ಬ್ರಾಹ್ಮಣ ಸಮುದಾಯಕ್ಕೆ ಸರ್ಕಾರದ ಸವಲತ್ತುಗಳು: ಕೂಟ ಮಹಾಜಗತ್ತು ಮಂಗಳೂರು ವತಿಯಿಂದ ಮಾಹಿತಿ ಕಾರ್ಯಕ್ರಮ

Upayuktha
0


ಮಂಗಳೂರು: ಕರ್ನಾಟಕ ಸರಕಾರ ಬ್ರಾಹ್ಮಣ ಅಭಿವೃದ್ಧಿ ನಿಗಮ ಇವರು ಕೂಟ ಮಹಾಜಗತ್ತು ಮಂಗಳೂರು ಇವರ ಸಹಯೋಗದಲ್ಲಿ ಮಂಗಳೂರಿನ ಶ್ರೀ ಸುಬ್ರಹ್ಮಣ್ಯ ಸಭಾಭವನದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸರ್ಕಾರದ ಸವಲತ್ತುಗಳು ಎಂಬ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಕರ್ನಾಟಕ ಸರ್ಕಾರ ಇದರ ನಿರ್ದೇಶಕ ಪಿಎಂ ಮಾಲತೇಶ್ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಶಾಸಕರು ಹಾಗೂ ವಿಧಾನಸಭಾಧ್ಯಕ್ಷ ಯು ಟಿ ಖಾದರ್, ಮಂಗಳೂರು ಮಹಾನಗರ ಪಾಲಿಕೆ ಉಪ ಮಹಾಪೌರರಾದ ನಮಿತಾ ಡಿ ರಾವ್, ಸುಬ್ರಹ್ಮಣ್ಯ ಸಭಾಭವನದ ಅಧ್ಯಕ್ಷರಾದ ಕೃಷ್ಣ, ಬೆಳ್ತಂಗಡಿ ತಾಲೂಕು ಬ್ರಾಹ್ಮಣ ಮಹಾಸಭಾ ಮುಖಂಡರಾದ ಜಿಕೆ ಶರ್ಮ ಮೊದಲಾದವರು ಭಾಗವಹಿಸಿದ್ದರು.


ಯು ಟಿ ಖಾದರ್ ಮಾತನಾಡಿ, ಬ್ರಾಹ್ಮಣ ಅಭಿವೃದ್ಧಿ ನಿಗಮವು 2018ನೇ ಇಸವಿಯಿಂದ ಪ್ರಾರಂಭವಾಗಿದ್ದು ಈವರೆಗೂ ನಮ್ಮ ಮಂಗಳೂರಿನಲ್ಲಿ ಈ ತರಹ ಮಾಹಿತಿ ಕಾರ್ಯಕ್ರಮ ಯಾವುದು ಸಹ ನಡೆದಿರಲಿಲ್ಲ. ಆದರೆ ವಿಶೇಷವಾಗಿ ಆಸಕ್ತಿಯಿಂದ ನಮ್ಮ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿ ಬ್ರಾಹ್ಮಣ ಜನತೆಗೆ ವಿಶೇಷವಾದಂತಹ ಕಾರ್ಯಕ್ರಮ ಸಂಯೋಜಿಸಿದ ಕೂಟ ಮಹಾಜಗತ್ತು ಸಂಸ್ಥೆಯ ಅಧ್ಯಕರಾದ ಶ್ರೀಧರ ಹೊಳ್ಳ ಉತ್ತಮ ಮಾಹಿತಿಯನ್ನು ನೀಡಿದ ಬ್ರಾಹ್ಮಣ ಅಭಿವೃದ್ಧಿ ನಿಗಮದ ನಿರ್ದೇಶಕ ಪಿಎಂ ಮಾಲತೇಶ್ ಅವರಿಗೆ ಅಭಿನಂದಿಸುತ್ತೇನೆ ಹಾಗೆಯೇ ಅವರ ಸಾಮಾಜಿಕ ಕಳಕಳಿಯಿಂದ ಮಾಡುತ್ತಿರುವ ಎಲ್ಲಾ ಕಾರ್ಯಗಳಿಗೂ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದರು.


ಮಾಲತೇಶ್ ರವರು ಸರ್ಕಾರದಿಂದ ಬ್ರಾಹ್ಮಣ ಜನತೆಗೆ ಇರುವ ಸಂಪೂರ್ಣ ಮಾಹಿತಿಗಳನ್ನು ಜನರಿಗೆ ಅರ್ಥವಾಗುವ ರೀತಿಯಲ್ಲಿ ಸಮರ್ಥವಾಗಿಯೇ ತಿಳಿಸಿಕೊಟ್ಟರು. ಸಂಘಟಕ ಕೂಟ ಮಹಾಜಗತ್ತಿನ ಅಧ್ಯಕ್ಷ ಶ್ರೀಧರ ಹೊಳ್ಳ ರವರು ಸಭೆಯ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು ಕಾರ್ಯಕ್ರಮ ನಿಯೋಜನೆ ಮಾಡಿ ಬ್ರಾಹ್ಮಣ ಸಮುದಾಯದ ಪ್ರೀತಿ ಪಾತ್ರರಾದರು, ನಮಿತಾ ಡಿ ರಾವ್ ಮಾತನಾಡಿ ಸರ್ಕಾರವು ಬ್ರಾಹ್ಮಣರ ಪರ ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದು ಇದನ್ನು ಎಲ್ಲರೂ ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಮನವಿ ಮಾಡಿದರು.


ಇಲ್ಲಿ ಸ್ಥಳೀಯ ಬ್ರಾಹ್ಮಣ ಸಮುದಾಯದವರಿಗೆ ಅರ್ಜಿ ಹಾಕುವಲ್ಲಿ ಹಾಗೂ ಮಾಹಿತಿಗಳು ನಿಗಮದ ನಿರ್ದೇಶಕರಾದ ಮಾಲತೇಶ್ ಮತ್ತು ಶ್ರೀಧರ ಹೊಳ್ಳ ಅವರನ್ನು ಸಂಪರ್ಕಿಸುವಂತೆ ಸಭೆಯಲ್ಲಿ ವಿನಂತಿಸಿದರು ಕೊನೆಯಲ್ಲಿ ಅರ್ಹ ಫಲಾನುಭವಿಗಳಿಗೆ ಕಾರ್ಮಿಕ ಕಾರ್ಡ್ ವಿತರಿಸಲಾಯಿತು. ಫಲಾನುಭವಿಗಳು ಉತ್ತಮ ಅನಿಸಿಕೆ ವ್ಯಕ್ತಪಡಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top