ಉಡುಪಿ: ಶ್ರೀ ಶಂಕರ ಜಯಂತಿಯ ಆಚರಣೆಯ ಪ್ರಯುಕ್ತ ನರ್ತನ ನಮನ

Upayuktha
0


ಉಡುಪಿ: ಏಪ್ರಿಲ್ 19ರಂದು ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ, ಕೊಲ್ಲೂರು ಇಲ್ಲಿ ಮಧ್ಯಾಹ್ನ 12 ರಿಂದ 1.30 ರ ವರೆಗೆ  ಶ್ರೀ ಹೃದ್ಯಾ ಅಕಾಡೆಮಿ (ರಿ.) ಯ ನೃತ್ಯ ಗುರು ವಿದುಷಿ ಶ್ರೀಮತಿ ರೂಪಶ್ರೀ ಕೆ. ಎಸ್. ಹಾಗೂ ಅವರ ವಿದ್ಯಾರ್ಥಿನಿಯರಾದ ಹೃದ್ಯಾ ಭಟ್ ಕೆ, ಮನಸ್ವಿ ಭಟ್, ಅಶ್ವತಿ ಮಹೇಶ್, ಸಾಯಿ ಹಾರಿಕ, ಆನ್ವಿ ಅಮಿತ್ ಪೇಶ್ಕರ್, ಸುದೀಕ್ಷಾ ವಿ ಕೆ ಅವರು ಶ್ರೀ ಶಂಕರ ಜಯಂತಿಯ ಪ್ರಯುಕ್ತ ನರ್ತನ ನಮನ ಪ್ರಸ್ತುತ ಪಡಿಸಿದರು.


ಅಖಿಲ ಭಾರತೀಯ ಸಂಗೀತ ಮತ್ತು ನೃತ್ಯ ಕಲಾವಿದರ ಒಕ್ಕೂಟ (ರಿ.)ನ ಸಹಯೋಗದೊಂದಿಗೆ ನಡೆದ ಕೊಲ್ಲೂರಿನ ದೇವಸ್ಥಾನದ ಸಂಗೀತ ಮತ್ತು ನೃತ್ಯ ವೇದಿಕೆಯಲ್ಲಿ ನಡೆದ ಈ ನೃತ್ಯ ಕಾರ್ಯಕ್ರಮದಲ್ಲಿ ಶ್ರೀ ದೇವಿಯ ವಿಶೇಷವಾದ ಸ್ತುತಿ, ಕೃತಿ, ವರ್ಣ, ಪುರಂದರ ದಾಸರ ರಚನೆಯ ದೇವರನಾಮಗಳು, ಶಿವನ ನರ್ತನ ಪದ, ಕಾಳಿಂಗ ನರ್ತನ ಪದ ಮುಂತಾದ ವೈವಿಧ್ಯಮಯ ನೃತ್ಯವನ್ನು ಪ್ರದರ್ಶಿಸಿದರು. ಶ್ರೀಮತಿ ಪೂರ್ಣಿಮಾ ಶ್ರೀಧರ್ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top