ಸುರಪುರ: ಸಂಚಾರಿ ಪೊಲೀಸ್‌ ಠಾಣೆಗಾಗಿ ಮನವಿ

Upayuktha
0


ಸುರಪುರ: 'ಸುರಪುರ ನಗರದಲ್ಲಿ ವಿಪರೀತ ಟ್ರಾಫಿಕ್ ಸಮಸ್ಯೆಯಾಗಿದೆ. ಇಲ್ಲಿ ಬೈಕ್, ಬಸ್, ಜೀಪ್, ಕಾರುಗಳು ನಗರದಲ್ಲಿ ಬಹಳಷ್ಟು ಪ್ರಮಾಣದಲ್ಲಿ ಸಂಚರಿಸುತ್ತಿವೆ. ಅಲ್ಲದೇ ಬೈಕ್‌ಗಳನ್ನು ಸವಾರರು ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ನಿಲ್ಲಿಸಿ ಹೋಗಿ ಬಿಡುತ್ತಾರೆ. 


ಅದಕ್ಕಾಗಿ ಇಲ್ಲಿ ಒಂದು ಸಂಚಾರಿ ಪೊಲೀಸ್‌ ಠಾಣೆಯ ಅವಶ್ಯಕತೆ ಇದೆ. ಈ ಬಗ್ಗೆ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರ ಜೊತೆ ಚರ್ಚಿಸಿದರು. ಹಾಗೂ ಠಾಣೆ ಮಂಜೂರು ಮಾಡಲು ಅವರಿಗೆ ರುಕ್ಮಾಪುರ ನಿವಾಸಿಗಳ ಸಂಘದ ವತಿಯಿಂದ ನಿವೃತ್ತ ಎಸ್ ಪಿ ಚಂದ್ರಕಾಂತ ಭಂಡಾರೆ ಅವರು ಮನವಿ ಸಲ್ಲಿಸಿದರು.


ರುಕ್ಮಾಪುರದಲ್ಲಿ ಯಾದಗಿರಿ ಜಿಲ್ಲಾ ಮಟ್ಟದ ಗಮಕ ಸಮ್ಮೇಳನ ಮಾಡಲು 'ಕೆಕೆಆರ್ಡಿಬಿ'ಯಿಂದ ಅನುದಾನಕ್ಕಾಗಿ ಶಿಫಾರಸು ಮಾಡಬೇಕೆಂದು ಶಾಸಕರನ್ನು, ಜಿಲ್ಲಾ ಗಮಕ ಕಲಾ ಪರಿಪತ್ತಿನ ಕಾರ್ಯಾಧ್ಯಕ್ಷ ಸಿ ಎನ್ ಭಂಡಾರಿ ಹಾಗೂ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ  ಶ್ರೀನಿವಾಸ ಜಾಲವಾದಿ ಅವರು ಮನವಿ ಸಲ್ಲಿಸಿದರು. ಇದಕ್ಕೆ ಶಾಸಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಿಎನ್ ಭಂಡಾರೆ ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top