ಆಚಾರ್ಯಾಸ್ ಏಸ್ ನಲ್ಲಿ ಪಿಯುಸಿ ರ್‍ಯಾಂಕ್ ವಿಜೇತರಿಗೆ ಸಂಮಾನ

Upayuktha
0



ಉಡುಪಿ: ಹತ್ತನೇ ತರಗತಿ, ಪಿಯುಸಿ ಸಿಇಟಿ ನೀಟ್ ಹಾಗೂ ಬ್ಯಾಂಕಿಂಗ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ಆಯೋಜಿಸಿ ಅತ್ಯುತ್ತಮ ಫಲಿತಾಂಶ ಗಳಿಸುತ್ತಿರುವ ಉಡುಪಿಯ ಆಚಾರ್ಯಾಸ ಏಸ್ ಸಂಸ್ಥೆಯಲ್ಲಿ ರ್‍ಯಾಂಕ್ ವಿಜೇತರಿಗೆ ಅಭಿನಂದನಾ ಸಮಾರಂಭ ನೆರವೇರಿತು.


ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಜರಗಿದ ದ್ವಿತೀಯ ಪಿಯುಸಿಯ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎಂಟನೇ ಮತ್ತು ಹತ್ತನೇ ರ್‍ಯಾಂಕ್ ಪಡೆದ ಸ್ನೇಹ ಹಾಗೂ ರೆಹಾನ್ ಅವರನ್ನು ಅಭಿನಂದಿಸಲಾಯಿತು.


ಈ ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಿದ್ದ ವಿದ್ವಾನ್ ಶ್ರೀಸೊಂಡೂರು ಪ್ರಹ್ಲಾದ್ ಆಚಾರ್ಯ,ಪತ್ರಕರ್ತ ಹಾಗೂ ಪ್ರಸಿದ್ಧ ಛಾಯಾಚಿತ್ರಗ್ರಾಹಕರಾದ ಶ್ರೀ ಜನಾರ್ದನ ಕೊಡವೂರು, ಇಮೇಜ್ ಮೊಬೈಲ್ಸ್ ಸಂಸ್ಥೆಯ ಮಾಲೀಕರಾದ ಶ್ರೀ ಯಾದವ, ಶ್ರೀ ಧನುಷ್, ಕೆಮಿಸ್ಟ್ರಿ ಪ್ರಾಧ್ಯಾಪಕಿ ಶ್ರೀಮತಿ ಶಶಿಕಲಾ ಅವರು ರ್‍ಯಾಂಕ್ ವಿಜೇತರನ್ನು ಸಮ್ಮಾನಿಸಿದರು.


ಶ್ರೀಜನಾರ್ಧನ ಕೊಡವೂರು ಸಾಂದರ್ಭಿಕವಾಗಿ ಮಾತನಾಡಿ ರ್‍ಯಾಂಕ್ ವಿಜೇತರಾದ ಸ್ನೇಹ ಹಾಗೂ ರೆಹಾನ್ ಅವರ ಸಾಧನೆಯು ಎಲ್ಲ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು.


ಸಂಸ್ಥೆಯ ನಿರ್ದೇಶಕ ಶ್ರೀಅಕ್ಷೋಭ್ಯ ಸ್ವಾಗತಿಸಿದರು. ಏಸ್ ಸಂಸ್ಥೆಯ ಸ್ಥಾಪಕ ಲಾತವ್ಯ ಆಚಾರ್ಯ ಪ್ರಾಸ್ತಾವಿಕ ಮಾತುಗಳನ್ನಾಡಿ ನಿರೂಪಿಸಿದರು.


ಪ್ರಕೃತ ರಾಂಕ್ ವಿಜೇತರಾದ ಸ್ನೇಹ ಹಾಗೂ ರೆಹಾನ್ ಸೇರಿದಂತೆ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳು ಆಚಾರ್ಯಾಸ್ ಏಸ್ ಸಂಸ್ಥೆಯ ಮುಖಾಂತರ ಸಿಇಟಿ ನೀಟ್ ಪಿಯುಸಿ, ಹಾಗೂ ಹತ್ತನೇ ತರಗತಿಯ ವಿಷಯವಾಗಿ ತರಬೇತಿಯನ್ನು ಕಳೆದ ಒಂದುವರ್ಷದಿಂದ ಪಡೆಯುತ್ತಿದ್ದಾರೆ.


2026-27 ರ ಸಾಲಿನ ಸಿಐಟಿ ನೀಟ್, ಪಿಯುಸಿ ಹಾಗೂ ಹತ್ತನೇ ತರಗತಿಯ ತರಬೇತಿಯು ಆರಂಭಗೊಂಡಿದೆ. ಆಸಕ್ತರು ಉಡುಪಿ ತೆಂಕಪೇಟೆಯ ಶ್ರೀಲಕ್ಷ್ಮಿವೆಂಕಟರಮಣ ದೇವಾಲಯದ ಸಮೀಪವಿರುವ ಏಸ್ ಸಂಸ್ಥೆಯನ್ನು ಸಂಪರ್ಕಿಸಬಹುದೆಂದು ಸಂಸ್ಥೆಯ ನಿರ್ದೇಶಕ ಅಕ್ಷೋಭ್ಯ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top