ಪುತ್ತೂರು:
ಇಲ್ಲಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್
ಟೆಕ್ನಾಲಜಿ, ಸೆಂಟರ್ ಆಫ್ ರೀಸರ್ಚ್ ಎಕ್ಸೆಲ್ಲೆನ್ಸಿ,
ಐಇಇಇ ವಿದ್ಯಾರ್ಥಿ ವಿಭಾಗ ಮತ್ತು ಕೋಡ್ ಜಿಂಗ್ ಸಾಫ್ಟ್ವೇರ್ ಸೊಲ್ಯುಶನ್ಸ್ ಉಡುಪಿ ಇದರ ಸಂಯುಕ್ತ ಆಶ್ರಯದಲ್ಲಿ
36 ಗಂಟೆಗಳ ಹ್ಯಾಕಥಾನ್ ಸ್ಪರ್ಧೆಯು ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಿತು. ಶೈಕ್ಷಣಿಕ ಪಠ್ಯಕ್ರಮ ಮತ್ತು ಉದ್ಯಮ ದರ್ಜೆಯ ಅನುಷ್ಟಾನದ ನಡುವಿನ ಅಂತರವನ್ನು ಕಡಿಮೆಗೊಳಿಸುವ ದೃಷ್ಟಿಕೋನದಿಂದ ಇದನ್ನು ಸಂಘಟಿಸಲಾಗಿತ್ತು. ನೈಜ ಪ್ರಪಂಚದ ಸಮಸ್ಯೆಗಳನ್ನು
ಅರಿತುಕೊಂಡು ಅದಕ್ಕೆ ತ್ವರಿತವಾಗಿ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ವೇದಿಕೆಯನ್ನು ಕಲ್ಪಿಸುವುದೂ ಇದರ ಉದ್ದೇಶವಾಗಿತ್ತು. ಪ್ರಾಥಮಿಕ
ಹಂತದಲ್ಲಿ 76 ತಂಡಗಳನ್ನು ವಿವಿಧ ಸ್ಪರ್ಧೆಗೊಳಪಡಿಸಿ 25 ತಂಡಗಳನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡಲಾಗಿತ್ತು. 23 ತಂಡಗಳು ಅಂತಿಮ ಸ್ಪರ್ಧೆಯಲ್ಲಿ ಪಾಲ್ಗೊಂಡವು.
ಉದ್ಘಾಟನಾ ಸಮಾರಂಭದಲ್ಲಿ
ಲಾಜಿಕ್ಹೈವ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರತೀಕ್ ಪೈ.ಪಿ ಮುಖ್ಯ
ಅತಿಥಿಗಳಾಗಿದ್ದು, ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಅಧ್ಯಕ್ಷತೆ
ವಹಿಸಿದ್ದರು. ಕೋರ್ನ ಸ್ಥಾಪಕ
ಮತ್ತು ಕಾಲೇಜಿನ ಹಿರಿಯ ವಿದ್ಯಾರ್ಥಿ ರವಿನಾರಾಯಣ್.ಕೆ.ಎಸ್, ಪ್ರಾಂಶುಪಾಲ
ಡಾ.ಮಹೇಶ್ಪ್ರಸನ್ನ.ಕೆ, ಐಇಇಇ ಬ್ರಾಂಚ್
ಕೌನ್ಸೆಲರ್ ಡಾ.ಜೀವಿತಾ.ಬಿ.ಕೆ ಮತ್ತು ಕಾರ್ಯಕ್ರಮ
ಸಂಯೋಜಕ ಪ್ರೊ.ಶ್ರೀನಿಧಿ.ಎ
ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜು
ಆಡಳಿತ ಮಂಡಲಿಯ ಕೋಶಾಧಿಕಾರಿ ಮುರಳೀಧರ ಭಟ್ ಬಂಗಾರಡ್ಕ ಸಮಾರೋಪ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತಂತ್ರಜ್ಞರ ತಂಡವು ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು. ಪ್ರಾಂಶುಪಾಲ ಡಾ.ಮಹೇಶ್ಪ್ರಸನ್ನ.ಕೆ, ಐಇಇಇ ಬ್ರಾಂಚ್
ಕೌನ್ಸಿಲರ್ ಡಾ.ಜೀವಿತಾ.ಬಿ.ಕೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ
ಕೀರ್ತನ.ಟಿ, ಅಕ್ಷತ.ಕೆ,
ಅಭಿನವ್.ಎನ್.ಜಿ, ಕೃಷ್ಣಪ್ರಸಾದ್
ಮತ್ತು ಶ್ರೀನಿವಾಸ್ ಹೆಗ್ಡೆ ವಿವಿಧ ಜವಾಬ್ಧಾರಿಗಳನ್ನು ನಿರ್ವಹಿಸಿದರು.
ವಿಜೇತ ತಂಡಗಳು: ಮಂಗಳೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಅನುಶ್.ಎನ್, ಯಶಸ್.ಜಿ, ಯತೀನ್ ಶೆಟ್ಟಿ.ಬಿ ಮತ್ತು ಲಕ್ಷಿತ್ ಇವರನ್ನೊಳಗೊಂಡ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡು 35000 ರೂಪಾಯಿ ಬಹುಮಾನದ ಮೊತ್ತವನ್ನು ತಮ್ಮದಾಗಿಸಿಕೊಂಡರು.
ಯೇನಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳಾದ ಸಿಮಾಕ್ ಮೊಯಿದೀನ್, ಸೆನ್ಹೆನ್ ಸಲಾವುದ್ದೀನ್, ಅಭಿನಂದನಾ.ಪಿ ಹಾಗೂ ಸೈಂಟ್ ಫಿಲೋಮಿನಾ ಕಾಲೇಜಿನ ಮೊಹಮ್ಮದ್ ಸಯೀದ್ ಅಬುಬಕ್ಕರ್ ಅವರ ತಂಡವು ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದ್ದು 15000 ರೂಪಾಯಿ ಮೊತ್ತವನ್ನು ತಮ್ಮದಾಗಿಸಿಕೊಂಡರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



