ಯಕ್ಷಗಾನ ಗಟ್ಟಿಯಾಗಿ ಬೇರೂರಲು ಸಂಘಟನೆಗಳೂ ಕಾರಣ: ಎಡನೀರು ಶ್ರೀ

Upayuktha
0


ಪುತ್ತೂರು: ಯಕ್ಷಗಾನ ಕಲೆಯು ಕರಾವಳಿಯಾದ್ಯಂತ ಗಟ್ಟಿಯಾಗಿ ನೆಲೆ ನಿಂತಿದ್ದರೆ, ಅದಕ್ಕೆ ಸದಾಕಾಲ ಪ್ರೋತ್ಸಾಹಿಸುತ್ತಿರುವ ಹಲವು ಯಕ್ಷ ಸಂಘಟನೆಗಳು, ಸಂಘಟಕರು ಕೂಡಾ ಕಾರಣರು ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅಭಿಪ್ರಾಯಪಟ್ಟರು.


ಇಲ್ಲಿನ ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ಆವರಣದಲ್ಲಿ ಯಕ್ಷಮಿತ್ರರು ಬೆಂಗಳೂರು ಟ್ರಸ್ಟ್ ವತಿಯಿಂದ ಹಿರಿಯ ಯಕ್ಷಗಾನ ತಾಳಮದ್ದಳೆ ಕಲಾವಿದ ಹರೀಶ್ ಬಳಂತಿಮೊಗರು ಅವರ ಸಮ್ಮಾನ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಆಶೀರ್ವಚನ ನೀಡಿದರು.


ಇತರೆಲ್ಲಾ ಕಲೆಗಿಂತ ಹೆಚ್ಚಿನ ಪ್ರೋತ್ಸಾಹವಿಂದು ಯಕ್ಷಗಾನಕ್ಕೆ ಈ ನಮ್ಮ ಸೀಮಿತ ಪ್ರದೇಶದಲ್ಲಿ ಸಿಗುತ್ತಿದೆ. ಯಕ್ಷಮಿತ್ರರು ಬೆಂಗಳೂರು ಸಂಘಟನೆಯಿಂದ ಶ್ಲಾಘನೀಯ ಕಾರ್ಯನಡೆಯುತ್ತಿದೆ, ಯಕ್ಷಗಾನ ಕಲಾವಿದರೂ ಕೂಡಾ ಯಕ್ಷಾಭಿಮಾನಿಗಳ ವಿಶ್ವಾಸವನ್ನು ಉಳಿಸಿಕೊಂಡು ಬರುವುದು ಮುಖ್ಯ ಎಂದೂ ನುಡಿದರು.


ಸಮ್ಮಾನ ಸ್ವೀಕರಿಸಿ ಮಾತನಾಡಿದ ಕಲಾವಿದ ಹರೀಶ್ ಬಳಂತಿಮೊಗರು ಅವರು, ಸಮ್ಮಾನ ಎನ್ನುವುದು ನನಗಲ್ಲ, ಅದು ನನ್ನಲ್ಲಿ ಇರುವ ಕಲೆಗೆ. ಕಲೆ ಎನ್ನುವುದನ್ನು ಮುಂದಿನ ಜನಾಂಗಕ್ಕೆ ದಾಟಿಸುವುದಕ್ಕೆ ಭಗವಂತ ಇದೊಂದು ಅವಕಾಶ ಕೊಟ್ಟಿದ್ದಾನೆ ಎಂದು ಭಾವ ಕಲಾವಿದರಲ್ಲಿ ಇರಬೇಕು, ಹಾಗಿದ್ದರೆ, ಕಲೆಗೆ ಸರಿಯಾದ ನ್ಯಾಯ ಸಲ್ಲಿಸಲು ಸಾಧ್ಯ. ಕಲೆ ನಮ್ಮನ್ನು ಪುನೀತರನ್ನಾಗಿ, ಸಜ್ಜನರನ್ನಾಗಿ ಮಾಡಲಿ ಎಂದು ಆಶಿಸಿದರು.


ಯಕ್ಷಮಿತ್ರರು ಬೆಂಗಳೂರು ಗೌರವಾಧ್ಯಕ್ಷ ಆರ್.ಕೆ.ಬೆಳ್ಳಾರೆ, ಕುಂಟ್ಯಾನ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧರ್ಣಪ್ಪ ಮೂಲ್ಯ, ಆಡಳಿತ ಮೊಕ್ತೇಸರ ರಾಘವೇಂದ್ರ ಮಯ್ಯ, ಗ್ರಾಮದ ಹಿರಿಯರಾದ ರಾಜಶೇಖರ ಜೈನ್ ನೀರ್ಪಾಜೆ ಉಪಸ್ಥಿತರಿದ್ದರು. ಯಕ್ಷಮಿತ್ರರು ಟ್ರಸ್ಟ್ ಸಂಚಾಲಕ ಶ್ಯಾಮಸೂರ್ಯ ಮುಳಿಗದ್ದೆ ಪ್ರಸ್ತಾವಿಸಿದರು, ರಶ್ಮಿ ಕೆ. ನಿರೂಪಿಸಿದರು.


ಇದೇ ವೇಳೆ ಹನುಮಗಿರಿ ಮೇಳದವರಿಂದ ದಮಯಂತಿ ಪುನಃಸ್ವಯಂವರ, ಗದಾಯುದ್ಧ, ರಕ್ತರಾತ್ರಿ ಯಕ್ಷಗಾನ ಪ್ರದರ್ಶನ ನಡೆಯಿತು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top