ಅದಮ್ಯ ಚೇತನಾ ಸಂಸ್ಥೆಯಲ್ಲಿ ಡಿಜಿಟಲ್ ಲ್ಯಾಬ್ ಉದ್ಘಾಟನೆ; ದಿವ್ಯಾಂಗ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಆಚರಣೆ

Upayuktha
0


ಮಂಗಳೂರು: ಸೇವಾ ಭಾರತಿ (ರಿ) ಮಂಗಳೂರು ಇದರ ಮಾಧವ ವನ ಮೊಂಟೆಪದವು ಇಲ್ಲಿನ ಅಂಕುರ ಕಟ್ಟಡದಲ್ಲಿ ಐ.ಸಿ.ಐ.ಸಿ.ಐ ಫೌಂಡೇಶನ್ ಇದರ ಸಹಕಾರದೊಂದಿಗೆ ವ್ಯವಸ್ಥೆಗೊಂಡಿರುವ ಡಿಜಿಟಲ್ ಲ್ಯಾಬ್ ಮತ್ತು ಮಲ್ಟಿ ಸ್ಕಿಲ್ಲಿಂಗ್ ಲ್ಯಾಬ್ ಇದರ ಉದ್ಘಾಟನಾ ಕಾರ್ಯಕ್ರಮ ಮತ್ತು ಅದಮ್ಯ ಚೇತನಾ ದಿವ್ಯಾಂಗ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಆಚರಣೆಯು ಗುರುವಾರ (ಏ.9) ಬಹಳ ವಿಜೃಂಭಣೆಯಿಂದ ನಡೆಯಿತು.


ಡಿಜಿಟಲ್ ಲ್ಯಾಬ್ ಕೋಣೆಯ ಉದ್ಘಾಟನೆಯನ್ನು ಐ.ಸಿ.ಐ.ಸಿ.ಐ ಬ್ಯಾಂಕಿನ ವಲಯ ಮುಖ್ಯಸ್ಥರು, ಕರ್ನಾಟಕ ಸೆಂಟ್ರಲ್ ಅಧಿಕಾರಿಗಳಾದ ಶ್ರೀ ಶಶಿಕುಮಾರ್ ಎನ್. ಮತ್ತು ಮಲ್ಟಿ ಸ್ಕಿಲ್ಲಿಂಗ್ ಲ್ಯಾಬ್ ಕೋಣೆಯ ಉದ್ಘಾಟನೆಯನ್ನು ಐ.ಸಿ.ಐ.ಸಿ.ಐ ಫೌಂಡೇಶನ್‌ನ ಪ್ರೊಜೆಕ್ಟ್ ಮ್ಯಾನೇಜರ್ ಶ್ರೀ ರಾಜಸಾಹಿಬ್ ಮತ್ತು ಇನ್‌ಸ್ಟಿಟ್ಯೂಷನಲ್ ಬ್ಯಾಂಕಿನ ಪ್ರಾದೇಶಿಕ ಮುಖ್ಯಸ್ಥರಾದ ಸಂತೋಷ ಮಳಲಿ ಕೊಪ್ಪ ಇವರು ನೆರವೇರಿಸಿಕೊಟ್ಟರು.


ಅದೇ ರೀತಿ ಅದಮ್ಯ ಚೇತನಾ ದಿವ್ಯಾಂಗ ಮಕ್ಕಳ ಸಾಮೂಹಿಕ ಹುಟ್ಟುಹಬ್ಬವನ್ನು ಐ.ಸಿ.ಐ.ಸಿ.ಐ ಬ್ಯಾಂಕಿನ ಅಧಿಕಾರಿಗಳು ಮತ್ತು ಐ.ಸಿ.ಐ.ಸಿ.ಐ ಫೌಂಡೇಶನ್‌ನ ಸದಸ್ಯರೊಂದಿಗೆ ಸೇರಿ ಆರತಿ ಬೆಳಗುವುದರ ಮತ್ತು ಕೇಕ್ ಕತ್ತರಿಸುವುದರ ಮೂಲಕ ಬಹಳ ಉತ್ತಮವಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು.


ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪೃಥ್ವಿಪಾಲ.ಕೆ ಇವರು ಪ್ರಾಸ್ತಾವಿಕ ಮಾತನ್ನಾಡಿದರು. ಈ ಕಾರ್ಯಕ್ರಮಗಳಲ್ಲಿ ಸೇವಾ ಭಾರತಿ ಸಂಸ್ಥೆಯ ಗೌರವ ಕಾರ್ಯದರ್ಶಿ ಹೆಚ್.ನಾಗರಾಜ ಭಟ್, ಕೋಶಾಧಿಕಾರಿ ವಿನೋದ್ ಶೆಣೈ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವರ್ಷ, ಸಂಸ್ಥೆಯ ವಿಶ್ವಸ್ಥರು, ಸ್ವಯಂಸೇವಕರು, ಮಕ್ಕಳ ಪೋಷಕರು ಮತ್ತು ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


ಹುಟ್ಟುಹಬ್ಬದ ಪ್ರಯುಕ್ತ ಎಲ್ಲಾ ಮಕ್ಕಳಿಗೂ ಕ್ರೀಡಾ ಸಮವಸ್ತೃವನ್ನು ಉಡುಗೊರೆಯಾಗಿ ನೀಡಲಾಯಿತು. ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ಮತ್ತು ಶಾಲೆಯ ಸಿಬ್ಬಂದಿ ವರ್ಗದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದುವು.


ಶಾಲಾ ಮಕ್ಕಳ ಪ್ರಾರ್ಥನೆಯ ನಂತರ ಶಿಕ್ಷಕಿ ಶ್ರೀಮತಿ ಡೈಸಿ ಸಾಂಡ್ರಾ ಪಿಂಟೋ ಅವರು ಸ್ವಾಗತಿಸಿದರು. ಶ್ರೀಮತಿ ಉಷಾ ಅವರು ವಂದನಾರ್ಪಣೆಗೈದರು. ಶಿಕ್ಷಕಿಯರಾದ ಶ್ರೀಮತಿ ಉಷಾ, ಶ್ರೀಮತಿ ಲಿಖಿತಾ ಹಾಗೂ ಫಿಸಿಯೋಥೆರಪಿಸ್ಟ್ ಶ್ರೀಮತಿ ಕವಿತಾ ಇವರು ಕಾರ್ಯಕ್ರಮದ ನಿರೂಪಣೆಗೈದರು. ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು, ಹಿತೈಷಿಗಳು ಪಾಲ್ಗೊಂಡಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top