ರಾಜ್ ಸ್ಮಾರಕ ಭೂಮಿ ಬಗ್ಗೆ ನಟ ಚೇತನ್ ವಿವಾದಾಸ್ಪದ ಹೇಳಿಕೆ ವಿರುದ್ಧ ದೂರು

Upayuktha
0

ಚೇತನ್ ವಿರುದ್ಧ ಪ್ರಣವಾನಂದ ಶ್ರೀಗಳು ಮತ್ತು ರಾಜಕುಮಾರ ಅಭಿಮಾನಿ ಬಳಗದ ತೀವ್ರ ಆಕ್ರೋಶ





ಕಲಬುರಗಿ: ವರನಟ ಡಾ. ರಾಜಕುಮಾರ್ ಅವರ ಸ್ಮಾರಕಕ್ಕೆ ಸರಕಾರ ನೀಡಿರುವ ಎರಡುವರೆ ಎಕರೆ ಭೂಮಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ನಟ ಚೇತನ ಹಿಂಸಾ ವಿರುದ್ಧ ಈಡಿಗ ಗುರುಗಳಾದ ಡಾ. ಪ್ರಣವಾನಂದ ಶ್ರೀಗಳು ಮತ್ತು ಕಲಬುರಗಿ ರಾಜ ಕುಮಾರ್ ಅಭಿಮಾನಿಗಳ ಸಂಘ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿ ಕೇಸು ದಾಖಲಿಸುವಂತೆ ಒತ್ತಾಯಿಸಿದೆ.


ಕಲಬುರ್ಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಎಸ್ಪಿ ಅಡ್ಡರು ಶ್ರೀನಿವಾಸಲು ಅವರಿಗೆ ಕಲಬುರಗಿ ಜಿಲ್ಲಾ ಚಿತ್ತಾಪುರ ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪ್ರಣವಾನಂದ ಶ್ರೀಗಳು ಮತ್ತು ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ರಾಘವೇಂದ್ರ ಕುಲಕರ್ಣಿ ನೇತೃತ್ವದ ನಿಯೋಗ ತೆರಳಿ ರಾಜಕುಮಾರ ಅವರ ಹುಟ್ಟು ಹಬ್ಬದ ದಿನ ನಟ ಚೇತನ್ ತಮ್ಮ ಎಕ್ಸ್ ಖಾತೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡ ನಾಡಿನ ರಾಜ್ಯ ಅಭಿಮಾನಿಗಳ ಮನಸ್ಸಿಗೆ ನೋವುಂಟು ಮಾಡಿದ್ದಾರೆ ಅದಕ್ಕಾಗಿ ಶೀಘ್ರದಲ್ಲೇ ಅವರು ರಾಜಕುಮಾರ್ ಸಮಾಧಿ ಮುಂದೆ ನಿಂತು ಕ್ಷಮೆ ಕೇಳಬೇಕು ಇಲ್ಲವಾದಲ್ಲಿ ಅವರ ವಿರುದ್ಧ ಕೇಸು ದಾಖಲಿಸಿ  ರಾಜ್ಯದಿಂದ ಗಡಿಪಾರು ಮಾಡಬೇಕು. ಚೇತನ ಅವರು ಕ್ಷಮೆ ಕೇಳದಿದ್ದರೆ ರಾಜ್ಯಾದ್ಯಂತ ರಾಜ್ ಅಭಿಮಾನಿಗಳು ಬೀದಿಗಿಳಿದು ಹೋರಾಟ ಮಾಡಲು ಹಿಂಜರಿಯುವುದಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

 

ಡಾ ರಾಜಕುಮಾರ್ ಅವರು ಕನ್ನಡ ರತ್ನ ಮತ್ತು ದೇಶದ ಆಸ್ತಿ ಅಂತರ ವಿರುದ್ಧ ಚೇತನ್ ಪುಕ್ಕಟ್ಟೆ ಪ್ರಚಾರಕ್ಕಾಗಿ ಹೇಳಿಕೆ ನೀಡಿ ಕನ್ನಡಿಗರ ಮನ ನೋಯಿಸಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಈಡಿಗ ಸಮುದಾಯ ಸೇರಿದಂತೆ ಸಮಸ್ತ ಕನ್ನಡಿಗರು ಹೋರಾಟ ಮಾಡೋದು ಖಚಿತ ಎಂದು ಡಾ. ಪ್ರಣವಾನಂದ ಶ್ರೀಗಳು ಹೇಳಿದರು. ಡಾ ರಾಜ್ ವಿರುದ್ಧ ವಿವಾದಾ ತ್ಮಕ ಹೇಳಿಕೆ ನೀಡಿದ ಚೇತನ್ ವಿರುದ್ಧ ಕಲಬುರಗಿಯ ಸಮಸ್ತ ರಾಜ್ಯ ಅಭಿಮಾನಿಗಳು ಬೆಂಗಳೂರಿಗೆ ಧಾವಿಸಿ ಹೋರಾಟ ನಡೆಸಲು ಬೀದಿಗೆ ಇಳಿಯುದಾಗಿ ರಾಜಕುಮಾರ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ರಾಘವೇಂದ್ರ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದರು.


ಎಸ್ ಪಿ ಅವರಿಗೆ ದೂರು ಸಲ್ಲಿಸಲು ತೆರಳಿದ ನಿಯೋಗದಲ್ಲಿ ಡಾಕ್ಟರ್ ರಾಜ ಅಭಿಮಾನಿಗಳ ಸಂಘದ ಗೌರವಾಧ್ಯಕ್ಷರು ಹಾಗೂ ಬ್ರಹ್ಮ ಶ್ರೀ ನಾರಾಯಣ ಗುರು ಶಕ್ತಿ ಪೀಠದ ಮಾಧ್ಯಮ ಸಂಚಾಲಕರಾದ ಡಾಕ್ಟರ್ ಸದಾನಂದ ಪೆರ್ಲ, ಉದ್ಯಮಿ ಹಾಗೂ ಬಿಲ್ಲವ ಸಂಘದ ಕಲ್ಬುರ್ಗಿ ಜಿಲ್ಲಾ ಘಟಕದ ಮುಖಂಡರಾದ ಪ್ರವೀಣ್ ಜತ್ತನ್, ಈಡಿಗ ಸಮಾಜದ ಮುಂದಾಳು ಶಿವರಾಜ್ ಗುತ್ತೇದಾರ್ ಜೇವರ್ಗಿ, ಜುಬೇರ್ ಅನ್ಸಾರಿ ಕಿಶೋರ್ ಘಂಟಿ, ಚಂದಯ್ಯ ಮುಂತಾದವರು ಜೊತೆಗಿದ್ದರು.


ಕಾನೂನು ತಜ್ಞರ ಜೊತೆ ಚರ್ಚಿಸಿ ಮೊಕದ್ದಮೆ


ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅಡ್ಡರು ಶ್ರೀನಿವಾಸಲು ಅವರು ಮನವಿಯನ್ನು ಸ್ವೀಕರಿಸಿ ಕಾನೂನು ತಜ್ಞರ ಜೊತೆ ಕೂಡಲೇ ಚರ್ಚಿಸಿ ಮೊಕದ್ದಮೆ ದಾಖಲಿಸುವ ಕುರಿತು ನಿರ್ಧರಿಸುವುದಾಗಿ ಭರವಸೆ ನೀಡಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top