ಆಟಿಸಂ: ಸೇವಾಭಾರತಿ (ರಿ) ಮಂಗಳೂರು ವತಿಯಿಂದ ಕಾರ್ಯಾಗಾರ

Upayuktha
0


ಮಂಗಳೂರು: ಸೇವಾ ಭಾರತಿ  ಸಂಸ್ಥೆಯ ಆಶ್ರಯದಲ್ಲಿ ಸೋಮವಾರ (ಏ. 6) ಆಟಿಸಂ ದಿನಾಚರಣೆಯ (ಸ್ವಲೀನತೆ) ಅಂಗವಾಗಿ, ವಿಶೇಷ ಮಕ್ಕಳ ಶಿಕ್ಷಕರಿಗಾಗಿ, ಕಾರ್ಯಾಗಾರವನ್ನು ವಿ.ಟಿ. ರಸ್ತೆಯ ಚೇತನಾ ಬಾಲವಿಕಾಸ ಕೇಂದ್ರದಲ್ಲಿ ನಡೆಸಲಾಯಿತು. “ಆಟಿಸಂ ಅನ್ ಕರ‍್ಡ್: ಕಾರಣ, ಲಕ್ಷಣಗಳು ಮತ್ತು ಪರಿಹಾರ” ಎಂಬ ವಿಷಯದ ಕುರಿತು ನಡೆದ ಈ ಕಾರ್ಯಾಗಾರವನ್ನು ಸಂಪನ್ಮೂಲ ವ್ಯಕ್ತಿಯೂ ಆದ ಯೆನೆಪೋಯ ಮೆಡಿಕಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ  ಡಾ. ರಾಜೇಶ್.ಎಂ ಇವರು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.


ಅವರು ಆಟಿಸಂ ಬಗ್ಗೆ ವಿವರ ನೀಡಿ, ಆಟಿಸಂ ಒಂದು ರೋಗವಲ್ಲ ಅದು ಒಂದು ಬೆಳವಣಿಗೆಯ ನ್ಯೂನತೆ ಹಾಗೂ ಈಗ ಅದಕ್ಕೆ ಪರಿಣಾಮಕಾರಿಯಾದ ಚಿಕಿತ್ಸೆಗಳಿವೆ ಎಂದರು. ಪ್ರತಿಯೊಬ್ಬ ಆಟಿಸಂ ವ್ಯಕ್ತಿಯಲ್ಲೂ ಬೇರೆ ಬೇರೆ ಲಕ್ಷಣಗಳಿದ್ದು ಅವುಗಳನ್ನು ಅರ್ಥೈಸುವುದು ಮತ್ತು ಅವರ ಕುಟುಂಬಕ್ಕೆ ಧೈರ್ಯ ತುಂಬುವುದು ಆವಶ್ಯಕ ಎಂದರು.


ಸೇವಾಭಾರತಿಯ ಅಂಗಸಂಸ್ಥೆ ನವಚೇತನಾ ಸಂವಹನ ಕೇಂದ್ರದ ಶಿಕ್ಷಕಿಯರು ಪ್ರಾರ್ಥನಾ ಗೀತೆ ಹಾಡಿದರು. ಸೇವಾಭಾರತಿ ಸಂಸ್ಥೆಯ ಗೌರವ ಕಾರ್ಯದರ್ಶಿ ನಾಗರಾಜ್ ಭಟ್ ಅತಿಥಿಗಳನ್ನು ಅವರ ಕಿರು ಪರಿಚಯ ನೀಡುವುದರೊಂದಿಗೆ ಸ್ವಾಗತಿಸಿದರು. ಯೆನೆಪೋಯ ಮೆಡಿಕಲ್ ಕಾಲೇಜು ಇದರ ಮನಃಶಾಸ್ತ್ರಜ್ಞ ವಿಭಾಗದ ಸಲಹೆಗಾರರೂ ಹಾಗೂ ಪ್ರಾಧ್ಯಾಪಕರಾದ ಕುಮಾರಿ ಅಂಜನಾ ಜೋಯ್ ಮತ್ತು ಸಂಯೋಜಕರಾದ ಶ್ರೀಮತಿ ಶ್ವೇತಾ ಅಶೋಕ್ ಶೆಟ್ಟ, ನವಚೇತನಾ ಸಂವಹನ ಕೇಂದ್ರದ ಮುಖ್ಯಸ್ಥೆ ಶ್ರೀಮತಿ ರವಿಕಲಾ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಫಿಸಿಯೋಥೆರಪಿಸ್ಟ್ ಕುಮಾರಿ ವರ್ಷಾ ಕಾರ್ಯಕ್ರಮ ನಿರೂಪಿಸಿದರು ಮತ್ತು ರಂಜಿತಾ ರಾಕೇಶ್ ಇವರು ವಂದನಾರ್ಪಣೆಗೈದರು. 


ಬಳಿಕ ಡಾ. ರಾಜೇಶ್.ಎಂ ಅವರ ನೇತೃತ್ವದಲ್ಲಿ ಕಾರ್ಯಾಗಾರ ನಡೆಯಿತು. ಅವರೊಂದಿಗೆ ಶ್ರೀಮತಿ ಅಂಜನಾ ಜೋಯ್ ಮತ್ತು ಶ್ರೀಮತಿ ಶ್ವೇತಾ ಅಶೋಕ್ ಶೆಟ್ಟಿ ಅವರು ಸಹಕರಿಸಿದರು. ಕಾರ್ಯಾಗಾರದಲ್ಲಿ, ಎಲ್ಲಾ ಶಿಕ್ಷಕಿಯರೂ ತುಂಬಾ ಉತ್ಸಾಹದಿಂದ ಭಾಗವಹಿಸಿದರು. ಸೇವಾಭಾರತಿ ಸಿಬ್ಬಂದಿ, ಚೇತನಾ ಶಾಲೆಯ ಶಿಕ್ಷಕ, ಶಿಕ್ಷಕೇತರರು, ಸೇವಾಭಾರತಿ ಸಂಸ್ಥೆಯ ವಿಶ್ವಸ್ಥರು, ಸ್ವಯಂ ಸೇವಕರು ಕಾರ್ಯಕ್ರಮ ಯಶಸ್ವಿಗೊಳ್ಳುವಲ್ಲಿ ಸಹಕರಿಸಿದರು. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ 13 ವಿಶೇಷ ಶಾಲೆಗಳ 52 ಮಂದಿ ವಿಶೇಷ ತರಬೇತಿ ಪಡೆದ ಶಿಕ್ಷಕಿಯರು ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡರು. ಕೊನೆಯಲ್ಲಿ ಅವರೆಲ್ಲರಿಗೂ ಪ್ರಮಾಣಪತ್ರವನ್ನು ನೀಡಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top