ಬಳ್ಳಾರಿ:
ಶ್ರೀ ರಾಮಾಂಜನೇಯ ತೊಗಲು ಗೊಂಬೆ ಮೇಳ ಟ್ರಸ್ಟ್ (ರಿ)
ಬಳ್ಳಾರಿ ಆಯೋಜಿಸಿದ್ದ ನಾಡೋಜ ಶ್ರೀ ಬೆಳಗಲ್ಲು ವೀರಣ್ಣ
ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭ ಇತ್ತೀಚೆಗೆ ನಡೆಯಿತು. ಸಮಾರಂಭದಲ್ಲಿ 12 ಜಾನಪದ ಕಲಾ ತಂಡಗಳೊಂದಿಗೆ ಗವಿಯಪ್ಪ
ವೃತ್ತದ ( ಮೋತಿ ) ಬಸವೇಶ್ವರ ಪುತ್ತಳಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ, ಮೆರವಣಿಗೆಯೊಂದಿಗೆ ಚಾಲನೆ ನೀಡಲಾಯಿತು.
ಕರ್ನಾಟಕ
ಜಾನಪದ ಅಕಾಡೆಮಿ ಅಧ್ಯಕ್ಷ ಡಾ.ಗೊಲ್ಲಹಳ್ಳಿ ಶಿವಪ್ರಸಾದ್
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಾಧಕರು ಎಂದಿಗೂ ಮರೆಯಾಗುವುದಿಲ್ಲ, ಅವರು ಭೌತಿಕವಾಗಿ ನಮ್ಮೊಂದಿಗೆ
ಇಲ್ಲದಿದ್ದರೂ ಸದಾ ಜನಮಾನಸದ ಮನಸ್ಸಿನಲ್ಲಿ
ಜೀವಂತವಾಗಿದ್ದಾರೆ ಎಂಬುದಕ್ಕೆ ತೊಗಲುಗೊಂಬೆ ಆಟದ ಬ್ರಹ್ಮ, ದಂತಕಥೆ,
ನಾಡೋಜ ಶ್ರೀ ಬೆಳಗಲ್ಲು ವೀರಣ್ಣನವರ
ಬದುಕೇ ಸಾಕ್ಷಿ ಎಂದರು.
ನಾಡೋಜ
ಶ್ರೀ ಬೆಳಗಲ್ಲು ವೀರಣ್ಣನವರು ತಮ್ಮ ಜೀವನ ಕಾಲದಲ್ಲಿಯೇ
ಆದರ್ಶಗಳನ್ನು ನಿರ್ಮಿಸಿ, ಇತರರಿಗೆ ದಾರಿದೀಪವಾಗಿದ್ದಾರೆ. ತಮ್ಮ ಇಡೀ ಬದುಕನ್ನು
ರಂಗಭೂಮಿ ಹಾಗೂ ತೊಗಲಗೊಂಬೆ ಕಲಾ
ಪ್ರಕಾರಗಳ ಬೆಳವಣಿಗೆಗೆ ಮೀಸಲಿಟ್ಟು, ಅತ್ಯಂತ ಕಷ್ಟ ಕಾಲದಲ್ಲೂ ತೊಗಲುಗೊಂಬೆ
ಕಲೆಯಿಂದ ದೂರ ಉಳಿಯದೆ, ನಶಿಸಿ
ಹೋಗುತ್ತಿದ್ದ ಅಪರೂಪದ ಕಲಾ ಪ್ರಕಾರದ ಉಳಿವಿಗೆ
ಅಪರಿಮಿತವಾಗಿ ಶ್ರಮಿಸಿ, ಈ ಮೂಲಕ ಹಲವಾರು
ಕಲಾತಂಡಗಳು ಇಂದಿಗೂ ತಮ್ಮ ಬದುಕನ್ನು ಕಟ್ಟಿಕೊಳ್ಳಲು
ಕಾರಣಕರ್ತರಾಗಿದ್ದಾರೆ ಎಂದು ನುಡಿದರು.
ಪ್ರಶಸ್ತಿಯನ್ನು
ಸ್ವೀಕರಿಸಿ ಮಾತನಾಡಿದ ಜಾನಪದ ಗಾಯಕ ಡಾ.ಬಾನಂದೂರು
ಕೆಂಪಯ್ಯನವರು ಶ್ರೀ ಬೆಳಗಲ್ಲು ವೀರಣ್ಣನವರೊಂದಿಗಿನ
ತಮ್ಮ ಒಡನಾಟ, ಬಾಂಧವ್ಯವನ್ನು ಮೇಲುಕು ಹಾಕುತ್ತಾ ಭಾವುಕರಾದರು.
ಜಿಲ್ಲಾಧಿಕಾರಿ
ಶ್ರೀ ಕೆ.ನಾಗೇಂದ್ರ ಪ್ರಸಾದ್
ನಾಡೋಜ ಶ್ರೀ ಬೆಳಗಲ್ಲು ವೀರಣ್ಣನವರ
ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭ ನೋಡಿ ಕಣ್ತುಂಬಿ ಬಂದಿದೆ. ಇಂದಿನ ಈ ಸಮಾರಂಭಕ್ಕೆ ಇಷ್ಟೊಂದು
ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿರುವುದು ಮತ್ತು ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಿನಿಂದ ಕೂಡಿರುವುದು ನಿಜವಾಗಲೂ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ,
ಕಮರ್ಚೇಡು ಮಠದ ಶ್ರೀ ಕಲ್ಯಾಣ ಸ್ವಾಮಿ,
ರುದ್ರ ಟ್ರಸ್ಟಿನ ಅಧ್ಯಕ್ಷರು ಶ್ರೀ ರವಿಶಂಕರ್ ಗುರೂಜಿ
ಹಿರಿಯ ರಂಗಕಲಾವಿದ ಗಾದಿಗನೂರು ಹಾಲಪ್ಪ, ಹಿರಿಯರಂಗಕರ್ಮಿ ಮೈಸೂರು ರಾಮಚಂದ್ರಪ್ಪ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಸಿಎನ್ ಮಂಜೇಶ್ ಚನ್ನಾಪುರ ಹಾಗೂ ಕೆಂಕೆರೆ ಮಲ್ಲಿಕಾರ್ಜುನ,
ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಂಶುಪಾಲರು
ಸತೀಶ್ ಹಿರೇಮಠ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ನಾಗರಾಜ್, ಕಲಾವಿದರ ಸಂಘದ ಅಧ್ಯಕ್ಷ ಎಲ್ಲನಗೌಡ
ಶಂಕರ ಬಂಡೆ, ಪ್ರಭುದೇವ ಕಪ್ಪಗಲ್ಲು, ಗಂಗಾಧರ ಪತ್ತಾರ್ ತಿಪ್ಪೇಸ್ವಾಮಿ ಮುದ್ದುಟನೂರು, ಸಿ.ಮಂಜುನಾಥ, ಪುರುಷೋತ್ತಮ
ಹಂದ್ಯಾಳ, ವಿರೂಪಾಕ್ಷಯ್ಯ, ವಿನಯ್ ಕುಮಾರ್ ,ಶ್ರೀಮತಿ ಬಿ ವಿ ಲಕ್ಷ್ಮಿ
ಶ್ರೀಮತಿ ಬೆಳಗಲ್ಲು ರೇಖಾ, ಗಗನ್, ಗೌತಮ್, ಬೆಳಗಲ್ಲು ದಿನಕರ್ ಬೆಳಗಲ್ಲು ಶಾರದಾ ಮತ್ತಿತರರು ಉಪಸ್ಥಿತರಿದ್ದರು.
ಟ್ರಸ್ಟಿನ
ಮುಖ್ಯಸ್ಥರು ಬೆಳಗಲ್ಲು ಹನುಮಂತ ಪ್ರಸ್ತಾಪಿಕ ಮಾತನಾಡಿದರು. ಗಗನ್ ಸ್ವಾಗತಿಸಿ, ಬಸವಜ್ಯೋತಿ ಕೆ ನಿರ್ವಹಿಸಿದರು.
ಆಂಧ್ರಪ್ರದೇಶದ ನಿಂಬಲಕುಂಟದ ವನಾರ್ಚ ರಾಮಕೃಷ್ಣ ತೊಗಲುಗೊಂಬೆ ಆಟ ಕಲಾತಂಡದಿಂದ ಸೀತಾಪಹರಣ
ತೊಗಲುಗೊಂಬೆ ಪ್ರದರ್ಶನ ಜರುಗಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


