ಭಾವ ಸಾಗರದಲಿ ಅರಳಿದ ತಾವರೆ
ಪ್ರೀತಿ ಅದರ ಹೆಸರು
ಹನಿ ಹನಿ ನಗೆಯ ಬೆಳದಿಂಗಳ ಶಶಿ
ಒಲವೇ ಅದರ ಉಸಿರು ||ಪ||
ಮಣ್ಣ ವಾಸನೆಯಲಿ ಬೆರೆತ ನೆನಪುಗಳು
ಇಳೆಯು ಬಿರಿದು ಮೊಳಕೆ
ಹಸಿರ ಮರೆಯಲಿ ನಾಚಿದ ಮಲ್ಲಿಗೆ
ಬೇರೆ ಹೆಸರು ಬೇಕೆ
ಕಡಲನೊರೆಯೊಡನೆ ನಕ್ಕ ಕನಸುಗಳು
ಮೀಟಿ ಎದೆಯ ತಂತು
ಮುಗಿಲ ಮೋಡಗಳ ಮೆತ್ತನೆ ಹಾಸಿಗೆ
ಹಗಲೂ ಜ್ವರವ ತಂತು
ಕಾಡು ಕತ್ತಲೆಗೆ ಮತ್ತು ಸೇರಿಸಿದ
ರಾತ್ರಿ ರಾಣಿ ತಂಪು
ಸುಳಿವ ಗಾಳಿಗೆ ಒಲವು ಸವರಿದ
ಹಕ್ಕಿ ಕೊರಳ ಇಂಪು
ಭಾವ ಸಾಗರದಲಿ ಅರಳಿದ ತಾವರೆ
ಪ್ರೀತಿ ಅದರ ಹೆಸರು
ಹನಿ ಹನಿ ನಗೆಯ ಬೆಳದಿಂಗಳ ಶಶಿ
ಒಲವೇ ಅದರ ಉಸಿರು ||ಪ||
- ಉಮೇಶ ಮುಂಡಳ್ಳಿ ಭಟ್ಕಳ
9945840552
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


