ಚೇತನಾ ಶಾಲೆಯಲ್ಲಿ ಸಾಮೂಹಿಕ ಜನ್ಮದಿನಾಚರಣೆ

Upayuktha
0


ಮಂಗಳೂರು: ಸೇವಾಭಾರತಿ (ರಿ) ಮಂಗಳೂರು ಇದರ ಅಂಗಸಂಸ್ಥೆಯಾದ ಚೇತನಾ ಬಾಲ ವಿಕಾಸ ಕೇಂದ್ರ, ವಿ.ಟಿ.ರಸ್ತೆ,ಮಂಗಳೂರು ಇಲ್ಲಿ ದಿನಾಂಕ 30ನೇ ಮಾರ್ಚ್ 2026 ರಂದು ವಿಶೇಷ ಮಕ್ಕಳ ಸಾಮೂಹಿಕ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. 


ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಬಿ.ಎ.ಎಸ್.ಎಫ್. ನಿರ್ದೇಶಕರಾದ ಶ್ರೀ ಶ್ರೀನಿವಾಸ ಪ್ರಾಣೇಶ್ ಇವರು ಮಾತನಾಡಿ, ಸಾಂಪ್ರದಾಯಿಕ ಶೈಲಿಯಲ್ಲಿ ಹುಟ್ಟುಹಬ್ಬದ ಆಚರಣೆ ಮಾಡುತ್ತಿರುವ ಸೇವಾಭಾರತಿ ಸಂಸ್ಥೆಯ ಕಾರ್ಯಕ್ರಮವನ್ನು ಕೊಂಡಾಡಿದರು ಮತ್ತು ವಿಶೇಷ ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಕಿಯರ ಬದ್ಧತೆಯನ್ನು ಮತ್ತು ಕರ್ತವ್ಯವನ್ನು ಪ್ರಶಂಸಿಸಿದರು. ಸೇವಾಭಾರತಿಯೊಡನೆ ತಮ್ಮ ಸಂಸ್ಥೆಯ ಸಹಯೋಗವನ್ನು ಇನ್ನೂ ಮುಂದುವರಿಸುವ ಬಗ್ಗೆ ಭರವಸೆ ನೀಡಿದರು.


ಶ್ರೀ ಶ್ರೀನಿವಾಸ ಪ್ರಾಣೇಶ್ ಅವರನ್ನು ಇದೇ ಸಂದರ್ಭದಲ್ಲಿ ಸೇವಾ ಭಾರತಿ ವತಿಯಿಂದ ಸನ್ಮಾನಿಸಲಾಯಿತು. ಬಿ.ಎ.ಎಸ್.ಎಫ್. ಮಾನವಸಂಪನ್ಮೂಲ ಅಧಿಕಾರಿಗಳಾದ ಶ್ರೀ ಸಂತೋಷ್ ಪೈ ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಸೇವಾಭಾರತಿ (ರಿ) ಮಂಗಳೂರು ಸಂಸ್ಥೆಯ ಹಿರಿಯ ಸ್ವಯಂಸೇವಕರಾದ ಶ್ರೀ ಪ್ರಕಾಶ್ ಪೈ ಅವರು ಹುಟ್ಟುಹಬ್ಬದ ಆಚರಣೆ ಬಗ್ಗೆ ಪ್ರಾಸ್ತಾವಿಕ ಮಾತನ್ನಾಡಿದರು. ಸೇವಾ ಭಾರತಿ ಗೌರವ ಕಾರ್ಯದರ್ಶಿ ಶ್ರೀ ನಾಗರಾಜ ಭಟ್, ವಿಶ್ವಸ್ಥರಾದ ಶ್ರೀ ವಿನೋದ್ ಶೆಣೈ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಪ್ರೀತಾ, ಇವರೂ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪೋಷಕರು, ಸ್ವಯಂಸೇವಕರು, ಮಕ್ಕಳು ಮತ್ತು ಶಿಕ್ಷಕಿಯರು ಹಾಡು ಮತ್ತು ನೃತ್ಯದ ಮೂಲಕ ವಿಶೇಷ ಮಕ್ಕಳನ್ನು ರಂಜಿಸಿದರು ಮಕ್ಕಳಿಗೆ ತಿಲಕ ಇಟ್ಟು ಆರತಿ ಬೆಳಗಿ, ಸಿಹಿ ತಿಂಡಿ ತಿನಿಸು ನೀಡುವ ಮೂಲಕ ಮಕ್ಕಳ ಜನ್ಮದಿನಾಚರಣೆ ಆಚರಿಸಲಾಯಿತು ಮಾತ್ರವಲ್ಲದೆ ಎಲ್ಲಾ ಮಕ್ಕಳಿಗೂ ವಿಶೇಷ ಉಡುಗೊರೆ ನೀಡಲಾಯಿತು.


ಶಾಲಾ ಶಿಕ್ಷಕಿಯರಿಂದ ಪ್ರಾರ್ಥನಾ ಗೀತೆ ಮೂಲಕ ಆರಂಭವಾದ ಸಮಾರಂಭದಲ್ಲಿ,ಶ್ರೀ ನಾಗರಾಜ್ ಭಟ್ ಅವರು ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಚಂಪಾ ಇವರು ಧನ್ಯವಾದ ಅರ್ಪಿಸಿದರು. ಶಿಕ್ಷಕಿ ಶ್ರೀಮತಿ ರೇಖಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.


ಸೇವಾಭಾರತಿ (ರಿ) ಮಂಗಳೂರು ಇದರ ವಿಶ್ವಸ್ಥರು ಶಾಲಾ ಶಿಕ್ಷಕಿಯರು ಹಾಗೂ ಶಿಕ್ಷಕೇತರರು, ಸಂಸ್ಥೆಯ ಇತರ ಸಹೋದ್ಯೋಗಿಗಳು, ಸ್ವಯಂಸೇವಕರು, ಹೆತ್ತವರು ಹಾಗೂ ಪೋಷಕರು, ಹಿತೈಷಿಗಳು ಕಾರ್ಯಕ್ರಮದಲ್ಲಿ ಬಹು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top