ಎಸ್.ಡಿ.ಎಂ ಕಾಲೇಜು ಹಿರಿಯ ವಿದ್ಯಾರ್ಥಿನಿ ಡಾ. ಚೇತನಾಗೆ ಜಾಗತಿಕ ಗೌರವ

Upayuktha
0

ಹ್ಯಾಲೆಟ್ ಪ್ರೈಜ್ ಮೆಡಲ್ ಪ್ರಶಸ್ತಿ ಪ್ರದಾನ





ಉಜಿರೆ: ಎಸ್.ಡಿ.ಎಂ. ಕಾಲೇಜಿನ ಹಿರಿಯ ವಿದ್ಯಾರ್ಥಿನಿ, ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರೊ. ಶಿವರಾವ್- ಜಾಹ್ನವಿ ದಂಪತಿಯ ಪುತ್ರಿ ಡಾ. ಚೇತನಾ ಸಿ.ಎಸ್. ಅವರು ಎಂ.ಆರ್.ಸಿ.ಎಸ್. (ಇಎನ್‌ಟಿ) ಪರೀಕ್ಷೆಯಲ್ಲಿ ಶೇ.92 ಅಂಕ ಗಳಿಸಿ ಜಾಗತಿಕ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಇಂಗ್ಲೆಂಡಿನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ವತಿಯಿಂದ ಪ್ರದಾನವಾಗುವ ‘ಹ್ಯಾಲೆಟ್ ಪ್ರೈಜ್ ಮೆಡಲ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ.


ಸರ್ಜನ್‌ಗಳಿಗೆ ಜಾಗತಿಕ ಮಟ್ಟದಲ್ಲಿ ನೀಡಲಾಗುವ ಅತ್ಯುನ್ನತ ಗೌರವಗಳಲ್ಲಿ ಒಂದಾದ ಈ ಪ್ರಶಸ್ತಿಯನ್ನು ಎಂ.ಆ‌ರ್.ಸಿ.ಎಸ್ (Member of the Royal College of Surgeons) ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ ಅಗ್ರ ಪ್ರತಿಭಾವಂತರಿಗೆ ಮಾತ್ರವೇ ನೀಡಲಾಗುತ್ತದೆ. ಭಾರತದಲ್ಲಿ ಈ ಗೌರವಕ್ಕೆ ಪಾತ್ರರಾದ ವೈದ್ಯರ ಸಂಖ್ಯೆ ಅತ್ಯಲ್ಪವಾಗಿದೆ.


ಡಾ. ಚೇತನಾ ಶೇ.92 ಅಂಕ ಗಳಿಸಿದ್ದು, ಮಾ.26ರಂದು ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಕಾಸರಗೋಡು ಜಿಲ್ಲೆಯ ಮೇಲ್ಪರಂಬ ನಿವಾಸಿಯಾದ ಡಾ. ಚೇತನಾ, ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ, ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಪ್ರಸ್ತುತ ಮಂಗಳೂರಿನ ಎ.ಜೆ. ಮೆಡಿಕಲ್ ಕಾಲೇಜಿನಲ್ಲಿ ಇ.ಎನ್.ಟಿ. ತಜ್ಞೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.


ಯೆನೆಪೋಯ ಮೆಡಿಕಲ್ ಕಾಲೇಜಿನ ಸಹ ಪ್ರಾಧ್ಯಾಪಕ ಹಾಗೂ ಮನೋವೈದ್ಯ ಡಾ. ಶಾಶ್ವತ್ ಸತ್ಯನಾಥ್ ಅವರ ಪತ್ನಿಯಾಗಿರುವ ಇವರು, ಕಾಸರಗೋಡಿನ ಕಳನಾಡು ನರ್ಸಿಂಗ್ ಹೋಂನ ಡಾ. ಎಂ. ಸತ್ಯನಾಥ್ ಮತ್ತು ಡಾ. ಗೀತಾ ಸತ್ಯನಾಥ್ ಅವರ ಸೊಸೆಯಾಗಿದ್ದು, ಇವರಿಗೆ ಅನುಷ್ಠಾ ಎಂಬ ಪುತ್ರಿ ಇದ್ದಾಳೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top