ಹೌದು, ಗ್ರಂಥಾಲಯ ನಾಲ್ಕು ಅಕ್ಷರದ ಪದವಾಗಿದ್ದರೂ, ನಮ್ಮ ಜೀವನದ ನಾಲ್ಕು ದಿಕ್ಕುಗಳಿಗೂ ಬೆಳಕಾಗುವ ಜ್ಞಾನವನ್ನು ನೀಡುವ ಮಂದಿರವಿದು. ಜ್ಞಾನದ ಜೊತೆಗೆ ಶಾಂತಿಯನ್ನು ನೀಡಬಹುದಾದ ತಾಣವೆಂದರೆ ಅದು ಗ್ರಂಥಾಲಯವೇ.
"ಇನ್ನು ನನ್ನ ಜೀವನದಲ್ಲಿ ಗ್ರಂಥಾಲಯವು ನನ್ನನ್ನು ಓದಿನತ್ತ ಕೊಂಡೊಯ್ದಿದೆ. ಅದು ಹೇಗೆ ಎಂಬುದನ್ನು ನಾನು ಹೇಳುವೆ ಬನ್ನಿ, ಕಾಲೇಜಿಗೆ ಸೇರಿದ ನನ್ನನ್ನು ಮೊದಲು ಆಕರ್ಷಿಸಿದ್ದು ಕ್ಯಾಂಪಸ್. ಆದರೆ, ಮತ್ತೆ ನನ್ನ ಕಣ್ಣು ಅರಳಿಸಿದ್ದು ಆ ಜ್ಞಾನ ದೇಗುಲ.
ಹೌದು, ಜ್ಞಾನ ಮಂದಿರಕ್ಕೆ ಕಾಲಿಟ್ಟಾಗಲೇ ನನಗೆ ಹೊಸ ಲೋಕಕ್ಕೆ ಕಾಲಿಟ್ಟೇನೆಂಬಂತೆ ಭಾಸವಾಗಿತ್ತು. ಅಲ್ಲಿ ನಿಂತು ಸುತ್ತಲೂ ಕಣ್ಣು ಹಾಯಿಸಿದರೆ ಸಾವಿರಾರು ಪುಸ್ತಕಗಳು. ಸಾಲು ಸಾಲಾಗಿ ಮೌನವಾಗಿ ನಿಂತ ನೂರಾರು ಪುಸ್ತಕಗಳು ತಮ್ಮ ಕಥೆಗಳನ್ನು ಹೇಳಲು ಹಾತೊರೆಯುತ್ತಿರುವುದೇನೋ ಎಂಬ ಕುತೂಹಲ ನನ್ನಲ್ಲಿ ಮೂಡಿತು. ಅದರಲ್ಲಿನ ವಿಷಯದ ಕುರಿತು ತಿಳಿಯಲು ನಾನು ಲೈಬ್ರರಿ ಕಾರ್ಡ್ಗಳನ್ನು ಮಾಡಿಸಿ ಬೇಕಾದಂತಹ ಪುಸ್ತಕಗಳನ್ನ ತೆಗೆದುಕೊಳ್ಳುತ್ತಿದ್ದೆ.
ಇನ್ನು ನನ್ನ ಮನಸಿಗೆ ಮುದನೀಡಿದ ಪುಸ್ತಕವೆಂದರೆ "ಹೇಳಿಹೋಗು ಕಾರಣ" ಹಾಗೂ ಇನ್ನಿತರ ಹಲವಾರು ಕಥೆ, ಕಾದಂಬರಿಗಳು ನನ್ನ ಹೃದಯದ ಕದ ತಟ್ಟಿದವು. ಅದರಲ್ಲೂ ನನಗೆ ಪ್ರೀತಿ- ಪ್ರೇಮ, ಜೀವನದ ಹಾದಿಯಲ್ಲಿನ ಸಣ್ಣ ಪುಟ್ಟ ಘಟನೆಗಳ ಕುರಿತಾದ ಬರಹಗಳೆಂದರೆ ನನಗೆ ಅಚ್ಚು ಮೆಚ್ಚು". ಹೆಚ್ಚಾಗಿ ಕ್ಲಾಸ್ ಫ್ರೀ ಇದ್ದಂತಹ ಸಂದರ್ಭದಲ್ಲಿ ನಾನು ನನ್ನ ಗೆಳತಿ ಲೈಬ್ರರಿಗೆ ಹೋಗಿ ಅಲ್ಲೇ ಕುಳಿತು ಕಾದಂಬರಿಗಳನ್ನು ಓದುವುದು ಉಂಟು, ಇನ್ನು ಒಳ್ಳೆಯ ಪುಸ್ತಕ ಸಿಕ್ಕಿದ್ರೆ ಸಾಕು ಮನೆಗೆ ತೆಗೆದುಕೊಂಡು ಬಂದು ಓದುತ್ತಿದ್ದೆವು. ಕೆಲವೊಮ್ಮೆ ಓದಿನ ಆಳಕ್ಕೆ ಇಳಿದ ನಮಗೆ ಪುಸ್ತಕ ಯಾವಾಗ ಹಿಂತಿರುಗಿಸಬೇಕೆಂದು ಮರೆತು ಬಿಡುತ್ತಿದ್ದೆವು. ಆಮೇಲೆ ಒಂದಿಷ್ಟು ನೆಪ ಹೇಳಿ ಫೈನ್ ಕಟ್ಟುವುದೇ ನಮ್ಮ ಗೌಜಿ ಆಗಿತ್ತು. ಇವೆಲ್ಲವೂ ನಮ್ಮ ಜೀವನದಲ್ಲಿ ನಡೆದದ್ದೇ ಓದುವ ಹುಮ್ಮಸ್ಸಿನಿಂದ.
ವಿದ್ಯಾರ್ಥಿಯಾಗಿರುವ ನಾವೆಲ್ಲರೂ ಒಂದು ಮಾತನ್ನು ನೆನಪಿಟ್ಟುಕೊಳ್ಳಬೇಕು. ನಾವೆಲ್ಲರೂ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲೇ ಕಾಲ ಕಳೆಯುತ್ತಾ ನಮ್ಮ ಭಾವನೆಗಳನ್ನು ಮರೆತಿದ್ದೇವೆ. ಮೊಬೈಲ್ ನಲ್ಲಿ ಕಾದಂಬರಿಗಳ ಸಾರಾಂಶವನ್ನು ನೋಡಬಹುದೇ ಹೊರತು, ಪುಸ್ತಕ ಓದುವಾಗ ಸಿಗುವ ಆ ರುಜುವಾದ ಅನುಭೂತಿಯು ಅಲ್ಲಿ ಸಿಗದು. ಅದಕ್ಕಾಗಿಯೇ ನಮ್ಮ ಭಾವನೆಗಳು ನಮಗೆ ತಿಳಿಯದಾಗಿದೆ. ಒಂದು ವೇಳೆ ಒಂದು ಒಳ್ಳೆಯ ಕಾದಂಬರಿಯನ್ನು ಓದುತ್ತಿದ್ದರೆ ನಮ್ಮೊಳಗಿನ ಭಾವನೆಯನ್ನು ನಾವು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದಲೇ ನಮ್ಮಲ್ಲಿನ ಓದುವ ಕೌಶಲ್ಯ ಹೆಚ್ಚಾಗಲು ಸಾಧ್ಯವಾಗುತ್ತದೆ. ಅದಕ್ಕಾಗಿಯೇ ನಾವು ಸಾಮಾಜಿಕ ಜಾಲತಾಣವನ್ನು ಮಿತವಾಗಿ ಬಳಸಿ, ಗ್ರಂಥಾಲಯದ ಕಡೆ ಹೆಜ್ಜೆ ಹಾಕಬೇಕಿದೆ.
"ನಮ್ಮಲ್ಲಿ ಒಂದು ಗುಣವನ್ನು ಬೆಳೆಸಿಕೊಳ್ಳಬೇಕು ಒಂದು ಉತ್ತಮ ಕಾಲೇಜನ್ನು ಆಯ್ಕೆ ಮಾಡಿಕೊಳ್ಳುವಾಗ ಮುಖ್ಯವಾಗಿ ಒಂದು ಉತ್ತಮ ಗ್ರಂಥಾಲಯವಿರುವ ಜ್ಞಾನ ದೇಗುಲವನ್ನು ಆರಿಸಿಕೊಂಡರೆ ಉತ್ತಮ ಎಂದು ನನ್ನ ಅಭಿಪ್ರಾಯ.
-ಆಶಾ ದಾಸಪ್ಪ
ದ್ವಿತೀಯ ಪತ್ರಿಕೋದ್ಯಮ ವಿಭಾಗ.
ವಿವೇಕಾನಂದ ಕಾಲೇಜು ಪುತ್ತೂರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



