ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಮುಂಭಾಗ ಮನೆಯಲ್ಲಿ ಬೆಂಕಿ ಅವಘಡ

Upayuktha
0


ಶಾಲೆಯ ಸಿಬ್ಬಂದಿಗಳಿಂದ ಅಗ್ನಿ ಶಮನ ಕಾರ್ಯ


ಮಂಗಳೂರು: ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಮುಂಭಾಗದಲ್ಲಿ ಹೇಮಂತ್ ಚಮಗಾರರಿಗೆ ಸೇರಿದ ಮನೆಯಲ್ಲಿ ಶುಕ್ರವಾರ ಬೆಂಕಿ ಅವಘಡ ಸಂಭವಿಸಿದೆ. ಇದನ್ನು ಶಕ್ತಿ ವಿದ್ಯಾಸಂಸ್ಥೆಯ ಸಿಬ್ಬಂದಿಗಳು ನೋಡಿ ತಕ್ಷಣ ಬೆಂಕಿ ನಂದಿಸಲು ಶಕ್ತಿ ವಿದ್ಯಾ ಸಂಸ್ಥೆಯ ಫೈಯರ್ ಜೆಟ್ಟನ್ನು ಬಳಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ಕಾರ್ಯ ಪ್ರವೃತ್ತರಾದರು.


ಮನೆಯಲ್ಲಿ ಯಾರೂ ಇಲ್ಲದೆ ಇದ್ದಂತಹ ಸಂದರ್ಭದಲ್ಲಿ ಈ ಅವಘಡವು ಸಂಭವಿಸಿತ್ತು. ಶಾಲೆಯ ಸುಮಾರು 50ಕ್ಕೂ ಹೆಚ್ಚಿನ ಸಿಬ್ಬಂಧಿ ವರ್ಗದವರು ಈ ಕಾರ್ಯದಲ್ಲಿ ತೊಡಗಿ ಬೆಂಕಿ ನಂದಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಡಾ ಕೆ.ಸಿ ನಾಯ್ಕ್‌ ರವರು ತಕ್ಷಣ ಕಾರ್ಯಪ್ರವೃತ್ತರಾಗುವಂತೆ ಸಿಬ್ಬಂದಿ ವರ್ಗದವರಿಗೆ ಮಾರ್ಗದರ್ಶನವನ್ನು ಮಾಡಿರುತ್ತಾರೆ. ಈ ಕಾರ್ಯಕ್ಕೆ ಶಕ್ತಿನಗರದ ನಿವಾಸಿಗಳು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top