ಪಿಯುಸಿ ಫಲಿತಾಂಶ: ಪೇಸ್ ಕಾಲೇಜಿನ ವಿದ್ಯಾರ್ಥಿನಿ ಮಹಿನ್ ರಾಜ್ಯಕ್ಕೆ 3, ಶಿವಮೊಗ್ಗ ಜಿಲ್ಲೆಗೆ ಪ್ರಥಮ

Upayuktha
0

ಶೇ.99.42 ಫಲಿತಾಂಶದ ಮೂಲಕ ಮತ್ತೆ ದಾಖಲೆ ಬರೆದ ಪೇಸ್ ಕಾಲೇಜು





ಶಿವಮೊಗ್ಗ: 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯ ಪ್ರತಿಷ್ಠಿತ ಪೇಸ್ ಕಾಲೇಜಿಗೆ ಶೇ.99.42ರಷ್ಟು ಫಲಿತಾಂಶ ಲಭಿಸಿದ್ದು, ಕಾಲೇಜಿನ ಮಹೀನ್ ಖಾನಮ್ ಅಫ್ರಿದಿ ಎಂಬ ವಿದ್ಯಾರ್ಥಿನಿ ರಾಜ್ಯಕ್ಕೇ 3ನೇ ಸ್ಥಾನ ಗಳಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.


ಕಾಲೇಜಿನ ಒಟ್ಟು 697 ವಿದ್ಯಾರ್ಥಿಗಳಲ್ಲಿ 479 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 210 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯನ್ನು, 04 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯನ್ನು ಪಡೆದು ಶೇ.99.42ರಷ್ಟು ಫಲಿತಾಂಶದೊಂದಿಗೆ ತೇರ್ಗಡೆ ಹೊಂದಿದ್ದಾರೆ.


ಕಾಲೇಜಿನ ಮಹೀನ್ ಖಾನಮ್ ಅಫ್ರಿದಿ ಎಂಬ ವಿದ್ಯಾರ್ಥಿನಿಯು 600ಕ್ಕೆ 596 ಅಂಕಗಳೊAದಿಗೆ ರಾಜ್ಯಕ್ಕೆ 3ನೇ ಸ್ಥಾನ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದು ಕೀರ್ತಿ ತಂದಿದ್ದಾರೆ.


ಇವರ ಈ ಸಾಧನೆಗೆ ಕಾಲೇಜಿನ ಟ್ರಸ್ಟಿಗಳು, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


ಸಾಧಕ ವಿದ್ಯಾರ್ಥಿಗಳಿವರು:

ಮಹಿನ್ ಖಾನಮ್ ಅಫ್ರಿದಿ 596 (3ನೇ ರ‍್ಯಾಂಕ್)

ಎA.ಎಸ್. ಸಾಧ್ವಿ  594 (5ನೇ ರ‍್ಯಾಂಕ್)

ಯು.ವಿ. ಅಂಕಿತ್ 589 (10 ನೇ ರ‍್ಯಾಂಕ್)

ಪಿ.ಒ. ಸಿಂಚನಾ  589 (10ನೇ ರ‍್ಯಾಂಕ್)

ಧೃತಿ ಎಚ್. ಭಟ್ 589 (10 ನೇ ರ‍್ಯಾಂಕ್)


100 ಕ್ಕೆ 100ರಷ್ಟು ಅಂಕ ಪಡೆದ ವಿದ್ಯಾರ್ಥಿಗಳು

ಹಿಂದಿ  2

ಸಂಸ್ಕೃತ  50

ಭೌತಶಾಸ್ತ್ರ  12

ರಸಾಯನಶಾಸ್ತ್ರ  1

ಗಣಿತ  35

ಜೀವಶಾಸ್ತ್ರ  5

ಕಂಪ್ಯೂಟರ್ ಸೈನ್ಸ್ 37



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top