ಕವನ: ರಾಗ-ರಂಗು

Upayuktha
0





ರಕ್ತವರ್ಣದ ದಳಗಳಲಿ ಅಡಗಿದೆ ಬೆಚ್ಚನೆಯ ಭಾವ,

ನಿನ್ನ ಮೌನಕೆ ಅರಿಯದಾಗಿದೆ ಸಾವಿರದ ಅರ್ಥದ ಜೀವ.

ಮುಳ್ಳಿನ ನಡುವೆಯೂ ಅರಳಿ ನಗುವ ಸಾಹಸಿ ನೀನು,

ನೋವುಗಳನು ನುಂಗಿ ಪ್ರೀತಿಯ ಹಂಚುವ ಮಾದರಿ ನೀನು ll೦೧ll 


ಕೋಮಲ ಎಲೆಗಳಲಿ ಅಡಗಿದೆ ಪ್ರಕೃತಿಯ ಮೌನ ರಾಗ,

ನಿನ್ನ ಅಂದಕೆ ಮರುಳಾಗಿ ನಿಂತಿದೆ ಎದೆಯ ಈ ಭಾಗ.

ಹೃದಯದ ಬಡಿತದಲಿ ಕೇಳಿಸುವುದು ನಿನ್ನದೇ ಮಂತ್ರ,

ಪ್ರೀತಿಯೆಂಬ ಶಕ್ತಿಯಲಿ ನೀನೇ ಈ ಪ್ರಪಂಚದ ತಂತ್ರ ll೦೨ll 


ಪದಗಳಲ್ಲಿ ವರ್ಣಿಸಲಾಗದ ಒಂದು ಸುಂದರ ಕವಿತೆ,

ಈ ಗುಲಾಬಿ ಅರಳಿ ಬದುಕಲಿ ತರಲಿ ಹೊಸ ಹಿತೆ.

ನಿನ್ನ ಸೌಂದರ್ಯಕ್ಕೆ ಸೋಲದ ಮನವೇ ಇಲ್ಲ ಇಲ್ಲಿ,

ಹೃದಯಕೆ ಹತ್ತಿರವಾಗಿ ಉಳಿದಿರು ನೀನು ಸದಾ ಇಲ್ಲಿ ll೦೩ll 


 ಶರಣೆ: ಕುಮಾರಿ ರೂಪಾ ಬಿ. ನಾಟೀಕಾರ ಮುದ್ದೇಬಿಹಾಳ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)
To Top