದಿಡುವ ಇತಿಹಾಸ ಗ್ರಂಥ ಲೋಕಾರ್ಪಣೆ

Upayuktha
0

 ಸುತ್ತೂರು ಶ್ರೀಗಳಿಂದ ಕೃತಿ ಅನಾವರಣ


ಕೆಂಗೇರಿ: ಹಿರಿಯ ಇತಿಹಾಸ ಸಂಶೋಧಕ ಹಾಗೂ ಲೇಖಕರಾದ ಕೆಂಗೇರಿ ಚಕ್ರಪಾಣಿ ಅವರು ರಚಿಸಿರುವ, ಕೆಂಗೇರಿಯ ಸಾಂಸ್ಕೃತಿಕ ಪರಂಪರೆ ಹಾಗೂ ಇತಿಹಾಸವನ್ನು ಪರಿಚಯಿಸುವ ‘ಕೆಂಗೇರಿ: ಸಂಪ್ರದಾಯ–ಸಂಸ್ಕೃತಿ–ಸಾಧನೆಗಳ ಸಂಗಮ’ ಕೃತಿಯನ್ನು ಸುತ್ತೂರು ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ಕೆಂಗೇರಿಯ ಎಲ್ಲಮ್ಮ ದೇವಿಯ ಕರಗ ಮಹೋತ್ಸವದ ಸುವರ್ಣ ಸಂಭ್ರಮದ ಆರಂಭೋತ್ಸವದ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಮಹಾಸ್ವಾಮಿಗಳು, ಕೆಂಗೇರಿಯ ಸಾಂಸ್ಕೃತಿಕ ವೈಭವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಈ ಕೃತಿ ಮಹತ್ವದ ಪಾತ್ರವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಕಾಗಿನೆಲೆ ಸಂಸ್ಥಾನದ ಪೂಜ್ಯ ನಿರಂಜನಾನಂದ ಮಹಾಸ್ವಾಮಿಜಿ ಸೇರಿದಂತೆ ಭಾಗವಹಿಸಿದ್ದ ಭಕ್ತರು ಹಾಗೂ ಗಣ್ಯರು ಕೃತಿಯ ಮಹತ್ವವನ್ನು ಶ್ಲಾಘಿಸಿದರು.


ಈ ಕೃತಿಯನ್ನು ಶ್ರೀ ಕೆಂಗೇರಿ ಯಲ್ಲಮ್ಮ ದೇವಿ ಭಕ್ತ ಮಂಡಳಿಯವರು ಪ್ರಕಟಿಸಿದ್ದಾರೆ. ಪುಸ್ತಕ ಪ್ರಕಟಣೆಗೆ ಪ್ರೋತ್ಸಾಹ ನೀಡಿದ ಮಿತ್ರರಾದ ಶ್ರೀ ಕೆ.ಆರ್. ಸತ್ಯನಾರಾಯಣರು, ಶ್ರೀ ಮುನಿಆಂಜಿನಪ್ಪರು ಹಾಗೂ ಪುಸ್ತಕ ಬರವಣಿಗೆಗೆ ಮಾರ್ಗದರ್ಶನ ನೀಡಿದ ಶ್ರೀ ಟಿ.ಎಸ್. ಗೋಪಾಲ್ ರವರಿಗೆ ಲೇಖಕರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top