ಎಂಸಿಸಿ ಬ್ಯಾಂಕ್ ವತಿಯಿಂದ ಅಂತರರಾಜ್ಯ ಬ್ಯಾಂಕಿಂಗ್ ಸಂವಾದ ಕಾರ್ಯಕ್ರಮ

Upayuktha
0

 


ಗೋವಾ: ಎಂಸಿಸಿ ಬ್ಯಾಂಕ್ ವತಿಯಿಂದ 2026 ಏಪ್ರಿಲ್ 25 ಮತ್ತು 26ರಂದು ಗೋವಾದ Courtyard by Marriott ನಲ್ಲಿ ಅಂತರರಾಜ್ಯ ಬ್ಯಾಂಕಿಂಗ್ ಸಂವಾದವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಹಿರಿಯ ಅಧಿಕಾರಿಗಳು, ಶಾಖಾ ವ್ಯವಸ್ಥಾಪಕರು, ಕ್ರೆಡಿಟ್ ಅಧಿಕಾರಿಗಳು, ಮುಂದಿನ ವ್ಯವಸ್ಥಾಪಕರು ಹಾಗೂ ನಿರ್ದೇಶಕರ ಮಂಡಳಿ ಸದಸ್ಯರು ಭಾಗವಹಿಸಿದರು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಗಳನ್ನು ಚರ್ಚಿಸುವುದು ಹಾಗೂ ಅಂತರರಾಜ್ಯ ಸಹಕಾರವನ್ನು ಉತ್ತೇಜಿಸುವುದು ಸಂವಾದದ ಮುಖ್ಯ ಉದ್ದೇಶವಾಗಿತ್ತು.

ಸಂವಾದದ ಉದ್ಘಾಟಣಾ ಕಾರ್ಯಕ್ರಮದಲ್ಲಿ ಎಂಸಿಸಿ ಬ್ಯಾಂಕ್ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೋ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗೋವಾ ಬೀನೌಲಿಂನ ಕ್ಯಾಟೆಕೇಟಿಕ್ಸ್ ಆಯೋಗದ ಕಾರ್ಯದರ್ಶಿ ವಂದನೀಯ ಫಾ| ವಿಜಯ ಮಚಾದೊ, ಗೋವಾ ಅರ್ಭನ್ ಸಹಕಾರ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಶ್ರೀ ಗೋಪಾಲಕೃಷ್ಣ ವೈ. ನಾಯಕ್, IIM Kozhikode ವಿಸಿಟಿಂಗ್ ಪ್ರೊಫೆಸರ್ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಸಿಎ ಲಾಯ್ನಲ್ ಅರಾನ್ಹಾ, ದೈಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಶ್ರೀ ವಾಲ್ಟರ್ ನಂದಳಿಕೆ, ಮಿಲಾಗ್ರಿಸ್ ಕಾಲೇಜು ಕಲ್ಯಾಣ್ಪುರದ ಪ್ರಾಂಶುಪಾಲರಾದ ಡಾ| ವಿನ್ಸೆಂಟ್ ಅಳ್ವ ಹಾಗೂ ಎಂಸಿಸಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಶ್ರೀ ಸುನಿಲ್ ಮೆನೇಜಸ್ ಉಪಸ್ಥಿತರಿದ್ದರು.

ಅನಿಲ್ ಲೋಬೋ ಅಧ್ಯಕ್ಷೀಯ ಮಾತುಗಳನ್ನಾಡಿ, ಎಲ್ಲ ಗಣ್ಯರು, ಸಂಪನ್ಮೂಳ ವ್ಯಕ್ತಿಗಳು ಮತ್ತು ಹಾಜರಿದ್ದವರನ್ನು ಸ್ವಾಗತಿಸಿದರು. ಬ್ಯಾಂಕಿನ ನಿರಂತರ ಬೆಳವಣಿಗೆಗೆ ಬಲವಾದ ನಾಯಕತ್ವ, ನಿಷ್ಟಾವಂತ ಸಿಬ್ಬಂದಿ ಮತ್ತು ಗ್ರಾಹಕರ ವಿಶ್ವಾಸವೇ ಕಾರಣವೆಂದು ಅವರು ಹೇಳಿದರು. ಬ್ಯಾಂಕಿನ ಭವಿಷ್ಯದ ದೃಷ್ಟಿಕೋನದ ಕುರಿತು ಮಾತನಾಡಿದ ಅವರು, ಬ್ಯಾಂಕಿAಗ್ ಕ್ಷೇತ್ರದಲ್ಲಿ ವೇಗವಾಗಿ ನಡೆಯುತ್ತಿರುವ ಬದಲಾವಣೆಗಳ ಹಿನ್ನೆಲೆಯಲ್ಲಿ ನವೀನತೆ, ಡಿಜಿಟಲ್ ಪರಿವರ್ತನೆ ಮತ್ತು ಉತ್ತಮ ಗ್ರಾಹಕ ಸೇವೆಯನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಒತ್ತಿ ಹೇಳಿದರು.



ಉದ್ಘಾಟನಾ ಮಾತುಗಳನ್ನಾಡಿದ, ಫಾದರ್ ವಿಜಯ್ ಮಚಾದೊ ಎಂಸಿಸಿ ಬ್ಯಾಂಕಿನ ಸ್ಥಿರ ಬೆಳವಣಿಗೆ, ಉತ್ತಮ ನಿರ್ವಹಣೆ, ನಂಬಿಕೆ ಮತ್ತು ಸೇವೆಯ ಸಮರ್ಪಣೆಗಾಗಿ ಶ್ಲಾಘಿಸಿದರು. ಸಮುದಾಯವನ್ನು ಬಲಪಡಿಸುವಲ್ಲಿ ಬ್ಯಾಂಕಿನ ಪಾತ್ರವನ್ನು ಅವರು ಎತ್ತಿ ತೋರಿಸಿ ಸ್ಪಷ್ಟ ದೃಷ್ಟಿ ಮತ್ತು ಧ್ಯೇಯದೊಂದಿಗೆ ತಮ್ಮ ಸೌಕರ್ಯ ವಲಯಗಳಿಂದ ಹೊರಬರಲು ಒತ್ತಾಯಿಸಿದರು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಮೌಲ್ಯಾಧಾರಿತ ಕಾರ್ಯಪದ್ಧತಿ ಅಗತ್ಯವೆಂದು ಹೇಳಿದ ಅವರು ನಂಬಿಕೆ, ತಂಡದ ಕೆಲಸ, ವಿವೇಕ, ಮೌಲ್ಯಮಾಪನ ಮತ್ತು ಸಕಾರಾತ್ಮಕ ಮನೋಭಾವ ಸೇರಿದಂತೆ ಯಶಸ್ಸಿಗೆ ಹತ್ತು ಮಾರ್ಗದರ್ಶಿ ತತ್ವಗಳನ್ನು ಅವರು ವಿವರಿಸಿದರು.

2026 ಏಪ್ರಿಲ್ 26ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀ ಅನಿಲ್ ಲೋಬೋ ಅವರು ಅಧ್ಯಕ್ಷತೆ ವಹಿಸಿದರು. ಸಿಎ ಲಾಯ್ನಲ್ ಅರಾನ್ಹಾ, ಶ್ರೀ ವಾಲ್ಟರ್ ನಂದಳಿಕೆ,  ಡಾ| ವಿನ್ಸೆಂಟ್ ಅಳ್ವ ಹಾಗೂ ಎಂಸಿಸಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಶ್ರೀ ಸುನಿಲ್ ಮೆನೇಜಸ್ ಉಪಸ್ಥಿತರಿದ್ದರು.

75ನೇ ಜನ್ಮ ದಿನಾಚರಣೆ ಆಚರಿಸಿದ ಬ್ಯಾಂಕಿನ ನಿರ್ದೇಶಕ ಶ್ರೀ ಆಂಡ್ರೂ ಡಿಸೋಜಾ ಅವರನ್ನು ಸಂದರ್ಭದಲ್ಲಿ ಸನ್ಮಾನಿಸಿ ಅವರ ಸೇವೆಯನ್ನು ಸ್ಮರಿಸಲಾಯಿತು.

ಕಾರ್ಯಕ್ರಮದ ಅಂತ್ಯದಲ್ಲಿ ಭಾಗವಹಿಸಿದ ನಿರ್ದೇಶಕರು ಮತ್ತು ಸಿಬ್ಬಂದಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಮಹಾಪ್ರಬಂಧಕ ಶ್ರೀ ಸುನಿಲ್ ಮಿನೇಜಸ್ ಮತ್ತು ಉಪ ಮಹಾಪ್ರಬಂಧಕ ಶ್ರೀ ರಾಜ್ ಮಿನೇಜಸ್ ವಂದಿಸಿದರು. ಬ್ರಹ್ಮಾವರ ಶಾಖಾ ನಿರ್ದೇಶಕ ಶ್ರೀ ಓವಿನ್ ರೆಬೆಲ್ಲೊ ಸ್ವಾಗತಿಸಿ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top