ಭಾರತದ ಷೇರು ಮಾರುಕಟ್ಟೆಯ ಸರ್ವಾಧಿಪತಿಗಳು

Upayuktha
0


-ಟಿ. ದೇವಿದಾಸ್


1) ಟಾಟಾ ಗ್ರೂಪ್ಸ್: 

328 ಕ್ಕಿಂತ ಹೆಚ್ಚು ಬಿಲಿಯನ್ ಡಾಲರ್ ಮಾರ್ಕೆಟ್ ಕ್ಯಾಪ್ ಹೊಂದಿದ ಟಾಟಾ ಗ್ರೂಪ್ ದೇಶದ ಅತಿದೊಡ್ಡ ಕಂಪನಿ ಅನಿಸಿಕೊಂಡಿದೆ. ಸುಮಾರು 287 ಸಂಸ್ಥೆಗಳನ್ನು ಹೊಂದಿರುವ ಟಾಟಾ ಗ್ರೂಪ್ ನೂರಕ್ಕೂ ಹೆಚ್ಚು ದೇಶಗಳಲ್ಲಿ ತನ್ನ‌ ಕಂಪನಿಗಳನ್ನು ಸ್ಥಾಪಿಸಿದೆ. ೧೫೦ ದೇಶಗಳಿಗೆ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಭಾರತೀಯ ಷೇರುಮಾರುಕಟ್ಟೆಯಲ್ಲಿ ನೋಂದಣಿ ಆದ ಕಂಪನಿಗಳ ಸಂಖ್ಯೆ 30. ಅವುಗಳಲ್ಲಿ ಮುಖ್ಯವಾದ ಕೆಲವು ಹೀಗಿವೆ:


Tata Consultancy services, Tata Steel Limited, Tata motors Limited,Titan Company Limited, Tata Chemicals Limited, Tata Power Company Limited, The Indian Hotels Company Limited, Tata Global Beverages Limited,


Tata Communications Limited, Voltas Limited, Trent Limited, Tata Sponge Iron Limited, Tata Investment Corporation Limited, Tata Metaliks Limited, Tata Elxsi Limited, Nelco Limited, Tata Coffee Limited, Tata Consumer Products Ltd, Tata Auto Comp System limited, Rallis limited, Tata tinplate limited, Automotive stampage assembly limited. ಟಾಟಾ ಗ್ರೂಪಿನ ಒಟ್ಟೂ ಆದಾಯ ಸರಿಸುಮಾರು 15.34 ಲಕ್ಷ ಕೋಟಿಗಿಂತಲೂ ಅಧಿಕ. ನಿವ್ವಳ ಆದಾಯ: 1.13 ಲಕ್ಷ ಕೋಟಿ. ದುಡಿಯುವ ಉದ್ಯೋಗಿಗಳ ಸಂಖ್ಯೆ: ಸುಮಾರು 12 ಲಕ್ಷಕ್ಕಿಂತ ಹೆಚ್ಚು. ಟಾಟಾ ಗ್ರೂಪಿನ ಒಟ್ಟೂ ಮಾರುಕಟ್ಟೆ ಬಂಡವಾಳೀಕರಣ 26.39ಲಕ್ಷ ಕೋಟಿ. 1968ರಲ್ಲಿ ಆರಂಭವಾದ ಟಾಟಾ ಗ್ರೂಪಿನ ಪ್ರಧಾನ ಕಚೇರಿ ಮುಂಬಯಿಯಲ್ಲಿದೆ. ತಮ್ಮ ವೃತ್ತಿ ಬದುಕಿನುದ್ದಕ್ಕೂ ಟಾಟಾ ನಾಲ್ಕು ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದರು: ಕಬ್ಬಿಣ ಮತ್ತು ಉಕ್ಕಿನ ಕಂಪೆನಿಯನ್ನು ಸ್ಥಾಪಿಸುವುದು, ಒಂದು ಹೆಗ್ಗುರುತಾದ ಹೊಟೆಲನ್ನು ಕಟ್ಟುವುದು, ವಿಶ್ವದರ್ಜೆಯ ಶಿಕ್ಷಣ ಸಂಸ್ಥೆಯನ್ನು ನಿರ್ಮಿಸುವುದು, ಜಲವಿದ್ಯುತ್ ಶಕ್ತಿಯನ್ನು ಅಭಿವೃದ್ಧಿಪಡಿಸುವುದು.


ರಾಜಕೀಯ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಕಳ್ಳತನ, ಸಾಮೂಹಿಕ ಹತ್ಯೆಗಳು ಮತ್ತು ಗ್ರಾಹಕರು, ಭಾರತೀಯ ನಾಗರಿಕರು ಮತ್ತು ನೈಸರ್ಗಿಕ ಸಂಪನ್ಮೂಲಗಳ ಶೋಷಣೆಯ ವರದಿಗಳಿಗಾಗಿ ಟಾಟಾ ಗ್ರೂಪಿನ ಕಂಪೆನಿಯು ವಿವಾದವನ್ನು ಸೆಳೆದಿದೆ. ಕೇರಳದ ಮುನ್ನಾರ್ ಪ್ರಕರಣ, ಒಡಿಶಾದ ಕಳಿಂಗ ನಗರ ಘಟನೆ, ಬರ್ಮಾದ ಮಿಲಿಟರಿ ಆಡಳಿತಕ್ಕೆ ಸರಬರಾಜು, ಸಿಂಗೂರ್ ಭೂ ಸ್ವಾಧೀನ, ಒಡಿಶಾದ ಧಮ್ರಾ ಬಂದರು ಗೊಂದಲ, ತಾಂಜಾನಿಯಾದಲ್ಲಿ ಪ್ರಸ್ತಾವಿತ ಸೋಡಾ ಹೊರತೆಗೆಯುವ ಘಟಕ, ಎಪಿಕ್ ಸಿಸ್ಟೆಮ್ಸ್ ವ್ಯಾಪಾರ-ರಹಸ್ಯ ಪ್ರಕರಣದ ತೀರ್ಪು, 2018ರ ಎನ್ ಸಿಎಲ್ ಟಿ ತೀರ್ಪು- ಇವು ಟಾಟಾ ಗ್ರೂಪಿನ ಮೇಲಿನ ವಿವಾದಿತ ಆರೋಪಗಳು. ಬೆಲ್ಲ ಇದ್ದಲ್ಲೇ ತಾನೆ ಇರುವೆ ಮುತ್ತುವುದು? ಊರಿದ್ದಲ್ಲಿ ಹೊಳಗೆರೆ ಮರ ಇದ್ದೇ ಇರಬೇಕಲ್ಲ! ಇವೆಲ್ಲವೂ ಯಾರ್ಯಾರದ್ದೋ ರಾಜಕೀಯ ಅಜೆಂಡಾ ಅಥವಾ ದುರುದ್ದೇಶಪೂರಿತ ಪ್ರೇರಿತ ಯಾಕಾಗಿರಬಾರದು?


 2) ರಿಲಯನ್ಸ್ ಇಂಡಸ್ಟ್ರೀಸ್: 

ರಿಲಯನ್ಸ್ಇಂಡಸ್ಟ್ರೀಸ್ ಲಿಮಿಟೆಡ್ (RIL) ಮುಕೇಶ್ ಅಂಬಾನಿ ನೇತೃತ್ವದ ಭಾರತದ ಅತಿದೊಡ್ಡ ಖಾಸಗಿ ವಲಯದ ಬಹುರಾಷ್ಟ್ರೀಯ ಸಂಸ್ಥೆಯಾಗಿದೆ. ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಇದು ಇಂಧನ, ಪೆಟ್ರೋಕೆಮಿಕಲ್ಸ್, ದೂರಸಂಪರ್ಕ (Jio), ಚಿಲ್ಲರೆ ವ್ಯಾಪಾರ (Retail) ಮತ್ತು ಡಿಜಿಟಲ್ ಸೇವೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತದೆ. Fortune Global ೫೦೦ ಪಟ್ಟಿಯಲ್ಲಿರುವ ಈ ಕಂಪನಿಯು ಭಾರತದ ಅತಿ ಹೆಚ್ಚು ಮಾರುಕಟ್ಟೆ ಬಂಡವಾಳ ಹೊಂದಿರುವ ಸಂಸ್ಥೆಯಾಗಿದೆ. ೧೯೫.೨೩ (೧೮,೨೭,೫೬೦ಕೋಟಿ ರೂ.) ಬಿಲಿಯನ್ ಡಾಲರ್ ಮಾರ್ಕೆಟ್ ಕ್ಯಾಪ್ ಹೊಂದಿದ ಮುಖೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ದೇಶದ ಎರಡನೆ ಅತಿದೊಡ್ಡ ಕಂಪನಿ ಅನಿಸಿಕೊಂಡಿದೆ. ಸುಮಾರು 94 ಬೇರೆ ಬೇರೆ ಸಂಸ್ಥೆಗಳನ್ನು (Subsidiaries) ಒಟ್ಟಾಗಿ ಸೇರಿಸಿ ರಿಲಯನ್ಸ್ ಇಂಡಸ್ಟ್ರೀಸ್ ಎಂದು ನಾಮಕರಣಗೊಂಡಿದೆ. ಅವೆಂದರೆ, Reliance Jio, Reliance digital, Reliance petroleum, Reliance life science,Reliance logistics, Reliance solar energy, Reliance industries infra, Network 18, Reliance industries investment, Reliance aerospace. ಹೀಗೆ ಹಲವು ಸಂಸ್ಥೆಗಳನ್ನು ಸೇರಿಸಿ  ರಿಲಯನ್ಸ್ ಇಂಡಸ್ಟ್ರೀಸ್ ಎಂದು ಷೇರು ಮಾರುಕಟ್ಟೆಯಲ್ಲಿ ನೋಂದಾಯಿಸಲ್ಪಟ್ಟಿದೆ.


ಧೀರೂಭಾಯಿ ಅಂಬಾನಿಯವರಿಂದ ೧೯೫೮ರಲ್ಲಿ ಸ್ಥಾಪನೆಗೊಂಡ ಇದು ೯.೯೮ಲಕ್ಷ ಕೋಟಿ ಆದಾಯವನ್ನು, 81,309 ಕೋಟಿ ರೂ ನಿವ್ವಳ ಆದಾಯವನ್ನು ಮತ್ತು ಒಟ್ಟೂ ಆಸ್ತಿ ಮೌಲ್ಯ 19.50 ಲಕ್ಷ ಕೋಟಿ ರೂ ಹೊಂದಿದೆ. ಸ್ಟಾಕ್ ಮಾರುಕಟ್ಟೆಯಲ್ಲಿನ ಇತ್ತೀಚಿನ ವರದಿಗಳ ಪ್ರಕಾರ, ರಿಲಯನ್ಸ್ ಷೇರುಗಳು ಅತಿಯಾದ ಮಾರಾಟದ (oversold) ಪ್ರದೇಶದಲ್ಲಿದ್ದು, ಅಲ್ಪಾವಧಿಯ ಒತ್ತಡವನ್ನು ಎದುರಿಸುತ್ತಿವೆ. ಕಂಪನಿಯು ಇಂಧನದಿಂದ ರಾಸಾಯನಿಕಗಳಿಗೆ (Oil-to-Chemicals) ಪರಿವರ್ತನೆಯಾಗುವ ಮೂಲಕ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿದೆ. 


೨೦೨೫ರ ವರದಿಗಳ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಸುಮಾರು ೪,೦೩,೩೦೩ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದು, ವಿಶ್ವದ ಅತಿದೊಡ್ಡ ಉದ್ಯೋಗದಾತ ಕಂಪನಿಗಳಲ್ಲಿ ಒಂದಾಗಿದೆ. ಈ ಉದ್ಯೋಗಿಗಳಲ್ಲಿ ಹೆಚ್ಚಿನವರು ಚಿಲ್ಲರೆ (Retail) ಮತ್ತು ದೂರಸಂಪರ್ಕ (Jio) ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಿಲಯನ್ಸ್ ರಿಟೇಲ್‌ನಲ್ಲಿ ಗರಿಷ್ಠ ಸಂಖ್ಯೆಯ ಉದ್ಯೋಗಿಗಳಿದ್ದರೆ, ಜಿಯೋ ಮತ್ತು ಜವಳಿ ವಿಭಾಗಗಳಲ್ಲೂ ಭಾರಿ ಉದ್ಯೋಗಿಗಳಿದ್ದಾರೆ. 


ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ವಿಶ್ವದ ಟಾಪ್‌ ೨೦ಉದ್ಯೋಗದಾತ ಕಂಪನಿಗಳ ಪಟ್ಟಿ ಸೇರಿದೆ. ಕೋಕಾ-ಕೋಲಾ, ಮರ್ಸಿಡಿಸ್, ಹೋಂಡಾ, ಯಮಹಾ ಮತ್ತು ಸೌದಿ ಅರಾಮ್ಕೊದಂತಹ ಬೃಹತ್ ಕಂಪನಿಗಳಿಗಿಂತಲೂ ರಿಲಯನ್ಸ್ ಹೆಚ್ಚಿನ ಸ್ಥಾನದಲ್ಲಿದೆ.


Growth is Life ಎಂಬುದು ಇದರ ಧ್ಯೇಯ ವಾಕ್ಯ. ಒಂಬತ್ತು ರಾಷ್ಟ್ರೀಯ ಪ್ರಶಸ್ತಿ ಮತ್ತು ಮನ್ನಣೆಗಳನ್ನು ಹೊಂದಿರುವ ಈ ಕಂಪೆನಿಯನ್ನು ವಿವಾದಗಳು ಸುತ್ತಿಕೊಂಡಿವೆ. ಒಎನ್‌ಜಿಸಿ ಜೊತೆಗಿನ ಸಂಬಂಧ, ಸ್ವಜನಪಕ್ಷಪಾತ, ಎನ್‌ಐಸಿಎಲ್, ಆರ್‌ಐಎಲ್ ವಿಮಾನವನ್ನು ನೆಲಸಮ, ಕೃಷ್ಣ ಗೋದಾವರಿ (ಕೆಜಿ) ಬೇಸಿನ್ ಗ್ಯಾಸ್, ರಿಲಯನ್ಸ್ ಜಿಯೋ ವಿರುದ್ಧ ಅರ್ಜಿ, ಭವಿಷ್ಯದ ಚಿಲ್ಲರೆ ವ್ಯಾಪಾರ ಮತ್ತು ಸ್ವಾಧೀನ- ಮುಂತಾದ ವಿವಾದಗಳು ಸುತ್ತಿಕೊಂಡಿವೆ. ಇದರ ಸತ್ಯಾಸತ್ಯತೆಯೂ ಪ್ರಶ್ನಾರ್ಹವಲ್ಲವೆ? ಯಾಕೆಂದರೆ, ಇಷ್ಟು ಬೃಹತ್ ಪ್ರಮಾಣದ ಉದ್ಯಮವೊಂದು ಬೆಳೆಯುವಾಗ ಸಾಂದರ್ಭಿಕವಾಗಿ ತೆಗೆದುಕೊಂಡ ನಿರ್ಧಾರಗಳು, ಕ್ರಮಗಳು ಇನ್ನಂದರ ಮೇಲೆ ಪ್ರಭಾವವನ್ನೋ, ಪರಿಣಾಮವನ್ನೋ ಬೀರದಿರಲು ಸಾಧ್ಯವಿಲ್ಲ.


3) ಅದಾನಿ ಗ್ರೂಪ್ಸ್: 

ಆಡಳಿತಾರೂಢ ಭಾರತೀಯ ಜನತಾ ಪಕ್ಷದೊಂದಿಗೆ ನಿಕಟ ಸಂಬಂಧಕ್ಕೆ ಹೆಸರುವಾಸಿಯಾದ ಅದಾನಿ ಗ್ರೂಪ್ (Adani Group) ಭಾರತದ ಪ್ರಮುಖ ಮೂಲಸೌಕರ್ಯ ಮತ್ತು ಇಂಧನ ಸಮೂಹವಾಗಿದ್ದು, ಬಂದರುಗಳು, ವಿದ್ಯುತ್ ಉತ್ಪಾದನೆ, ನವೀಕರಿಸಬಹುದಾದ ಇಂಧನ, ಮತ್ತು ಲಾಜಿಸ್ಟಿಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಗೌತಮ್ ಅದಾನಿ ನೇತೃತ್ವದ ಈ ಸಂಸ್ಥೆ 1988 ರಲ್ಲಿ ಸ್ಥಾಪನೆಯಾಯಿತು. ಸದ್ಯ ೨೦೩೦ರ ವೇಳೆಗೆ ೫೦GW ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ತಲುಪುವ ಗುರಿಯನ್ನು ಹೊಂದಿದೆ. 


ಅದಾನಿ ಗ್ರೂಪ್‌ನ ಪ್ರಮುಖ ಅಂಶಗಳೆಂದರೆ, ವ್ಯಾಪಾರ ವಿಸ್ತರಣೆ: ಬಂದರುಗಳು (Adani Ports), ವಿದ್ಯುತ್ (Adani Power), ಹಸಿರು ಇಂಧನ (Adani Green Energy), ಮತ್ತು ಇಂಧನ ಪರಿಹಾರಗಳು (Adani Energy Solutions) ಇವರ ಮುಖ್ಯ ವ್ಯವಹಾರಗಳಾಗಿವೆ. ಮುಂಬರುವ ದಿನಗಳಲ್ಲಿ ವಿದ್ಯುತ್ ಕ್ಷೇತ್ರದಲ್ಲಿ $೬೦ ಶತಕೋಟಿಗೂ ಹೆಚ್ಚು ಹೂಡಿಕೆ ಮಾಡುವ ಯೋಜನೆ ಹೊಂದಿದೆ. NDTV ಮತ್ತು ಇಂಡಿಯಾ ಟಿವಿಯ ಮೂಲ ಸಂಸ್ಥೆಯಾದ ಇನ್ಡಿಪೆಂಡೆಂಟ್ ನ್ಯೂಸ್ ಸರ್ವಿಸ್ (INS) ನಲ್ಲಿ ಪಾಲನ್ನು ಹೊಂದಿದೆ. ಅಮೆರಿಕದ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಕಮಿಷನ್ (SEC) ಪ್ರಕರಣವನ್ನು ಎದುರಿಸುತ್ತಿದ್ದು, ಅದರ ವ್ಯಾಪ್ತಿಯನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ವಿವಾದವೆಂಬುದು ಯಾವ ಸಿರಿವಂತರನ್ನು ಬಿಟ್ಟಿದೆ ಹೇಳಿ?


ಏಳು ಲೀಸ್ಟೆಡ್ ಕಂಪನಿಗಳನ್ನು ಹೊಂದಿರುವ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರುಪ್ಸ್ ಕಂಪನಿಗಳ ಮಾರ್ಕೆಟ್ ಕ್ಯಾಪ್ ೨೦೦ ಬಿಲಿಯನ್ ಡಾಲರ್ ಗಿಂತ ಮೇಲಿದೆ. ಸದ್ಯಕ್ಕೆ ಮಾರ್ಕೆಟ್ ಕ್ಯಾಪ್ ದೃಷ್ಟಿಯಿಂದ ಇದು ಮೂರನೇ ಸ್ಥಾನದಲ್ಲಿದೆ. ಸೋಲಿಲ್ಲದ ಸರದಾರ ಎನಿಸಿಕೊಂಡ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪಿನ  ಎಲ್ಲ ಕಂಪನಿಗಳ ಷೇರು ಬೆಲೆ‌ ಸಾರ್ವಕಾಲಿಕ ಎತ್ತರದಲ್ಲಿದೆ. ಅದಾನಿ ಗ್ರೂಪಿನ ಕಂಪನಿಗಳೆಂದರೆ, Adani Enterprises. Adani Green Energy. Adani Ports & SEZ. Adani Transmission. Adani Total Gas. Adani Power. Adani Wilmar, ಅಂಬುಜಾ ಸಿಮೆಂಟ್ಸ್, ಎಸಿಸಿ, ಅದಾನಿ ವಿವಿ, ಎನ್ ಡಿಟಿವಿ, ಅದಾನಿ ಫೌಂಡೇಷನ್, ಅದಾನಿ ಎನರ್ಜಿ ಸೊಲ್ಯುಷನ್ಸ್ – ಇವೇ ಮುಂತಾದ ೧೩ ಅಂಗಸಂಸ್ಥೆಗಳನ್ನು ಹೊಂದಿದೆ.


ಗೌತಮ್ ಅದಾನಿ ಅವರು ಭಾರತದ ಅತಿದೊಡ್ಡ ಸಮಗ್ರ ಮೂಲಸೌಕರ್ಯ ಗುಂಪಾದ ಅದಾನಿ ಗ್ರೂಪ್‌ನ ಸ್ಥಾಪಕರು ಮತ್ತು ಅಧ್ಯಕ್ಷರು. ಸಾಂಪ್ರದಾಯಿಕ B2B ವಲಯಗಳಿಂದ B2C ವಲಯಗಳಿಗೆ ತನ್ನ ಅಸ್ತಿತ್ವವನ್ನು ಹೆಚ್ಚಿಸಿಕೊಳ್ಳುತ್ತಿದೆ. ಈ ಗುಂಪಿನ ವ್ಯವಹಾರಗಳಲ್ಲಿ ವಿಶ್ವ ದರ್ಜೆಯ ಸಾರಿಗೆ ಲಾಜಿಸ್ಟಿಕ್ಸ್ ವ್ಯವಹಾರ, ಉತ್ಪಾದನೆ, ಪ್ರಸರಣ ಮತ್ತು ವಿತರಣೆ, ನೈಸರ್ಗಿಕ ಸಂಪನ್ಮೂಲಗಳು, ವಿಮಾನ ನಿಲ್ದಾಣಗಳು, ರಕ್ಷಣಾ ಮತ್ತು ಏರೋಸ್ಪೇಸ್, ದತ್ತಾಂಶ ಕೇಂದ್ರಗಳು, ಸಿಮೆಂಟ್, ಮಾಧ್ಯಮ, ರಸ್ತೆಗಳು, ರೈಲು, ಮೆಟ್ರೋ, ರಿಯಲ್ ಎಸ್ಟೇಟ್, ನಗರ ಪುನರಾಭಿವೃದ್ಧಿ, ಆಹಾರ FMCG, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಮತ್ತು ವಿಶ್ವದ ಅತ್ಯಂತ ಯಶಸ್ವಿ ವ್ಯಾಪಾರ ಇನ್ಕ್ಯುಬೇಟರ್‌ಗಳಲ್ಲಿ ಒಂದಾದ ಸಮಗ್ರ ಇಂಧನ ಮೂಲಸೌಕರ್ಯ ಪೋರ್ಟ್‌ಫೋಲಿಯೊ ಸೇರಿವೆ.              


ಶ್ರೀ ಅದಾನಿ ಭಾರತದ ಮೊದಲ ಸ್ಥಾಪಕರು ಮತ್ತು ಮೊದಲ ತಲೆಮಾರಿನ ಉದ್ಯಮಿಯಾಗಿದ್ದು, ಅವರು ವ್ಯಾಪಾರ ಗುಂಪನ್ನು $200 ಶತಕೋಟಿಗೂ ಹೆಚ್ಚಿನ ಮಾರುಕಟ್ಟೆ ಬಂಡವಾಳೀಕರಣಕ್ಕೆ ಮುನ್ನಡೆಸಿದ್ದಾರೆ. ಗ್ರಾಮೀಣ ಭಾರತದಲ್ಲಿ ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ನವೀಕರಿಸಲು ಅವರು $7 ಶತಕೋಟಿ ಕೊಡುಗೆ ನೀಡುತ್ತಿದ್ದಾರೆ. ಭಾರತದ ಹಸಿರು ಇಂಧನ ಪರಿವರ್ತನೆಯನ್ನು ಸುಗಮಗೊಳಿಸಲು ಅವರು $70 ಶತಕೋಟಿ ಕೊಡುಗೆ ನೀಡಿದ್ದಾರೆ.


ಒಟ್ಟು ಸುಮಾರು $210 ಬಿಲಿಯನ್ ಗೀಮ್ತಲೂ ಹೆಚ್ಚಿನ ಮಾರುಕಟ್ಟೆ ಬಂಡವಾಳದೊಂದಿಗೆ, ಅದಾನಿ ಗ್ರೂಪ್ ಹನ್ನೆರಡು ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಕಂಪನಿಗಳ ಬಂಡವಾಳ ಸಂಗ್ರಹವಾಗಿದ್ದು, ಇದು ರಾಷ್ಟ್ರ ನಿರ್ಮಾಣ ಮತ್ತು ಒಳ್ಳೆಯತನದೊಂದಿಗೆ ಬೆಳವಣಿಗೆ ಎಂಬ ಸಿನರ್ಜಿಟಿಕ್ ತತ್ವಗಳನ್ನು ಅನುಸರಿಸುತ್ತದೆ.


3.09 ಲಕ್ಷ ಕೋಟಿಗಿಂತಲೂ ಅಧಿಕ ಆದಾಯವನ್ನು, ಸುಮಾರು 37 ಸಾವಿರ ಉದ್ಯೋಗಿಗಳನ್ನು,  ಅದಾನಿಯನ್ನು ಭಾರತದ ಮೂಲಸೌಕರ್ಯಗಳ ರಾಜ ಮತ್ತು ವಿಶ್ವದ ಅತ್ಯಂತ ದೂರದೃಷ್ಟಿಯ ವ್ಯಾಪಾರ ನಾಯಕರಲ್ಲಿ ಒಬ್ಬರು ಎಂದು ವಿವಿಧ ರೀತಿಯಲ್ಲಿ ವಿವರಿಸಲಾಗಿದೆ. ಅವರು ತಮ್ಮ ವಿಸ್ತೃತ ಕುಟುಂಬದೊಂದಿಗೆ ಭಾರತದ ಅಹಮದಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ.


ಆಸ್ಟ್ರೇಲಿಯಾದಲ್ಲಿ ಕಲ್ಲಿದ್ದಲು ಗಣಿಗಾರಿಕೆ, ಸ್ವಜನ ಪಕ್ಷಪಾತ, ರಾಜಕೀಯ ಪ್ರಭಾವ, ಷೇರು ಮಾರುಕಟ್ಟೆಯ ಸಜ್ಜಿಕೆ, ಬಿಡ್ ನಲ್ಲಿ ಅಕ್ರಮದ ಆರೋಪ, ತೆರಿಗೆ ವಂಚನೆ, ಕಸ್ಟಮ್ಸ್ ಸುಂಕ ತಪ್ಪಿಸಿಕೊಳ್ಳುವಿಕೆ, ಕಾರ್ಪೋರೇಟ್ ಆಡಳಿತದ ವಿಷಯ, ಷೇರು ಬದಲಾವಣೆ ಮತ್ತು ಲೆಕ್ಕಪತ್ರ ಆರೋಪ, ಕೀನ್ಯಾದಲ್ಲಿ ಉಪಸ್ಥಿತಿ, ಇಸ್ರೇಲ್ ಗೆ ಶಸ್ತ್ರಾಸ್ತ್ರ ರಫ್ತು, ವಿಕಿಪೀಡಿಯಾ ನಮೂದುಗಳನ್ನು ಕುಶಲತೆಯಿಂದ ನಿರ್ವಹಿಸುವುದು, ಲಂಚದ ಆರೋಪಗಳು, ಕಲ್ಲಿದ್ದಲು ಬೆಲೆ ಹಣದುಬ್ಬರ, ಮಾಧ್ಯಮ ನಿಯಂತ್ರಣ- ಹೀಗೆ ಆರೋಪಗಳು, ವಿವಾದಗಳು ಇದರ ಮೇಲಿದೆ. ರಾಜಕೀಯ ಯಾರನ್ನು ಬಿಟ್ಟಿದೆ ಹೇಳಿನೋಡೋಣ.     


ಸದ್ಯಕ್ಕೆ ಈ ಮೂರು ಕಂಪನಿಗಳು ಭಾರತೀಯ ಷೇರುಮಾರುಕಟ್ಟೆಯ ಸರ್ವಾಧಿಪತಿಗಳು. ಗೌತಮ್ ಅದಾನಿಯವರು ಹೋಗುತ್ತಿರುವ ವೇಗವನ್ನು ಗಮನಿಸಿದರೆ ಮುಂದೆ ಟಾಟಾ ಗ್ರೂಪನ್ನು ಮೀರಿಸಬಹುದು. ದೇಶ ಕಂಡ ಅತ್ಯಂತ ಚತುರ ಉದ್ಯಮಿ ಅನಿಸಿಕೊಂಡ ಮುಖೇಶ್ ಅಂಬಾನಿ ಮುಟ್ಟಿದ್ದೆಲ್ಲ ಚಿನ್ನವೇ ಆಗಿದೆ. ಟಾಟಾದೊಂದಿಗಿನ ಪೈಪೋಟಿಯಲ್ಲಿ ಅಂಬಾನಿ ಅದಾನಿಗಿಂತ ಒಂದು ಹೆಜ್ಜೆ ಮುಂದೆಯೇ ಇದ್ದಾರೆ. ಇವರಿಬ್ಬರಿಂದ ಸಾಕಷ್ಟು ಪೈಪೋಟಿ ಇದ್ದರೂ ಕೂಡಾ ಬೇರೆಯದೇ ರೀತಿಯ ನಡೆ ಹೊಂದಿದ ಟಾಟಾ ಮುಂದೆಯೂ ತನ್ನ ಅಗ್ರಸ್ಥಾನವನ್ನು ಉಳಿಸಿಕೊಂಡು ಹೋಗಬಹುದೆ? ಕಾಲವೇ ಎಲ್ಲವನ್ನು ನಿರ್ಧರಿಸುತ್ತದೆ. ಆದರೆ, ಈ ನೆಲದ ಮಣ್ಣಿನ ಕಸುವಿನಿಂದಲೇ ಹುಟ್ಟಿಬಂದ ಇವರು ಇವರಂಥ ಅದೆಷ್ಟೋ ಶ್ರೀಮಂತ ಉದ್ಯಮಿಗಳು ಈ ನೆಲದ ಮಕ್ಕಳಿಗೆ ಅನ್ನದಾತರಾಗಿದ್ದಾರೆ. ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಪ್ರೇರಣೆಯಾಗಿದ್ದಾರೆ. ಸಂಪತ್ತಿನ ಇರವು ಸಂಪತ್ತಲ್ಲ; ಸಂಪತ್ತಿನ ಅರಿವು ನಿಜವಾದ ಸಂಪತ್ತು. ದೇಶಸೇವೆ ಮತ್ತು ದಾನದಲ್ಲಿ ಇವರು ಇವರಂಥ ಸಿರಿವಂತರು ಯಾವತ್ತೂ ಹಿಂದೆ ಬೀಳಲಿಲ್ಲ. ವಿಶ್ವಮಟ್ಟದಲ್ಲಿ ಭಾರತದ ಸ್ಥಾನಮಾನ ಅಂತಸ್ತು ಘನತೆ ಗೌರವ ಹೆಚ್ಚಲು ಇವರು ಇವರಂಥ ಉದ್ಯಮಿಗಳೇ ಕಾರಣ ಅಂತ ಪ್ರತ್ಯೇಕವಾಗಿ ಹೇಳುವ ಅಗತ್ಯವಂತೂ ಖಂಡಿತವಾಗಿಯೂ ಇಲ್ಲ!



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top