ವೇದ ಪಾಠಶಾಲೆ ವಿದ್ಯಾರ್ಥಿಗಳಿಗೆ ಉಚಿತ ದಂತ ಆರೈಕೆ ತಪಾಸಣಾ ಶಿಬಿರ

Upayuktha
0



ಮಂಗಳೂರು: ನಗರದ ನಂತೂರಿಲ್ಲಿರುವ ಶ್ರೀ ಭಾರತಿ ಕಾಲೇಜಿನಲ್ಲಿ ಭಾನುವಾರ (ಏಪ್ರಿಲ್ 26) ವೇದ ಪಾಠಶಾಲೆಯ ಮಕ್ಕಳಿಗಾಗಿ ಉಚಿತ ದಂತ ಆರೋಗ್ಯ ತಪಾಸಣೆ ಮತ್ತು ಪರಿಶೀಲನಾ ಶಿಬಿರವನ್ನು ಆಯೋಜಿಸಲಾಯಿತು.


ಈ ಶಿಬಿರದಲ್ಲಿ ಡಾ. ರಾಜೇಂದ್ರ ಪ್ರಸಾದ್, ಡಾ. ಮುರಳೀ ಮೋಹನ್ ಚೂಂತಾರು, ಡಾ. ಗೌರೀಶ್ ಹಾಗೂ ಡಾ. ಶಿಲ್ಪಾ ಉಪಸ್ಥಿತರಿದ್ದು, ಒಟ್ಟು 56 ಮಕ್ಕಳಿಗೆ ದಂತ ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಮಕ್ಕಳಿಗೆ ದಂತ ಆರೈಕೆಯ ಮಹತ್ವ, ಸರಿಯಾದ ಬ್ರಷಿಂಗ್ ವಿಧಾನಗಳು ಮತ್ತು ಆರೋಗ್ಯಕರ ಅಭ್ಯಾಸಗಳ ಕುರಿತು ಉಪಯುಕ್ತ ಸಲಹೆಗಳನ್ನು ನೀಡಲಾಯಿತು.


ಶಿಬಿರವು ವಿದ್ಯಾರ್ಥಿಗಳಲ್ಲಿ ದಂತ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪರಿಣಾಮಕಾರಿಯಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top