ಮೂಡುಬಿದಿರೆ: ಅಭಾಸಾಪ ವತಿಯಿಂದ ನಾಳೆ ಯುಗಾದಿ ಸಂವಾದ, ಸಂಭ್ರಮಾಚರಣೆ

Upayuktha
0


ಮೂಡುಬಿದಿರೆ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ (ನೋಂ) ಮೂಡುಬಿದಿರೆ ತಾಲೂಕು ಸಮಿತಿ ವತಿಯಿಂದ ಯುಗಾದಿ ಸಂವಾದ ಹಾಗೂ ಸಂಭ್ರಮಾಚರಣೆಯನ್ನು ಏಪ್ರಿಲ್ 3, 2026ರಂದು ಅಪರಾಹ್ನ 3.30ಕ್ಕೆ ಸಮಾರಂಭವಾಗಿ ಆಚರಿಸಲಾಗುತ್ತಿದೆ.


ಮೂಡುಬಿದಿರೆಯ ಸಮುದಾಯ ಮಂದಿರದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಅ.ಭಾ.ಸಾ.ಪ ಮೂಡುಬಿದಿರೆ ತಾಲೂಕು ಅಧ್ಯಕ್ಷರಾದ ಡಾ. ಆನಂದ ಕಾರ್ಲ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ವಿಭಾಗದ ಸಂಯೋಜಕರಾದ ಸುಂದರ ಇಳಂತಿಲ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ವೀಣಾ ಟಿ. ಶೆಟ್ಟಿ ಗೌರವ ಉಪಸ್ಥಿತಿ ನೀಡಲಿದ್ದಾರೆ.


ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ. ವಿನಾಯಕ ಭಟ್ಟ ಗಾಳಿಮನೆ ಸಮನ್ವಯಕಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳ ಕುರಿತು ಸಂವಾದ ನಡೆಯಲಿದೆ. ಜೈನ ವಿದ್ಯಾಲಯದ ಕನ್ನಡ ಅಧ್ಯಾಪಕರಾದ ಶ್ರೀ ನಿತೇಶ್ ಬಲ್ಲಾಳ್ “ಯುಗಾದಿ ಬೆಳಕು” ಕುರಿತು ಮಾತನಾಡಲಿದ್ದಾರೆ. ಶ್ರೀಮತಿ ಅನಿತಾ ಶೆಟ್ಟಿ “ಯುಗಾದಿ ಸಾಹಿತ್ಯ”ದ ವೈಶಿಷ್ಟ್ಯವನ್ನು ವಿವರಿಸಲಿದ್ದಾರೆ. ಬಾಬು ರಾಜೇಂದ್ರ ಶಾಲೆಯ ಸಂಸ್ಕೃತ ಅಧ್ಯಾಪಕರಾದ ಶ್ರೀ ವಿ. ವೆಂಕಟರಮಣ ಕೆರೆಗದ್ದೆ “ಯುಗಾದಿ– ಭಗವದ್ಗೀತೆ ಸಾರ”ವನ್ನು ವಿಶ್ಲೇಷಿಸಲಿದ್ದಾರೆ. ಪತ್ರಕರ್ತರಾದ ಶ್ರೀ ಧನಂಜಯ ಅವರು “ಯುಗಾದಿ ಲಘು ಹಾಸ್ಯ”ದ ಮೂಲಕ ಮನರಂಜಿಸಲಿದ್ದಾರೆ.


ಸಾಹಿತ್ಯ, ಸಂಸ್ಕೃತಿ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಯುಗಾದಿ ಸಂಭ್ರಮಾಚರಣೆಯನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top