ಕೊಡವೂರು: ಏಪ್ರಿಲ್ 18 ರಂದು ಶ್ರೀ ಪಂಚಧೂಮಾವತಿ ದೈವಸ್ಥಾನದಲ್ಲಿ ನೇಮೋತ್ಸವ

Upayuktha
0


​ಉಡುಪಿ: ಇಲ್ಲಿನ ಕೊಡವೂರು ಗ್ರಾಮದ ಜುಮಾದಿನಗರದ ಶ್ರೀ ಪಂಚಧೂಮಾವತಿ ದೈವಸ್ಥಾನದಲ್ಲಿ ಏಪ್ರಿಲ್ 18ರ ಶನಿವಾರದಂದು ದೈವಗಳ ಸಿರಿ ಸಿಂಗಾರದ ನೇಮೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.


ಬೆಳಿಗ್ಗೆ 8:30ಕ್ಕೆ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಾರ್ಥನೆ; ಬಳಿಕ ಜುಮಾಧಿನಗರ ದೈವಸ್ಥಾನದಲ್ಲಿ ಪ್ರಧಾನ ಹೋಮ, ಕಲಾಶಾಭಿಷೇಕ ಮತ್ತು ಚಪ್ಪರ ಮೂಹೂರ್ತ, ಮಧ್ಯಾಹ್ನ 12:30ಕ್ಕೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.


​ಸಂಜೆ 3:30ಕ್ಕೆ ಶ್ರೀ ವಡಭಾಂಡೇಶ್ವರ ಬಲರಾಮ ದೇವಸ್ಥಾನದಿಂದ ಭಜನಾ ತಂಡಗಳು, ಚೆಂಡೆ, ಡೋಲು ಹಾಗೂ ತಾಳಮದ್ದಳೆಗಳೊಂದಿಗೆ "ಸಾವಿರ ಸೂಟೆಯ ಬೃಹತ್ ಶೋಭಾಯಾತ್ರೆ" ನಡೆಯಲಿದೆ.


ರಾತ್ರಿ 8:30 ರಿಂದ ಶ್ರೀ ಪಂಚಧೂಮಾವತಿ ಬಂಟ ದೈವಗಳ ವೈಭವದ ನೇಮೋತ್ಸವ ನಡೆಯಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top