ಸುರತ್ಕಲ್‌ನ ವಾರದ ಸಂತೆಯಲ್ಲಿ ಸ್ವಚ್ಛತಾ ಅಭಿಯಾನ

Upayuktha
0


ಸುರತ್ಕಲ್‌: ಸುರತ್ಕಲ್ ನಗರದ ವಾರದ ಸಂತೆ ಪ್ರತಿ ಬುಧವಾರ ನಡೆಯುತ್ತಿದ್ದು ಗ್ರಾಹಕ ಸ್ನೇಹಿಯಾದ ಬಹಳ ಹಳೆಯ ಹಾಗೂ ಹಿರಿದಾದ ಪ್ರಸಿದ್ದ ಸಂತೆ. ನಾಡಿನ ವಿವಿಧ ಕಡೆಯಿಂದ ವ್ಯಾಪಾರಿಗಳು ಈ ಸಂತೆಗೆ ಆಗಮಿಸಿ ವ್ಯಾಪಾರ ನಡೆಸುತ್ತಿದ್ದಾರೆ.


ಸುರತ್ಕಲ್ ನಾಗರಿಕ ಸಲಹಾ ಸಮಿತಿ (ರಿ), ಎಂ.ಆರ್.ಪಿ.ಎಲ್ ಸಂಸ್ಥೆ ಹಾಗೂ ಸ್ಥಳೀಯ 50ಕ್ಕೂ ಮಿಕ್ಕಿದ ಸಂಸ್ಥೆಗಳನ್ನು ಜೊತೆಗೆ ಸೇರಿಸಿ ಕೊಂಡು ಮಂಗಳೂರು ಮಹಾನಗರ ಪಾಲಿಕೆಯ ಸಹಬಾಗಿತ್ವದೊಂದಿಗೆ 3 ಸ್ವಚ್ಛ ಸುರತ್ಕಲ್ ಅಭಿಯಾನಗಳನ್ನು ನಡೆಸಿ ಪ್ರಸ್ತುತ ನಾಲ್ಕನೇ ಸ್ವಚ್ಛ ಅಭಿಯಾನ 2026 ಆರಂಭ ಮಾಡಿದೆ.


ಸ್ವಚ್ಚ ಅಭಿಯಾನ 2026 ಅಂಗವಾಗಿ ಸುರತ್ಕಲ್ ಸಂತೆಯನ್ನು ತ್ಯಾಜ್ಯ ಮುಕ್ತ ಸ್ವಚ್ಛ ಮಾದರಿ ಸಂತೆಯನ್ನಾಗಿ ರೂಪುಗೊಳಿಸುವ ಆಶಯವನ್ನು ಹೊಂದಿದೆ.


ವ್ಯಾಪಾರದಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ವ್ಯಾಪಾರಿಗಳೇ ನಿರ್ವಹಣೆ ಮಾಡಬೇಕೆನ್ನುವ ಮಂಗಳೂರು ಮಹಾನಗರ ಪಾಲಿಕೆಯ ಸುರತ್ಕಲ್ ವಲಯ ಆಯುಕ್ತ ಬಾಲಚಂದ್ರರ ಆದೇಶದಂತೆ ಕಾರ್ಯಪ್ರವೃತ್ತರಾಗಿರುವ ಹಿರಿಯ ಅರೋಗ್ಯ ನಿರೀಕ್ಷಕರಾದ ಶ್ರೀ ಸಂಜಯ್ ಹಾಗೂ ಅರೋಗ್ಯ ವಿಭಾಗದ ಸಿಬ್ಬಂದಿ ವರ್ಗದವರು ಸುರತ್ಕಲ್ ನಾಗರಿಕ ಸಲಹಾ ಸಮಿತಿಯ ಸ್ವಚ್ಛತಾ ಸ್ವಯಂ ಸೇವಕರು ಜೊತೆಯಾಗಿ ಸಂತೆ ವ್ಯಾಪಾರಿಗಳಿಗೆ ತಿಳಿಸಿ ಸ್ವಚ್ಛತಾ ಅರಿವು ಮೂಡಿಸುವ ಕಾರ್ಯಕ್ರಮ ರೂಪಿಸಿದ್ದಾರೆ.


ಏಪ್ರಿಲ್ 15 ಬಿಸು ಹಬ್ಬದ ದಿನದಂದು ಆರಂಭಗೊಂಡ ಅಭಿಯಾನ 2 ಹಂತದಲ್ಲಿ ನಡೆಯುತ್ತಿದೆ. ಸಂತೆ ಪ್ರಾರಂಭಗೊಳ್ಳುತ್ತಿರುವಂತೆ ಬೆಳಿಗ್ಗೆ 8.30 ಕ್ಕೆ ಸ್ವಚ್ಛತಾ ಸ್ವಯಂ ಸೇವಕರು ವ್ಯಾಪಾರಿಗಳನ್ನು ವೈಯಕ್ತಿಕವಾಗಿ ಭೇಟಿಯಾಗಿ ನಿಷೇಧಿತ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಬಳಸದಂತೆ ತಿಳಿಸಿ, ತ್ಯಾಜ್ಯ ವಸ್ತು ಗಳನ್ನು ನಗರ ಪಾಲಿಕೆಯ ಸ್ವಚ್ಛತಾ ಗಾಡಿಗಳಲ್ಲಿ ರಾತ್ರಿ ಸಂತೆ ಮುಗಿದ ಕೂಡಲೇ ಹಾಕಲು ತಿಳಿಸುತ್ತಾರೆ. ರಾತ್ರಿ 8.30ಕ್ಕೆ ಮತ್ತೆ ಭೇಟಿ ಕೊಟ್ಟು ನೀಡಿದ ಸೂಚನೆಗಳನ್ನು ಪಾಲಿಸಿರುವ ಬಗ್ಗೆ ಪರಿಶೀಲನೆ ಮಾಡುತ್ತಾರೆ. ನಿಯಮ ಉಲ್ಲಂಘಿಸಿದರೆ ದಂಡವನ್ನು ವಿಧಿಸುವ ಕುರಿತು ಎಚ್ಚರಿಕೆಯನ್ನು ಹಾಗೂ ಸೂಚನೆಯನ್ನು ಸ್ವಚ್ಛತಾ ಮೇಲ್ವಿಚಾರಕರು ಕೊಟ್ಟಿದ್ದು ಅನುಷ್ಠಾನಗೊಳಿಸುತ್ತಿದ್ದಾರೆ.


ಸುರತ್ಕಲ್ ನಾಗರಿಕ ಸಲಹಾ ಸಮಿತಿ ಯ ಅಧ್ಯಕ್ಷ ಡಾ. ಕೆ. ರಾಜಮೋಹನ್ ರಾವ್ ಮಾರ್ಗದರ್ಶನದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಕ್ರಿಯವಾಗಿ ಅಭಿಯಾನದಲ್ಲಿ ಭಾಗವಹಿಸುತ್ತಿದ್ದಾರೆ. 


ಎರಡನೇ ವಾರದ ಸ್ವಚ್ಛತಾ ಅರಿವು ಅಭಿಯಾನ ಏಪ್ರಿಲ್ 22ರಂದು ನಡೆಯಿತು. ನಾಗರಿಕ ಸಲಹಾ ಸಮಿತಿಯ ಕಾರ್ಯದರ್ಶಿ ಸತೀಶ್ ಸದಾನಂದ ಮಾತನಾಡಿ ಸುರತ್ಕಲ್ ನಗರದ ಸ್ವಚ್ಛತಾ ಅಭಿಯಾನ ಎಲ್ಲರ ಸಹಕಾರದಿಂದ ನಡೆಯುತ್ತಿದ್ದು ವ್ಯಾಪಾರಿಗಳು ಸಕಾರತ್ಮವಾಗಿ ಸ್ಪಂದನೆ ನೀಡಬೇಕು ಎಂದರು.


ಹಿರಿಯ ಅರೋಗ್ಯ ನಿರೀಕ್ಷಕರಾದ ಸಂಜಯ್, ಅರೋಗ್ಯ ಮೇಲ್ವಿಚಾರಕರಾದ ಸುಭಾಷ್, ಶ್ರವಣ್ ಮತ್ತು ಸಮುದಾಯ ಸಂಘಟಕರಾದ ಭಾಗ್ಯವತಿ, ಜಾನೆಟ್ ಲೋಬೋ, ನಯನ, ಶಾಲಿನಿ, ಗೀತಾ, ವಿಶಾಲಾಕ್ಷಿ, ದಿವ್ಯ, ಜೀವಿತ ಅವರು ಸ್ವಚ್ಛತಾ ನಿಯಮಗಳನ್ನು ವ್ಯಾಪಾರಿಗಳಿಗೆ ವಿವರಿಸಿದರು.


ಸ್ವಚ್ಛತಾ ಕಾರ್ಯಕರ್ತರಾದ ರಮೇಶ್ ಅಳಪೆ, ಆನಂದ ಭಂಡಾರಿ, ಅನಿಲ್ ಕುಮಾರ್, ಸಾವಿತ್ರಿ ರಮೇಶ್ ಭಟ್, ಶರತ್, ಡಾ. ಗೀತಾ ಶರತ್, ಭರತ್ ಕುಳಾಯಿ, ಓಂ ಪ್ರಕಾಶ್, ಪ್ರೊ. ರಮೇಶ್ ಭಟ್, ಹನೀಫ್, ರಮೇಶ್, ಪೂವಪ್ಪ ನಾಯಕ್, ಭೋಜ ಶೆಟ್ಟಿಗಾರ್, ಪ್ರಕಾಶ್ ಪುತ್ತೂರು, ಸುರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರ ಬಿ. ಕುಂದರ್, ಕಾರ್ಯದರ್ಶಿ ರಾಮ ಮೋಹನ್ ವೈ, ಕೃಷ್ಣಮೂರ್ತಿ ಮತ್ತಿತರರು ಸ್ವಯಂ ಸೇವಕರಾಗಿ ವ್ಯಾಪಾರಿಗಳಿಗೆ ಹಾಗೂ ಗ್ರಾಹಕರಿಗೆ ಸ್ವಚ್ಛತಾ ಅರಿವು ಮೂಡಿಸುತ್ತಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top