ಏ.17- 28: ಪೆರಡಾಲ ಶ್ರೀ ಉದನೇಶ್ವರ ದೇವಳದಲ್ಲಿ ನವೀಕರಣ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶ

Upayuktha
0


ಕಾಸರಗೋಡು: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ನವೀಕರಣ ಪುನ‌ರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶ ಹಾಗೂ ವಾರ್ಷಿಕೋತ್ಸವ ಏಪ್ರಿಲ್ 17ರಿಂದ 28ರ ವರೆಗೆ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ ಎಂದು ನವೀಕರಣ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ಕಾಸರಗೋಡು ಪ್ರೆಸ್‌ಕ್ಲಬ್‌ನಲ್ಲಿ ಜರಗಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಏ.17ರಂದು ಬೆಳಗ್ಗೆ 7 ಗಂಟೆಗೆ ಗಣಪತಿ ಹೋಮ, 8.30ಕ್ಕೆ ಉಗ್ರಾಣ ಮುಹೂರ್ತ, ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊತ್ತೇಸರ ಸತ್ಯನಾರಾಯಣ ಭಟ್ ಆನೆಮಜಲು ದೀಪ ಪ್ರಜ್ವಲನೆಗೊಳಿಸುವರು. ಸಂಜೆ 6 ಗಂಟೆಗೆ ವಾಸ್ತುಶಿಲ್ಪಿ ಕೃಷ್ಣಪ್ರಸಾದ್ ಮುನಿಯಂಗಳ ಉಪಸ್ಥಿತಿಯಲ್ಲಿ ಪ್ರಸಾದ ಪರಿಗ್ರಹ, ಸಂಜೆ 6ಕ್ಕೆ ನಟರಾಜ ವೇದಿಕೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಲಯಾಳಂ ಕಿರುತೆರೆಯ ನಟಿ ಆದಿರಾ ಲಕ್ಷ್ಮಣ್ ಉದ್ಘಾಟಿಸುವರು. ಬ್ರಹ್ಮಕಲಶೋತ್ಸವ ಸಮಿತಿ ರಕ್ಷಾಧಿಕಾರಿ ಗೋಪಾಲಕೃಷ್ಣ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸುವರು. ಉಳಿಯತ್ತಾಯ ನಾರಾಯಣ ಆಸ್ರ ಉಳಿಯ, ವಕೀಲ ವೆಂಕಟ್ರಮಣ ಭಟ್, ಉದ್ಯಮಿ ಅರವಿಂದ ಪೈ ಬಳ್ಳಂಬೆಟ್ಟು ಗಾಯಕಿ ಅಪೇಕ್ಷಾ ಪೈ ಬಳ್ಳಂಬೆಟ್ಟು ಗೌರವ ಉಪಸ್ಥಿತರಿರುವರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.


ಏ.18ರಂದು ನವೀಕರಿಸಿದ ರಾಜಗೋಪುರ, ರಾಜಾಂಗಣ ಮೇಲ್ಟಾವಣಿ, ನೂತನ ಭೋಜನಶಾಲೆ ಲೋಕಾರ್ಪಣೆ ನಡೆಯಲಿದೆ. ಬೆಳಗ್ಗೆ ತಂತ್ರಿವರ್ಯ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರಿಗೆ ಪೂರ್ಣಕುಂಭ ಸ್ವಾಗತ. ಸಂಜೆ 4ಕ್ಕೆ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರಿಗೆ ಹಾಗೂ ಶ್ರೀ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದಂಗಳವರಿಗೆ ಪೂರ್ಣಕುಂಭ ಸ್ವಾಗತ, ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮಕರ್ತರಾದ ಭಿಮೇಶ್ವರ ಜೋಷಿ ಉದ್ಘಾಟಿಸುವರು. ಬ್ರಹ್ಮಕಲಶ ಸಮಿತಿ ಗೌರವಾಧ್ಯಕ್ಷ ಡಾ. ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅಧ್ಯಕ್ಷತೆ ವಹಿಸುವರು. ಬ್ರಹಶ್ರೀ ರವೀಶ ತಂತ್ರಿ ದಿವ್ಯ ಉಪಸ್ಥಿತರಿರುವರು. ಎಡನೀರು ಶ್ರೀ, ಚಿತ್ರಾಪುರ ಮಠದ ಸ್ವಾಮೀಜಿ ಆಶೀರ್ವಚನ ನೀಡುವರು.


ಏ.19ರಂದು ಬೆಳಗ್ಗೆ ವಿವಿಧ ವೈದಿಕ ಕಾರ್ಯಕ್ರಮ ಗಳು, ಸಂಜೆ ಧಾರ್ಮಿಕ ಸಭೆಯಲ್ಲಿ ಕೊಂಡವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.


ಏ.20ರಂದು ಬೆಳಗ್ಗೆ ವಿವಿಧ ವೈದಿಕ ಕಾರ್ಯಕ್ರಮ, ಸಂಜೆ 4ರಿಂದ ನಟರಾಜ ವೇದಿಕೆಯಲ್ಲಿ ಧಾರ್ಮಿಕ ಸಭೆ, ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.


ಏ.21ರಂದು ಸಂಜೆ 4.30ಕ್ಕೆ ಮಾತೃ ಸಮಾವೇಶದಲ್ಲಿ ಒಡಿಯೂರು ಕ್ಷೇತ್ರದ ಸಾದ್ದಿ ಮಾತಾನಂದಮಯಿ ಆಶೀರ್ವಚನ ನೀಡಲಿದ್ದಾರೆ. ಏ.22ರಂದು ಸಂಜೆ 4ಕ್ಕೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.


ಏ.23ರಂದು ಪೂರ್ವಾಹ್ನ 4 ಗಂಟೆಗೆ 108 ತೆಂಗಿನ ಕಾಯಿ ಗಣಪತಿ ಹೋಮ, ಬೆಳಗ್ಗೆ 7.40ರಿಂದ 9.30ರ ಮಧ್ಯೆ ವೃಷಭ ಲಗ್ನ ಸುಮೂಹೂರ್ತದಲ್ಲಿ ಶ್ರೀ ದೇವರ ಪ್ರತಿಷ್ಠೆ ಪ್ರತಿಷ್ಠಾಬಲಿ, ಅಂಕುರಪೂಜೆ, ಸಂಜೆ 6ಕ್ಕೆ ನಿತ್ಯ ನೈಮಿತ್ತಿಕಾದಿಗಳ ನಿರ್ಣಯ, ಸಂಜೆ 4.30ಕ್ಕೆ ಧಾರ್ಮಿಕ ಸಭೆಯಲ್ಲಿ ಎಡನೀರು ಶ್ರೀ ಉಡುಪಿ ಅದಮಾರು ಶ್ರೀ, ಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.


ಏ.24ರಂದು ಬೆಳಗ್ಗೆ ವಿವಿಧ ವೈದಿಕ ಕಾರ್ಯಕ್ರಮ, ಸಂಜೆ 4 ಕ್ಕೆ ಧಾರ್ಮಿಕ ಸಭೆ ಕೇಮಾರು ಶ್ರೀಗಳ ಆಶೀರ್ವಚನ, ಏ.25ರಂದು ಸಂಜೆ 4ಕ್ಕೆ ಕದಳೀಪುರ ಶ್ರೀಮಠ ಬಾಳೆಕುದ್ರು ಸಾಮೀಜಿ ಆಶೀರ್ವಚನ, ಏ.26ರಂದು ಬೆಳಗ್ಗೆ 5 ರಿಂದ ಗಣಪತಿ ಹೋಮ, ಕವಾಟೋದ್ಘಾಟನೆ, ಪ್ರಾಯಶ್ಚಿತ ಮತ್ತು ತತ್ವಹೋಮಗಳ ಕಲಶಾಭಿಷೇಕ, ಎಡನೀರು ಮಠಾಧೀಶರ ಉಪಸ್ಥಿತಿಯಲ್ಲಿ ಸಹಸ್ರ ಕಲಶಾಭಿಷೇಕ- ಬ್ರಹ್ಮಕಲಶಾಭಿಷೇಕ, 11.30ಕ್ಕೆ ಶ್ರೀ ಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಶ್ರೀಗಳಿಂದ ಆಶೀರ್ವಚನ, ರಾತ್ರಿ 7 ಗಂಟೆಗೆ ಶ್ರೀ ದೇವರ ನೃತ್ಯ ಬಲಿ ಉತ್ಸವ ಜರಗಲಿದೆ. ಸಂಜೆ 4 ಗಂಟೆಗೆ ಒಡಿಯೂರು ಶ್ರೀ ಹಾಗೂ ಎಡನೀರು ಶ್ರೀ ಅವರಿಂದ ಆಶೀರ್ವಚನ ನಡೆಯಲಿದೆ. ಪ್ರತಿದಿನ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.


ಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ಮೊಕ್ತೇಸರ ಹಾಗೂ ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ರೈ ಪೆರಡಾಲಗುತ್ತು, ಆಡಳಿತ ಮೊಕ್ತೇಸರರು, ವಕೀಲ ವೆಂಕಟ್ರಮಣ ಭಟ್ ಚಂಬಲ್ತಿಮಾರ್, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಸೂರ್ಯನಾರಾಯಣ ಬಿ., ಮೊಕ್ತೇಸರರು ಸೀತಾರಾಮ ನವಕಾನ, ಬ್ರಹ್ಮಕಲಶ ಸಮಿತಿ ಜೊತೆ ಕಾರ್ಯದರ್ಶಿ, ಮೀಡಿಯಾ ಅಧ್ಯಕ್ಷ ಡಾ. ಶ್ರೀಶಕುಮಾ‌ರ್ ಪಂಜಿತ್ತಡ್ಕ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top