ವಿವೇಕಾನಂದ(ಸ್ವಾಯತ್ತ)ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ರ‍್ಯಾಂಕ್ ಪಟ್ಟಿ ಪ್ರಕಟ

Upayuktha
0


ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ,ವಿಜ್ಞಾನ ಹಾಗೂ ವಾಣಿಜ್ಯ(ಸ್ವಾಯತ್ತ) ಮಹಾವಿದ್ಯಾಲಯವು 2024-25ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿನಡೆಸಿದ ಪದವಿ ಪರೀಕ್ಷೆಯಲ್ಲಿ ಒಟ್ಟು ಎಂಟು ರ‍್ಯಾಂಕ್‌ಗಳನ್ನು ಘೋಷಿಸಲಾಗಿದೆ. ಬಿ.ಎವಿಭಾಗದಲ್ಲಿ ವೈಷ್ಣವಿ ಶೆಟ್ಟಿ (98.62%) ಪ್ರಥಮ ರ‍್ಯಾಂಕ್‌ (ಕೋಲಾರದ ನವೀನ್ ಶೆಟ್ಟಿ ಹಾಗೂ ಪೂರ್ಣಿಮಾ ಶೆಟ್ಟಿ ದಂಪತಿಯ ಪುತ್ರಿ), ಬಿಎಸ್ಸಿ ವಿಭಾಗದಲ್ಲಿ ಧನ್ಯಶ್ರೀ ಸಿ.ಡಿ (96.17%) ಪ್ರಥಮ ರ‍್ಯಾಂಕ್‌ (ಸೋಮವಾರ ಪೇಟೆಯ ದಿನೇಶ್ ಹಾಗೂ ಚಿತ್ರಾ ದಂಪತಿಯ ಪುತ್ರಿ), ಬಿಬಿಎ ವಿಭಾಗದಲ್ಲಿ ತನಿಷಾ ಬಿ (93.37%) ಪ್ರಥಮ ರ‍್ಯಾಂಕ್‌(ಬಂಟ್ವಾಳದ ಬಾಲಕೃಷ್ಣ ಹಾಗೂ ಮಲ್ಲಿಕಾ ಬಿಎಸ್‍ ದಂಪತಿಯ ಪುತ್ರಿ), ಬಿಕಾಂ ವಿಭಾಗದಲ್ಲಿ ಪ್ರಜ್ಞಾ ಕೆ. (96.65%) ಪ್ರಥಮ ರ‍್ಯಾಂಕ್‌ (ಸುಳ್ಯದ ನಾಗರಾಜ ಕೆ.ಹಾಗೂ ಉಷಾ ಕೆ.ದಂಪತಿಯ ಪುತ್ರಿ) ಹಾಗೂ ಅಮೃತಾ(96.51%) ದ್ವಿತೀಯ (ಬೆಳ್ತಗಂಡಿ ಇಳಂತಿಲ ಆನಂದ ಕುಂಬಾರ ಹಾಗೂ ಸವಿತಾ ದಂಪತಿಯ ಪುತ್ರಿ) ಅಂತೆಯೇ ಬಿಸಿಎ ವಿಭಾಗದಲ್ಲಿ ಚೈತ್ರಾಯು.ಎಂ(96.29%) ಪ್ರಥಮ ರ‍್ಯಾಂಕ್‌ (ಬಂಟ್ವಾಳದ ಉಮೇಶ್ ಹಾಗೂ ಮಮತಾ ದಂಪತಿಯ ಪುತ್ರಿ), ಮೇಘನಾ (95.82%) ದ್ವಿತೀಯ ರ‍್ಯಾಂಕ್‌ (ಕಬಕ ಪಡ್ನೂರು ನಿವಾಸಿ ಆನಂದ ಪೂಜಾರಿ ಹಾಗೂ ಗೀತಾದಂಪತಿಯ ಪುತ್ರಿ) ಹಾಗೂ ದೀಕ್ಷಾ ಬಿ (94.22%) ತೃತೀಯ ರ‍್ಯಾಂಕ್‌(ಪೆರ್ಲ ನಿವಾಸಿ ಬಾಲಕೃಷ್ಣರೈ ಬಿ ಹಾಗೂ ಸುಜಾತಾ ದಂಪತಿಯ ಪುತ್ರಿ)ಗಳನ್ನು ಗಳಿಸಿರುತ್ತಾರೆ.  


ಸ್ನಾತಕೋತ್ತರ ಪದವಿಯಲ್ಲಿ  2023-24ರ ಸಾಲಿನಲ್ಲಿಒಟ್ಟು ನಾಲ್ಕು ರ‍್ಯಾಂಕ್‌ಗಳು ಲಭಿಸಿದ್ದು ಎಂಕಾಂ ವಿಭಾಗದಲ್ಲಿ ಧನ್ಯಾಶ್ರೀ ಐ (9.03 ಸಿಜಿಪಿಎ) ಪ್ರಥಮ ರ‍್ಯಾಂಕ್‌(ಪಡ್ನೂರು ನಿವಾಸಿ ಈಶ್ವರಗೌಡ ಹಾಗೂ ದೇವಕಿ ದಂಪತಿ ಪುತ್ರಿ), ಎಂಎಸ್ಸಿ ರಸಾಯನ ಶಾಸ್ತ್ರದಲ್ಲಿ ವಂದನಾ ಎಸ್.ಎಂ (8.01 ಸಿಜಿಪಿಎ)  ಪ್ರಥಮ ರ‍್ಯಾಂಕ್‌(ಪಡ್ನೂರು ನಿವಾಸಿ ಸುಧಾಕರ ಎಂ ಹಾಗೂ ಯಶೋಧಾ ಎಂ ದಂಪತಿ ಪುತ್ರಿ)ಎಂಎಸ್ಸಿ ಗಣಿತಶಾಸ್ತ್ರ ವಿಭಾಗದಲ್ಲಿ ವಿದ್ಯಾ ವಿ (7.05 ಸಿಜಿಪಿಎ) ಅವರು ಪ್ರಥಮ ರ‍್ಯಾಂಕ್‌(ವೀರಮಂಗಲ ನಿವಾಸಿ ಹೊನ್ನಪ್ಪ ಮೂಲ್ಯ ಹೇಮಾವತಿ ದಂಪತಿ ಪುತ್ರಿ) ಹಾಗೂ ಜೆಎಂಸಿ ವಿಭಾಗದಲ್ಲಿ ಲಾವಣ್ಯ ಎಸ್ (8.66 ಸಿಜಿಪಿಎ)ಪ್ರಥಮ ರ‍್ಯಾಂಕ್‌(ಕಡೇಶಿವಾಲಯ ನಿವಾಸಿ ಶ್ರೀಧರ ನಾಯಕ್ ಹಾಗೂ ವಿಜಯಲಕ್ಷ್ಮಿ ದಂಪತಿಯ ಪುತ್ರಿ) ಗಳಿಸಿರುತ್ತಾರೆ. 2024-25ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಒಟ್ಟು ಮೂರು ರ‍್ಯಾಂಕ್‌ಗಳು ಲಭಿಸಿದ್ದು ಎಂಕಾಂ ವಿಭಾಗದಲ್ಲಿ ಲಾವಣ್ಯ ಕೆ(8.83 ಸಿಜಿಪಿಎ) ಪ್ರಥಮ ರ‍್ಯಾಂಕ್‌(ಪುತ್ತೂರಿನ ವಿಜಯಾ ನಾಯಕ್ ಹಾಗೂ ಸರೋಜಾ ದಂಪತಿ ಪುತ್ರಿ) ಎಂಎಸ್ಸಿ ರಸಾಯನ ಶಾಸ್ತ್ರದಲ್ಲಿ ಮನಸ್ವಿ ಪಿ(7.57 ಸಿಜಿಪಿಎ) ಪ್ರಥಮ ರ‍್ಯಾಂಕ್‌(ಬಂಟ್ವಾಳದ ನಾರಾಯಣ ಪಿ.ಸಿ ಹಾಗೂ ರೂಪಾದಂಪತಿ ಪುತ್ರಿ) ಹಾಗೂ ಜೆಎಂಸಿಯಲ್ಲಿ ಸುಲಕ್ಷಣಾ ಕೆ (8.22 ಸಿಜಿಪಿಎ) ಪ್ರಥಮ ರ‍್ಯಾಂಕ್‌(ಕಾಸರಗೋಡು ಸಮೀಪದ ವಿಷ್ಣು ಶರ್ಮ ಹಾಗೂ  ಸಂಧ್ಯಾ ವಿ ಶರ್ಮಾದಂಪತಿ ಪುತ್ತಿ) ಪಡೆದುಕೊಂಡಿರುತ್ತಾರೆ. ರ‍್ಯಾಂಕ್‌ ವಿಜೇತರಿಗೆ ಇದೇ ತಿಂಗಳ 21ನೇ ದಿನಾಂಕದಂದು ಕಾಲೇಜಿನಲ್ಲಿ ನಡೆಯಲಿರುವ ಪ್ರಥಮ ಪದವಿ ಪ್ರದಾನ ಸಮಾರಂಭದಲ್ಲಿ ರ‍್ಯಾಂಕ್‌ ಪ್ರಮಾಣ ಪತ್ರವನ್ನು ಪ್ರದಾನ ಮಾಡಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೀಕೃಷ್ಣ ಗಣರಾಜ ಭಟ್‍ ಮತ್ತು ಪರೀಕ್ಷಾಂಗ ಕುಲಸಚಿವ ಡಾ. ಶ್ರೀಧರ್ ಎಚ್.ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top