ಬೆಂಗಳೂರು, ಏಪ್ರಿಲ್ 30: ಅಡಮಾನ, ಬ್ಯಾಂಕಿಂಗ್ ಮತ್ತು ವಿಮಾ ವಲಯಗಳಿಗೆ ತಂತ್ರಜ್ಞಾನ ಸೇವೆ ನೀಡುವ ಮಾಡರ್, AI-ಆಧಾರಿತ ಸೇವೆಗಳೊಂದಿಗೆ ಭಾರತದಲ್ಲಿನ ತನ್ನ ವಹಿವಾಟು ವಿಸ್ತರಣೆಗೆ ಚಿಂತನೆ ನಡೆಸಿದೆ. ಹಣಕಾಸು ಸಂಸ್ಥೆಗಳು ವೆಚ್ಚವನ್ನು ಕಡಿಮೆ ಮಾಡುವ ಮತ್ತು ಪ್ರಕ್ರಿಯೆ ತ್ವರಿತಗೊಳಿಸುವತ್ತ ಹೆಚ್ಚು ಗಮನಹರಿಸುತ್ತಿದ್ದು, ಆ ನಿಟ್ಟಿನಲ್ಲಿ AI-ಆಧಾರಿತ ಸೇವೆಗಳು ಪರಿಣಾಮಕಾರಿ ಎಂದು ಸಂಸ್ಥೆ ಭಾವಿಸಿದೆ.
2021ರಲ್ಲಿ ಸ್ಥಾಪನೆಯಾದ ಕಂಪನಿಯು ಜಾಗತಿಕವಾಗಿ 7,400 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದು, ಇದರಲ್ಲಿ ಭಾರತದಲ್ಲಿ 5,000ಕ್ಕೂ ಹೆಚ್ಚು ಜನರಿದ್ದಾರೆ. ಪ್ರಮುಖ ಹಣಕಾಸು ಸೇವೆಗಳ ಮಾರುಕಟ್ಟೆಗಳಲ್ಲಿ 65 ಕ್ಕೂ ಹೆಚ್ಚು ಗ್ರಾಹಕರನ್ನು ಸಂಸ್ಥೆ ಹೊಂದಿದೆ.
ಕಂಪನಿಯು ಸೇವಾ ಬಲವರ್ಧನೆ ನಿಟ್ಟಿನಲ್ಲಿ ಪಲಂತಿರ್ ಟೆಕ್ನಾಲಜೀಸ್‌ನ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾದ ಮೋಡ್‌ಐಕ್ಯೂ ಮೂಲಕ AI-ಆಧಾರಿತ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುತ್ತಿದೆ. ಇದು ಹಣಕಾಸು ಸಂಸ್ಥೆಗಳ ಸೇವಾ ಸಾಮರ್ಥ್ಯ ವೃದ್ಧಿಸಲಿದೆ ಎಂದು ಮಾಡರ್‌ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎರಿಕ್ ಆಂಡರ್ಸನ್ ಹೇಳಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


