ಕೈಗಾರಿಕಾ ಪ್ರದೇಶ ಹೆದ್ದಾರಿ ಸಂಪರ್ಕ ರಸ್ತೆ- ಎನ್‌ಎಂಪಿಎ ನಿಂದ ಕಾಮಗಾರಿ; 11 ಕೋಟಿ ವೆಚ್ಚ

Upayuktha
0




ಸುರತ್ಕಲ್: ಬೈಕಂಪಾಡಿ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕಿಸುವ ಹೆದ್ದಾರಿ ಬದಿಯ ರಸ್ತೆಯ ಕಾಂಕ್ರೀಟ್ ಕಾಮಗಾರಿ ಹಾಗೂ ಟ್ರಕ್ ಯಾರ್ಡ್ ಗುರುವಾರದಿಂದ ಆರಂಭವಾಗಲಿದ್ದು, 11 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣವಾಗಲಿದೆ. ಎನ್‌ಎಂಪಿಎ ಇದಕ್ಕೆ ಅನುದಾನ ನೀಡಲಿದೆ.


ಶಾಸಕ ಡಾ. ಭರತ್ ಶೆಟ್ಟಿ ಅವರು ಎನ್ ಎಂ ಪಿ ಎ ಗೆ ಮನವಿ ಮಾಡಿದ ಮೇರೆಗೆ ಬಂದರು ಅನುದಾನ ಬಿಡುಗಡೆ ಮಾಡಿದೆ. ಈ ಕುರಿತು ಸೋಮವಾರ ಶಾಸಕರ ನೇತೃತ್ವದಲ್ಲಿ ಸಭೆ ನಡೆಯಿತು.


ಕೆ ಐ ಎ ಡಿ ಬಿ ಇಲಾಖೆ, ಟ್ರಾಫಿಕ್ ಪೊಲೀಸ್ ಹಾಗೂ ಬಂದರು ಪ್ರಾಧಿಕಾರದ ಅಧಿಕಾರಿಗಳ ಮಹತ್ವದ ಸಭೆ ನಡೆದು ಸಭೆಯಲ್ಲಿ ಕಾಮಗಾರಿ ಅವಧಿ, ಸಂಚಾರ ನಿಯಂತ್ರಣ ಹಾಗೂ ಸಾರ್ವಜನಿಕರಿಗೆ ಸನಸ್ಯೆ ಆಗದಂತೆ ಕಾಮಗಾರಿ ಚರ್ಚೆ ನಡೆಸಲಾಯಿತು.


ಕಾಮಗಾರಿ ಸುಗಮವಾಗಿ ನಡೆಯುವ ಉದ್ದೇಶದಿಂದ ಸಂಬಂಧಿತ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲು ಪೊಲೀಸರು ಆದೇಶ ಹೊರಡಿಸಲಿದ್ದು ಗುರುವಾರದಿಂದ ಪರ್ಯಾಯ ಸಂಚಾರ ಅವಕಾಶ ಮಾಡಿ ಕೊಡಲಾಗುವುದು.


ವಿಶೇಷವಾಗಿ ಭಾರೀ ವಾಹನಗಳ ಓಡಾಟ ಹೆಚ್ಚಿರುವ ಈ ಪ್ರದೇಶದಲ್ಲಿ ಸಂಚಾರ ನಿಯಂತ್ರಣ ಕ್ರಮಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ಬೈಕಂಪಾಡಿ ಕೈಗಾರಿಕಾ ಪ್ರದೇಶವು ಪ್ರಮುಖ ಉದ್ಯಮ ವಲಯವಾಗಿರುವುದರಿಂದ, ದೀರ್ಘಕಾಲದಿಂದ ರಸ್ತೆ ದುರಸ್ಥಿ ಹಾಗೂ ಕಾಂಕ್ರೀಟ್ ನಿರ್ಮಾಣದ ಬೇಡಿಕೆ ಕೇಳಿಬರುತ್ತಿತ್ತು. ಈಗ ಕಾಮಗಾರಿ ಆರಂಭವಾಗುತ್ತಿರುವುದರಿಂದ ಸ್ಥಳೀಯ ಉದ್ಯಮಿಗಳು, ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಇನ್ನು ಎರಡು ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಿತ ಅಧಿಕಾರಿಗಳಿಗೆ ಶಾಸಕ ಡಾ. ಭರತ್ ಶೆಟ್ಟಿ ಸೂಚನೆ ನೀಡಿದ್ದಾರೆ.


ಸಭೆಯಲ್ಲಿ ಬಂದರು ಪ್ರಾಧಿಕಾರ, ಟ್ರಾಫಿಕ್, ಕೆ ಐ ಎ ಡಿ ಬಿ ಅಧಿಕಾರಿಗಳು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top