ಸಂಸಾರಕ್ಕೆ ಕಾಲಿಡುವ ಮೊದಲು ಮಕ್ಕಳಿಗೆ ಸಂಸ್ಕಾರ ಕೊಡಬೇಕು: ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು

Upayuktha
0

 


ಮುಂಡರಗಿ: ಸಾವಿರ ಸಮಸ್ಯೆಗಳ ನಡುವೆಯೂ ಹೊಂದಾಣಿಕೆಯಿಂದ ಬದುಕುತಿದ್ದ ಜನರು, ಇಂದು ಬಿಡುಗಡೆ ಬಯಸುತಿದ್ದಾರೆ. ಜೀವನ ಕೆಲಸ, ಮಕ್ಕಳ ಶಿಕ್ಷಣ ನೂರಾರು ಒತ್ತಡಗಳ ನಡುವೆ ಕಳೆದು ಹೋಗುತ್ತಿದೆ. ನೀವು ಮಕ್ಕಳಿರುವಾಗಲೆ ಸಂಸ್ಕಾರ ಅಂದರೆ ಪರಸ್ಪರ ಗೌರವ, ಸಹಕಾರ, ಒಬ್ಬರು ಇನ್ನೊಬ್ಬರಿಗೆ ಸಹಾಯ ಮಾಡುವ ಗುಣಗಳನ್ನು ಬೆಳಸಿ ಅವರು ಜೀವನದಲ್ಲಿ ಫೇಲ್ ಆಗಲ್ಲ ಒಟ್ಟಾಗಿ ಬಾಳೋದನ್ನ ಕಲಿರಿ, ಸಂಸಾರದೊಳಗ ಸಮಸ್ಯೆಗಳು ಕಡಿಮೆ ಆಗತಾವ್. ಒಟ್ಟಿಗೆ ಇದ್ದೋರು ಗಟ್ಟಿಯಾಗಿರ್ತಾರ ಸಂಸಾರಕ್ಕ ಮುಖ್ಯವಾಗಿ ಸಂಸ್ಕಾರ ಬೇಕು ಎಂದು ಮಣಕವಾಡದ ಅಭಿನವಶ್ರೀ ಮೃತ್ಯುಂಜಯ ಮಹಾಸ್ವಾಮಿಗಳು ತಿಳಿಸಿದರು

ಅವರು ಹೆಸರೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಗರುಡ ದೇವಾಲಯದ ಲೋಕಾರ್ಪಣೆಯಂಗವಾಗಿ ಏರ್ಪಡಿಸಲಾದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡುತಿದ್ದರು.



ಸಮಾರಂಭದಲ್ಲಿ ಹಾಳಕೇರಿ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು, ಕೊಪ್ಪಳ ಗವಿಮಠದ ಮೈನಳ್ಳಿಯ ಶಾಖಾಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮಿಯವರು ನವ ದಂಪತಿಗಳಿಗೆ ಆಶಿರ್ವಚನ ನೀಡಿದರು.  ದೇವಾಲಯ ನಿರ್ಮಾಣಕ್ಕೆ ಸಹಕರಿಸಿದ ಗಣ್ಯರಿಗೆ ಸನ್ಮಾನ ಕಾರ್ಯ ಜರುಗಿತು. ವೇದಿಕೆಯಲ್ಲಿ ಗರುಡಪ್ಪ ಜಂತ್ಲಿ, ಮಲ್ಲಪ್ಪ ಆರೇರ, ಈರಪ್ಪ ಗುತ್ತಲ, ಕೊಟ್ರಪ್ಪ ಮೇಸ್ತ್ರಿ, ಭರಮಪ್ಪ ನಗರದ, ಶರಣಪ್ಪ ಪಾಟೀಲ, ಹೇಮಪ್ಪಕೋರಿ, ರಾಜೇಶ್, ರಾಮಣ್ಣ ತಳವಾರ್, ಶಿವಪುತ್ರಪ್ಪ ಪೂಜಾರ್, ಗೋವಿಂದಪ್ಪ ಪೂಜಾರ್, ನಾಗಪ್ಪ ಪೂಜಾರ್, ಯಲ್ಲಪ್ಪ ಚೂರಿ, ಪರಸಪ್ಪ ಉಮಚಗಿ, ಈರಯ್ಯ ಕನ್ಯಾಳ, ರಮೇಶ್ ತಳಗೇರಿ, ದೇವಪ್ಪ ಪೂಜಾರ, ಮಂಜಪ್ಪ ಹಳ್ಳಿ, ನಾಗರಾಜ ಹಳ್ಳಿಕೇರಿ, ಕೊಟ್ರಪ್ಪ ಕಕ್ಕೂರ ಮುಂತಾದವರು ಪಾಲ್ಗೊಂಡಿದ್ದರು.  

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top