.jpeg)
ಕಾಪು: ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾಪು, ಉಡುಪಿ ,ಇಲ್ಲಿ ಮಹಿಳಾ ವೇದಿಕೆ ಹಾಗೂ ಕ್ರೀಡಾ ವಿಭಾಗದ ವತಿಯಿಂದ ಅಂತರಾಷ್ಟ್ರಿಯ ಮಹಿಳಾ ದಿನಾಚರಣೆ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಸಾಮಾಜಿಕ ಉದ್ಯಮಿಯಾಗಿರುವ ರೇಣುಜಯರಾಮ್ ರವರು ವಹಿಸಿದರು, ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉಧ್ಘಾಟಿಸಿ “ಕೊಟ್ಟುಗಳಿಸಿ: ಒಟ್ಟಿಗೆ ಬೆಳೆಯೋಣ “(Give to gain :growing together ”) ಎನ್ನುವ ವಿಷಯದ ಬಗ್ಗೆ ಮಾತನಾಡಿದರು. ಹಾಗೆಯೆ ಮಹಿಳೆಯರು ಅಬಲೆಯಲ್ಲ ಸಬಲೆ ಮಹಿಳೆಯರ ಸಾಧನೆಯ ಬಗ್ಗೆ ಮತ್ತು ಅವರಲ್ಲಿರುವ ಧ್ಯೆರ್ಯವನ್ನು ಈಗಿನ ವಿದ್ಯಾರ್ಥಿನಿಯರು ತಮ್ಮ ಜೀವನದಲ್ಲಿ ಹೇಗೆ ಆಳವಡಿಸಿಕೊಳ್ಳಬೇಕು, ಹಾಗೂ ಕೊರೋನಾ ಸಮಯದಲ್ಲಿ ಕಟಪಾಡಿಯ ಮಹಿಳೆ ಮನೆಯಲ್ಲಿ ಮಾಸ್ಕ್ ತಯಾರಿಸಿ ತನ್ನ ಕುಟುಂಬದವರನ್ನು ಸಾಕಿದ್ದು , ಹಾಗೆಯೆ ವಿದ್ಯಾರ್ಥಿಗಳು ಮೆನೆಯಲ್ಲಿ ಹೇಗೆ ಸ್ವಉದ್ಯಮ ಮಾಡಬೇಕು ಎನ್ನುವ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು ಹಾಗೂ ಮಹಿಳಾದಿನಾಚರಣೆ ಅಂಗವಾಗಿ ಕ್ರೀಡಾ ವಿಭಾಗದವತಿಯಿಂದ ಮಹಿಳಾ ಕ್ರಿಕೆಟ್ ಪಂದ್ಯಾಟ ನಡೆಯಿತು.
ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಗೋಪಾಲ ಕ್ರಷ್ಣ ಗಾಂವಕರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕರಾದ ಮಹಿಳಾವೇದಿಕಯ ಸಂಘಟಕರಾದ ಯಶೋದಾರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ವಿದ್ಯಾರ್ಥಿಕ್ಷೇಮಪಾಲನಾ ಅಧಿಕಾರಿಯಾದ ಪ್ರೋ.ದೀಪಿಕಾ ಸುವರ್ಣ, ಐಕ್ಯೂಎಸಿ ಸಂಚಾಲಕರಾದ ಡಾ. ರೋಶನಿಯಶ್ವಂತ್, ದೈಹಿಕ ಶಿಕ್ಷಣ ನಿರ್ದೇಶಕರಾದ ಸವಿತಾ ಉಪಸ್ಥಿತರಿದ್ದರು. ವಿದ್ಯಾರ್ಥಿಯಾದ ಜಾನ್ವಿ ಪ್ರಾರ್ಥಿಸಿದರು, ರಿಶಿಕಾ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ವೇದಿಕೆಯ ಕಾರ್ಯದರ್ಶಿಯಾದ ಅನುಷಾ ಅತಿಥಿಯನ್ನುಪರಿಚಯಿಸಿದರು. ಸಹ ಕಾರ್ಯದರ್ಶಿಯಾದ ಪ್ರೀತಿ ವಂದಿಸಿದರು. ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು, ಉಪನ್ಯಾಸಕರು, ಶಿಕ್ಷಕೇತರ ಸಿಬ್ಬಂದಿಗಳು, ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

