ಎಐ ಮತ್ತು ಮಷೀನ್ ಲರ್ನಿಂಗ್ ಬಿಟೆಕ್ ಪದವಿಯಲ್ಲಿ ಗೋಲ್ಡ್ ಮೆಡಲ್ ಪಡೆದ ಗ್ರಾಮೀಣ ಪ್ರತಿಭೆ 'ರಿಶಲ್ ತಾವ್ರೊ'

Upayuktha
0


 

ಮಂಗಳೂರುಮಂಗಳೂರು ಶ್ರೀನಿವಾಸ್ ಯೂನಿವರ್ಸಿಟಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಕಾಲೇಜಿನ ವಿಧ್ಯಾರ್ಥಿನಿ, ರಿಶಲ್ ತಾವ್ರೋ, ಬ್ಯಾಚ್ಯುಲರ್ ಆಫ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮಷೀನ್ ಲರ್ನಿಂಗ್ ಡಿಗ್ರಿಯಲ್ಲಿ ಗೊಲ್ಡ್ ಮೆಡಲ್ ಪಡೆದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು, ಕೂವೆ ಎಂಬ ಸಣ್ಣ ಹಳ್ಳಿಯ ಈ ಪ್ರತಿಭೆಗೆ "ತಾವ್ರೊ ಕುಟುಂಬದ ಸದಸ್ಯರ ಬಳಗ"ದಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


ಸನ್ಮಾನ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ, ಮುಖ್ಯ ಅತಿಥಿ ಕೊಂಕಣಿ ಭಾಷಾ ಮಂಡಳ್ ಕರ್ನಾಟಕ(ರಿ) ಇದರ ಅಧ್ಯಕ್ಷ, ಹಿರಿಯ ಬಹುಭಾಷಾ ಸಾಹಿತಿ, ಪತ್ರಕರ್ತ ರೇಮಂಡ್ ಡಿಕೂನಾ ತಾಕೊಡೆ, ಯುವಕರಿಗೆ ಪ್ರೋತ್ಸಾಹ ಮಾಡುವುದು ಪ್ರೇರಣೆ ಪಡೆಯಲು. ಮುಂದೆ ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಇತರರಿಗೆ ಸಹಾಯ ಪ್ರೋತ್ಸಾಹ ನೀಡಬೇಕು. ಈಗಿನ ವಿದ್ಯಾರ್ಥಿಗಳು ಈ ತರಹ ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಒಳ್ಳೆಯ ಕೆಲಸ ಮಾಡುವಾಗ ತಮ್ಮ ಊರಿನ, ಪ್ರದೇಶದ ಬಡತನದ ಮತ್ತು ಅನಾನುಕೂಲ ಇರುವವರಿಗೆ ಸಹಾಯ ಮಾಡುವ ಮನಸ್ಸು ಹೊಂದಬೇಕು ಎಂದರು.



ಕಾರ್ಯಕ್ರದ ಅಧ್ಯಕ್ಷತೆಯನ್ನು ತಾವ್ರೊ ಕುಟುಂಬದ ಹಿರಿಯ ಸದಸ್ಯ ಜೋನ್ ತಾವ್ರೊ ವಹಿಸಿದ್ದರು. ರಾಜ್ಯ ಶಿಕ್ಷಕರ ಯೂನಿಯನ್ ನಿಕಟ ಉಪಾಧ್ಯಕ್ಷ ಸ್ಟೇನಿ ತಾವ್ರೊ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ರೇಮಂಡ್ ಡಿಕೂನಾ ತಾಕೊಡೆ, ಜೋನ್ ತಾವ್ರೊ, ಸ್ಟೇನಿ ತಾವ್ರೊ, ಗೋಲ್ಡ್ ಮೆಡಲಿಸ್ಟ್ ರಿಶಲ್ ತಾವ್ರೊ, ತಂದೆ ಜೊಸೆಫ್ ತಾವ್ರೊ, ಅಜ್ಜ ಆ್ಯಂಟನಿ ವಾಲ್ಡರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top