ತುಳುಕೂಟ ಕುಡ್ಲ: ರತ್ನವರ್ಮ ಹೆಗ್ಗಡೆ ನಾಟಕ ಪ್ರಶಸ್ತಿಗೆ ಆಯ್ಕೆ

Upayuktha
0



ಉಜಿರೆ: ತುಳುಕೂಟ (ರಿ) ಕುಡ್ಲದ ವತಿಯಿಂದ ಮತ್ತು ಪೂಜ್ಯ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಪ್ರಾಯೋಜಕತ್ವದಲ್ಲಿ ಕೊಡಮಾಡುವ ರತ್ನವರ್ಮ ಹೆಗ್ಗಡೆ ನಾಟಕ ಪ್ರಶಸ್ತಿ (ಅಪ್ರಕಟಿತ ನಾಟಕ ಕೃತಿ)ಗೆ ರಾಜೇಶ್ ಶೆಟ್ಟಿ ದೋಟ (ಒಂಜಿ ಗುತ್ತುದ ಕಥೆ ) - ಪ್ರಥಮ, ವಿಲಾಸ್ ಕುಮಾರ್ ನಿಟ್ಟೆ (ಆಯೆ ಆಣ್ ಮಗೆ) ದ್ವಿತೀಯ ಹಾಗೂ ರಮ್ಯಾ ಬಿ.ಸಿ.ರೋಡ್ (ಭಕ್ತೆ ಪ್ರಹ್ಲಾದೆ-ಪೌರಾಣಿಕ ) ತೃತೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.  ತೀರ್ಪುಗಾರರಾಗಿ ಬಿ.ಸಿ.ರೋಡ್ ನ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಸ್ಥಾಪಕ, ನಿರ್ದೇಶಕ ಡಾ. ತುಕಾರಾಂ ಪೂಜಾರಿ ಹಾಗೂ ಖ್ಯಾತ ನಾಟಕಕಾರ ನಿರೂಪಕ ಕದ್ರಿ ನವನೀತ ಶೆಟ್ಟಿ ಸಹಕರಿಸಿದ್ದಾರೆ.  


ಇದೇ ಬರುವ ಎಪ್ರಿಲ್ 14ರ ಸಂಜೆ 4.30ಗೆ , ಮಂಗಳಾದೇವಿ ದೇವಸ್ಥಾನದಲ್ಲಿ ತುಳುಕೂಟ ನಡೆಸುವ" ಬಿಸು ಪರ್ಬ- 26" ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತುಳುಕೂಟದ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ, ಪ್ರಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಜಂಟಿ ಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



  ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top