ಪುತ್ತೂರು ಅಕ್ಷಯ ಕಾಲೇಜಿನಲ್ಲಿ ಪ್ರಿನ್ಸ್ ಮತ್ತು ಪ್ರಿನ್ಸೆಸ್ ದಕ್ಷಿಣ ಕನ್ನಡ 2K26 Season 02 ಫ್ಯಾಷನ್ ಶೋ

Upayuktha
0

 


ಪುತ್ತೂರು: ಇಲ್ಲಿನ ಅಕ್ಷಯ ಪದವಿ ಕಾಲೇಜಿನಲ್ಲಿ ಪ್ರಿನ್ಸ್ ಮತ್ತು ಪ್ರಿನ್ಸೆಸ್ ದಕ್ಷಿಣ ಕನ್ನಡ  2K26 Season 02 ಫ್ಯಾಷನ್ ಶೋ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಸ್ಜಿ  ಸಮೂಹ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕ ಶ್ರೀ ಸತ್ಯ ಶಂಕರ್, ಕಾಲೇಜಿನ ಪ್ರಗತಿಯ ಕುರಿತು ಮಾತನಾಡಿ ಸತತ ಪ್ರಯತ್ನಗಳ ಮೂಲಕ ಶ್ರಮಿಸಿದರೆ ಗೆಲುವು ಶತಸಿದ್ಧ ಎಂದು ಹೇಳಿದರು.

 

ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್ ಮಾತನಾಡಿ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಛಲ ಎಂಬುದು ಅತ್ಯಗತ್ಯ. ಮಾಡುವ ಕೆಲಸದಲ್ಲಿ ಪ್ರೀತಿ ಮತ್ತು ನಿಖರ ಗುರಿ ಇರಬೇಕು ಎಂದು ಹೇಳಿದರು.

 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಂತರಾಷ್ಟ್ರೀಯ ರೂಪದರ್ಶಿ ತಷ್ಮಾ ಚೇತನ್, ಪದವಿ ಮತ್ತು ಪ್ಯಾಷನ್ ಸಹಸಂಬಂಧ ಹೊಂದಿದ್ದು ಇದು ಖಂಡಿತ ಮುಂದಿನ ದಿನಗಳಲ್ಲಿ  ಉತ್ತಮ ಬದುಕು ಕೊಡುತ್ತದೆ.  ಅದಕ್ಕೆ ನಾನೇ ನಿದರ್ಶನ. ನಿಮ್ಮೆಲ್ಲರ ಬದುಕು ಹಸನಾಗಲಿ ಎಂದು ಶುಭ ಹಾರೈಸಿದರು.

 

ನಂತರ ಹಲವು ವಿಭಾಗಗಳಲ್ಲಿ ಹುಡುಗರು ಹಾಗೂ ಹುಡುಗಿಯರಿಗೆ ಫ್ಯಾಷನ್ ‍ಷೋ ಸ್ಪರ್ಧೆ ಏರ್ಪಡಿಸಲಾಗಿತ್ತು.



ಫ್ಯಾಷನ್ ಶೋ ವಿಜೇತರು

Category 1 :

ಹುಡುಗರ ವಿಭಾಗ :

Winner : ಅಯಂಶ್ ಎನ್, First runner up : ಯಜ್ವಯ್ ಜಿ ,Second runner up: ತಸ್ಮಯ್ ಎಸ್ ಪಕ್ಕಳ

ಹುಡುಗಿಯರ ವಿಭಾಗ :

 Winner : ಮನಸ್ವಿ,  First runner up :ಸಮೃದ್ಧಿ ಎಸ್,  Second runner up: ರಿಧೀಷಾ ಎಸ್

Category  2  :*

ಹುಡುಗರ ವಿಭಾಗ :

 Winner : ಧನ್ವಿತ್ ಡಿ. ಪಿ , First runner up :ಅಧಿಶ್ ಎಲ್. ಎಸ್ , Second runner up: ಮೌರ್ಯ

ಹುಡುಗಿಯರ ವಿಭಾಗ :

Winner : ಪ್ರಶ್ವಿ ಎಸ್ ,First runner up :ಅಮೃತ ಜೆ. ಎನ್ , Second runner up: ಶೈವಿ ಮರಕ್ಕಡ

Category 3 :

ಹುಡುಗರ ವಿಭಾಗ :

Winner : ಅಹಿಲ್ ಹುಸೈನ್ ,First runner up :ಹಬೀಬ್ ಜರಾರ್ ,Second runner up: ಸ್ಲಾಹುದ್ದಿನ್

ಹುಡುಗಿಯರ ವಿಭಾಗ :

Winner : ವಿಹಾನಿ ಜಕೆ , First runner up :ಮಿಸ್ಚ ಅನ ಡಿಸೋಜ ,Second runner up: ಮೌಲ್ಯ ಪೂಜಾರಿ

 

ಸಮಾರೋಪ ಸಮಾರಂಭ ಅಧ್ಯಕ್ಷತೆಯನ್ನು ವಹಿಸಿದ್ದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಜಯಂತ್ ನಡುಬೈಲು ಮಾತನಾಡಿ ಇಂದು ಮಕ್ಕಳ ನಡೆಯು ಕಾಲೇಜಿನಲ್ಲಿ ಧನಾತ್ಮಕ ವಾತಾವರಣವನ್ನು ಸೃಷ್ಟಿ ಮಾಡಿದೆ. ಅಷ್ಟೇ ಅಲ್ಲ ಅಕ್ಷಯ ಪದವಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಸಾಧನೆಯು ಸಾಗರದ ಆಚೆಗೂ ವಿಸ್ತರಿಸಿ ಕೊಂಡಿದೆ. ಅದು ಶಿಕ್ಷಣದ ಜೊತೆಗೆ ಇಂತಹ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯ. ಅದನ್ನು ನಮ್ಮ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ ಎನ್ನುತ್ತಾ ಎಲ್ಲರಿಗೂ ಶುಭಾಶಯಗಳನ್ನು ಸಲ್ಲಿಸಿದರು.

 

ಮುಖ್ಯ ಅತಿಥಿಯಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಇದರ ಸಹನಿರ್ದೇಶಕ ಆನಂದ. ಪಿ, ಮರ್ಸಿ ಬ್ಯೂಟಿ ಅಕಾಡೆಮಿ ಸಂಸ್ಥಾಪಕಿ ಮರ್ಸಿ ವೀಣಾ ಡಿಸೋಜ, ಅಕ್ಷಯ ಪದವಿ ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ. ಪಕ್ಕಳ, ಅಕ್ಷಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಗಂಗಾರತ್ನ, ಆಡಳಿತ ಅಧಿಕಾರಿ ಅರ್ಪಿತ್. ಟಿ. , ಶೈಕ್ಷಣಿಕ ಮಾರ್ಗದರ್ಶಕರಾದ ಅಭಿಲಾಷ್ ಕ್ಷತ್ರಿಯ ಉಪಸ್ಥಿತರಿದ್ದರು.

 

ಇದೇ ವೇಳೆ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಯಿತು ಹಾಗೂ ಕಾರ್ಯಕ್ರಮದ ಇನ್ನೊರ್ವ ಪ್ರಾಯೋಜಕರಾದ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ನ ಮಾಲಕರಾದ ಬಲರಾಮ ಆಚಾರ್ಯ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

 

ವಿದ್ಯಾರ್ಥಿನಿಯರಾದ ರಮ್ಯಾ ಮತ್ತು ಮೋಕ್ಷ ಪ್ರಾರ್ಥನೆ ಹಾಡಿ,ಉಪನ್ಯಾಸಕಿಯಾದ  ಶ್ರೀಮತಿ ವೀಣಾ ಪ್ರಸ್ತಾವನೆಗೈದು,  ಶ್ರೀಮತಿ ಪ್ರಭಾವತಿ ಮತ್ತು ಶ್ರೀಮತಿ ರಶ್ಮಿ ಸ್ವಾಗತಿಸಿ,  ಕು. ಶೈಲಶ್ರೀ ಮತ್ತು ಶ್ರೀಮತಿ ಅನುಷಾ ಪ್ರವೀಣ್. ಮತ್ತು  ಶ್ರೀಮತಿ ರಶ್ಮಿತಾ.ಎಸ್  ಅತಿಥಿಗಳ ಪರಿಚಯ ವಾಚಿಸಿ,  ಕು. ಧನ್ಯಶ್ರೀ ಮತ್ತು ವಿದ್ಯಾರ್ಥಿನಿ ಜೆನ್ನಿಫರ್ ಡಿಸೋಜ ವಂದಿಸಿ. ವಿದ್ಯಾರ್ಥಿನಿ ರಝೀನ ಬಾನು  ಕಾರ್ಯಕ್ರಮ ನಿರೂಪಿಸಿದರು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

 

Post a Comment

0 Comments
Post a Comment (0)
To Top