ಭೀಮ್ ಪೇಮೆಂಟ್ಸ್ ಆ್ಯಪ್‍ನಲ್ಲಿ ಈಗ ಸಿಬಿಲ್ ಕ್ರೆಡಿಟ್ ಸ್ಕೋರ್

Upayuktha
0


ಮಂಗಳೂರು: ಭಾರತದ ಪ್ರಮುಖ ಕ್ರೆಡಿಟ್ ಮಾಹಿತಿ ಸಂಸ್ಥೆಯಾದ ಟ್ರಾನ್ಸ್‍ಯೂನಿಯನ್ ಸಿಬಿಲ್ ಇಂದು ಎಸ್‍ಪಿಸಿಐ ಸರ್ವೀಸಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ಭಾರತದ ಸ್ವದೇಶಿ ಪಾವತಿ ಆ್ಯಪ್ ಆಗಿರುವ ಭೀಮ್ ಪೇಮೆಂಟ್ಸ್ ಆ್ಯಪ್‍ನಲ್ಲಿ ಗ್ರಾಹಕರ ಸಿಬಿಲ್ ಸ್ಕೋರ್ ಮತ್ತು ಕ್ರೆಡಿಟ್ ಮಾಹಿತಿ ವರದಿಯನ್ನು ಏಕೀಕರಿಸಿರುವುದಾಗಿ ಘೋಷಿಸಿದೆ.


ಈ ಮೂಲಕ ಭೀಮ್ ಆ್ಯಪ್ ಬಳಕೆದಾರರು ತಮ್ಮ ಸಿಬಿಲ್ ಸ್ಕೋರ್ ಮತ್ತು ಪ್ರಮುಖ ಸಾಲ ಮಾಹಿತಿಯನ್ನು ಆ್ಯಪ್‍ನಲ್ಲೇ ಸುರಕ್ಷಿತವಾಗಿ ವೀಕ್ಷಿಸಿ ಟ್ರ್ಯಾಕ್ ಮಾಡಬಹುದಾಗಿದೆ. ಈ ವಿನೂತನ ಸೌಲಭ್ಯ ಅವರಿಗೆ ತಮ್ಮ ಕ್ರೆಡಿಟ್ ಆರೋಗ್ಯದ ಬಗ್ಗೆ ಹೆಚ್ಚಿನ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ. ನಿಯಂತ್ರಣಾತ್ಮಕ ಮಾರ್ಗಸೂಚಿಗಳಿಗೆ ಅನುಗುಣವಾಗಿ ಈ ಏಕೀಕರಣವು ಗ್ರಾಹಕರ ಅನುಮತಿ ಆಧಾರಿತ ಮಾದರಿಯನ್ನು ಅನುಸರಿಸಿದೆ. ಅಂದರೆ ಬಳಕೆದಾರರ ಅನುಮತಿಯ ಬಳಿಕವೇ ಕ್ರೆಡಿಟ್ ಮಾಹಿತಿಗೆ ಪ್ರವೇಶ ನೀಡುವುದರಿಂದ ಹೆಚ್ಚಿನ ಪಾರದರ್ಶಕತೆ ಹಾಗೂ ನಿಯಂತ್ರಣವನ್ನು ಇದು ಖಾತರಿಪಡಿಸುತ್ತದೆ ಎಂದು ಸಿಬಿಲ್ ಎಂಡಿ ಹಾಗೂ ಸಿಇಓ ಭವೇಶ್ ಜೈನ್ ಮತ್ತು ಭೀಮ್ ಆ್ಯಪ್ ಸಂಸ್ಥೆಯ ಎಂಡಿ ಹಾಗೂ ಸಿಇಓ ಲಲಿತಾ ನಟರಾಜ್ ಪ್ರಕಟಣೆಯಲ್ಲಿ ಹೇಳಿದ್ದಾರೆ.


ಭೀಮ್ ಆ್ಯಪ್‍ನಲ್ಲಿ ಸಿಬಿಲ್ ಸ್ಕೋರ್ ಲಭ್ಯವಾಗುವುದರಿಂದ ಗ್ರಾಹಕರಿಗೆ ಕ್ರೆಡಿಟ್ ಜಾಗೃತಿ ಮೂಡಿಸುವ ಜತೆಗೆ ದೈನಂದಿನ ಹಣಕಾಸು ಚಟುವಟಿಕೆಗಳನ್ನು ಸಮರ್ಪಕವಾಗಿ ನಿಭಾಯಿಸಲು ಸಾಧ್ಯವಾಗಲಿದೆ. ಗ್ರಾಹಕರು ವಿಶ್ವಾಸಾರ್ಹ ಕ್ರೆಡಿಟ್ ಮಾಹಿತಿಯನ್ನು ಸುಲಭ ಹಾಗೂ ಸುರಕ್ಷಿತವಾಗಿ ತಮ್ಮ ಪರಿಚಿತ ವ್ಯವಸ್ಥೆಯಲ್ಲೇ ಪಡೆಯುವುದರಿಂದ, ಹೆಚ್ಚಿನ ಅರಿವು ಹೊಂದಿ ಹಣಕಾಸು ನಿರ್ಧಾರಗಳನ್ನು ಕೈಗೊಳ್ಳಲು ಸಹಾಯವಾಗಲಿದೆ ಎಂದು ವಿವರಿಸಿದ್ದಾರೆ.


ಈ ವೈಶಿಷ್ಟ್ಯವು ಭೀಮ್ ಪಾವತಿ ಆ್ಯಪ್‍ನ 4.0.19 ಹಾಗೂ ಅದಕ್ಕಿಂತ ಮೇಲಿನ ಆವೃತ್ತಿಗಳಲ್ಲಿ ಲಭ್ಯವಿದೆ.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top