ಸಾಗರ, ಏಪ್ರಿಲ್ 12: ಕನ್ನಡ ಜ್ಞಾನರ್ಜನೆ ಬಳಗ, ಕರ್ನಾಟಕದ ವತಿಯಿಂದ 58ನೇ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು. ಈ ಬಾರಿ ಸ್ಪರ್ಧೆಗೆ ಹೇಮರೆಡ್ಡಿ ಮಲ್ಲಮ್ಮ ಎಂಬ ವಿಷಯವನ್ನು ಆಯ್ಕೆ ಮಾಡಲಾಗಿತ್ತು.
ರಾಜ್ಯದೆಲ್ಲೆಡೆಯಿಂದ ಹಲವರು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಜ್ಞಾನ ಮತ್ತು ಪ್ರತಿಭೆಯನ್ನು ಪ್ರದರ್ಶಿಸಿದರು. ಸ್ಪರ್ಧೆಯಲ್ಲಿ ರಾಜೇಶ್ವರಿ ಮಠ ಪ್ರಥಮ ಸ್ಥಾನ ಪಡೆದು ಟಾಪ್-1 ಸ್ಥಾನವನ್ನು ತಮ್ಮದಾಗಿಸಿಕೊಂಡರು. ಶಾಂತಚಾರ ಬಡಿಗೇರ (ಕೊಕ್ಕನೂರು) ದ್ವಿತೀಯ ಸ್ಥಾನ ಹಾಗೂ ಮಾಂತೇಶ ಹಿರೇಮಠ (ಚಿಕ್ಕಮ್ಯಾಗೇರಿ) ತೃತೀಯ ಸ್ಥಾನ ಪಡೆದರು.
ಇದಲ್ಲದೆ ಪ್ರಥಮ ಸ್ಥಾನ ಪಡೆದವರ ಪಟ್ಟಿಯಲ್ಲಿ ನಾಗರತ್ನ ರಾಜ್ (ಬೆಂಗಳೂರು), ಡಾ. ಶಿವಲೀಲಾ ಬಡಿಗೇರ (ಕಲಬುರ್ಗಿ), ಮಂಜುನಾಥ ಅಜ್ಜಪ್ಪನವರ, ಲಾಲಸಿಂಗಪ್ಪ ಚವಾಣ, ರುದ್ರಯ್ಯ ಹೇಮಯ್ಯ ಮಾಡ್ಲಿಮಠ, ನೇತ್ರಾವತಿ ಕುರುಬರ (ಅಂಚಟಗೇರಿ), ಬಸವರಾಜ್ ಸಾವಕ್ಕನವರ ಮತ್ತು ಕವಿತಾ ಹೆಚ್.ಕೆ. ಅವರುಗಳು ಸ್ಥಾನ ಪಡೆದಿದ್ದಾರೆ.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ. ಕಾರ್ಯಕ್ರಮವು ಉತ್ತಮವಾಗಿ ಮುನ್ನಡೆದು ಸ್ಪರ್ಧಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


